ನವ ದೆಹಲಿ : ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಸೋಂಕಿನ ಹಠಾತ್ ಏರಿಕೆಯ ಕಾರಣದಿಂದಾಗಿ ನಿನ್ನೆ(ಸೋಮವಾರ, ಏ. 19) ಅಲ್ಲಿನ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಒಂದು ವಾರಗಳ ಲಾಕ್ ಡೌನ್ ಘೋಷಿಸಿದ್ದಾರೆ.
ನಿನ್ನೆ ದೆಹಲಿಯಲ್ಲಿ ಲಾಕ್ ಡೌನ್ ಹೇರಿಕೆಯಾದ ಬೆನ್ನಲ್ಲೆ ಜವಹರಲಾಲ್ ನೆಹರು ವಿಶ್ವ ವಿದ್ಯಾಲಯದಲ್ಲೂ ಕೂಡ ವಿಶೇಷ ಕೋವಿಡ್ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
ವಿಶ್ವ ವಿದ್ಯಾಲಯದ ಕ್ಯಾಂಪಸ್ ನೊಳಗೆ ಇರುವ ಎಲ್ಲಾ ಉಪಹಾರ ಗ್ರಹಗಳಲ್ಲಿ ಕೂತು ಉಪಹಾರ ಸೇವಿಸುವುದಕ್ಕೆ ಅವಕಾಶವಿಲ್ಲ, ಪಾರ್ಸೆಲ್ ಗೆ ಹಾಗೂ ಹೋಮ್ ಡೆಲಿವರಿಗೆ ಅವಕಾಶವನ್ನು ನೀಡಿ ಆದೇಶ ಹೊರಡಿಸಿದೆ.
ಓದಿ : ಕೋವಿಡ್ ಸೋಂಕಿನಿಂದ ಮೃತ ಪಟ್ಟ ವ್ಯಕ್ತಿಯ ಅಂತ್ಯ ಸಂಸ್ಕಾರ ಮಾಡಿದ ಮುಸ್ಲೀಂ ಸಹೋದರರು!
Related Articles
ವಸತಿ ನಿಲಯಗಳು, ಹಾಸ್ಟೆಲ್ ಗಳಿಗೆ ಕಟ್ಟು ನಿಟ್ಟಾದ ನಿಯಮಗಳನ್ನು ಹೊರಡಿಸಿದ್ದು, ಒಂದು ಹಾಸ್ಟೆಲ್ ನಿಂದ ಇನ್ನೊಂದು ಹಾಸ್ಟೆಲ್ ಗೆ ಪ್ರವೇಶಿಸುವಂತಿಲ್ಲ ಎಂದು ವಿದ್ಯಾರ್ಥಿಗಳಿಗೆ, ಸಿಬ್ಬಂದಿಗಳಿಗೆ ವಿಶ್ವವಿದ್ಯಾಲಯ ತಿಳಿಸಿದೆ.
ಕ್ರೀಡಾಂಗಣ ಅಥವಾ ರಸ್ತೆಯಲ್ಲಿ ವಾಕಿಂಗ್, ಓಟ, ಅಥವಾ ಜಾಗಿಂಗ್ ಜೊತೆಗೆ ಕ್ಯಾಂಪಸ್ ನಲ್ಲಿ ಯಾವುದೇ ಸಾಮೂಹಿಕ ಸಭೆ ನಿಷೇಧಿಸಲಾಗಿದೆ.
ಸೋಮವಾರ, ವಾರ್ಸಿಟಿ ಕೇಂದ್ರ ಗ್ರಂಥಾಲಯವನ್ನು ವಾರದ ಲಾಕ್ ಡೌನ್ ಅವಧಿಯವರೆಗೆ ಮುಚ್ಚುವಂತೆ ಘೋಷಿಸಿದೆ.
ಮಾನ್ಯತೆ ಹೊಂದಿರುವ ಗುರುತಿನ ಚೀಟಿಯ ಾಧಾರದ ಮೇಲೆ ಕರ್ಫ್ಯೂ ಅವಧಿಯಲ್ಲಿ ತುರ್ತು ಮತ್ತು ಅಗತ್ಯ ಸೇವೆಗಳು, ವೈದ್ಯಕೀಯ ತುರ್ತುಸ್ಥಿತಿ ಮತ್ತು ಸರಕುಗಳ ಪೂರೈಕೆಗಾಗಿ ತೊಡಗಿರುವವರಿಗೆ ಮಾತ್ರ ಓಡಾಟಕ್ಕೆ ಅನುಮತಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಗೆ ವಿಶ್ವವಿದ್ಯಾಲಯ ತಿಳಿಸಿದೆ.
ಇನ್ನು, ಭದ್ರತೆ ಮತ್ತು ಸಾರಿಗೆ, ವಿಶ್ವವಿದ್ಯಾಲಯ ಆರೋಗ್ಯ ಕೇಂದ್ರ, ಶೈಕ್ಷಣಿಕ ಶಾಖೆ, ಆಡಳಿತ ಶಾಖೆ, ಹಣಕಾಸು ವಿಭಾಗಗಳು, ಎಂಜಿನಿಯರಿಂಗ್ (ವಿದ್ಯುತ್ / ಸಿವಿಲ್), ನೈರ್ಮಲ್ಯ, ಸಂವಹನ ಮತ್ತು ಮಾಹಿತಿ ಸೇವೆಗಳು ಮತ್ತು ಕೇಂದ್ರ ಪ್ರಯೋಗಾಲಯದ ಪ್ರಾಣಿ ಸಂಶೋಧನೆ ಸೇರಿದಂತೆ ಅಗತ್ಯ ಸೇವಾ ವಿಭಾಗಗಳು ಈ ಅವಧಿಯಲ್ಲಿ ಕಾರ್ಯನಿರ್ವಹಿಸಲಿವೆ.
“ಕೋವಿಡ್ ಸೋಂಕು ನಿಯಂತ್ರಣ ಮಾಡುವ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶಗಳಲ್ಲಿ ಬ್ಯಾರಿಕೇಡ್ ನ್ನು ಹಾಕಲು” ಭದ್ರತಾ ಸಿಬ್ಬಂದಿಗೆ ವಿಶ್ವ ವಿದ್ಯಾಲಯ ಸೂಚನೆ ನೀಡಿದೆ.