Advertisement

ಮಾಶಾಳ ಹಾಲು ಉತ್ಪಾದಕರ ಸಂಘಕ್ಕೆ ಜ್ಞಾನೇಶ್ವರಿ ಅಧ್ಯಕ್ಷೆ

12:35 PM Dec 10, 2021 | Team Udayavani |

ಅಫಜಲಪುರ: ತಾಲೂಕಿನ ಮಾಶಾಳ ಗ್ರಾಮದ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಜ್ಞಾನೇಶ್ವರಿ ಪಾಟೀಲ, ಉಪಾಧ್ಯಕ್ಷೆಯಾಗಿ ಸಹನೀಯ ಪಠಾಣ ನೇಮಕವಾಗಿದ್ದಾರೆ.

Advertisement

ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಜ್ಞಾನೇಶ್ವರಿ ಪಾಟೀಲ ಮಾತನಾಡಿ, ಮಹಿಳೆಯರನ್ನು ಕೀಳಾಗಿ ಕಾಣುವ ಪ್ರವೃತ್ತಿ ಬದಲಾಗಬೇಕು. ತೊಟ್ಟಿಲು ತೂಗುವ ಕೈ ದೇಶವಾಳಬಲ್ಲದು ಎಂಬುದನ್ನು ನಾವು ತೋರಿಸಿಕೊಟ್ಟಿದ್ದೇವೆ. ಹೀಗಾಗಿ ನಮಗೆ ಅನುಕಂಪ ಬೇಕಾಗಿಲ್ಲ. ಅವಕಾಶ ನೀಡಿದರೆ ಸಾಮರ್ಥ್ಯ ತೋರಿಸುತ್ತೇವೆ. ಮಾಶಾಳ ಹಾಲು ಉತ್ಪಾದಕ ಸಹಕಾರ ಸಂಘವನ್ನು ಉನ್ನತಿಯತ್ತ ಕೊಂಡೊಯ್ಯುವುದು ತಮ್ಮ ಗುರಿಯಾಗಿದೆ ಎಂದರು.

ತಾಪಂ ಮಾಜಿ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ, ಮಾಜಿ ಸದಸ್ಯ ರಾಜಕುಮಾರ ಬಬಲಾದ ಮಾತನಾಡಿ, ಮಹಿಳೆಯರಿಗೆ ಸ್ವ- ಗೌರವ ಇರಬೇಕು. ಸ್ವಾಭಿಮಾನ ಬೇಳೆಸಿಕೊಳ್ಳಬೇಕು. ನಾವು ಅವರಿಗೆ ಸಮಾನವಾದ ಅವಕಾಶ ಕೊಟ್ಟರೆ ಅವರ ಸಾಮರ್ಥ್ಯ ಸಾಬೀತು ಮಾಡುತ್ತಾರೆ. ಈ ಹಾಲುತ್ಪಾದಕ ಸಂಘ ಬಹಳ ಉನ್ನತ ಸ್ಥಾನದಲ್ಲಿ ಬೆಳೆಯಬೇಕು. ಗ್ರಾಮದ ರೈತರು ಹೈನುಗಾರಿಕೆಯತ್ತ ಹೆಚ್ಚು ಆಸಕ್ತಿ ತೋರಬೇಕು. ಸರ್ಕಾರದ ಸಹಕಾರ ಪಡೆದು ಎಮ್ಮೆ, ಆಕಳು ಸಾಕಿ ಹೈನುಗಾರಿಕೆ ಮಾಡಬೇಕು ಎಂದು ಸಲಹೆ ನೀಡಿದರು.

ಉಪಾಧ್ಯಕ್ಷೆ ಸಹನೀಯ ಪಠಾಣ, ಮುಖಂಡರಾದ ಅಭಿಷೇಕ ಪಾಟೀಲ, ಮಹೇಶ ಪಾಟೀಲ, ಹಣಮಂತ ಬಾರಾಮಣಿ, ಶಿವಲಿಂಗ ಸಕ್ಕರಗಿ, ಪೊನ್ನಪ್ಪ ಢಾಳೆ, ಸುಭಾಷ ಜಾಧವ, ಚಿದಾನಂದ ತಳವಾರ, ಸುಖದೇವ ವಠಾರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next