ಪುಣೆ: ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆ ಪುಣೆ – ಮುಂಬಯಿ ಇದರ ವತಿಯಿಂದ ಮಾ. 30ರಂದು ಸಂಜೆ 5.30ರಿಂದ ಪುಣೆ ಕನ್ನಡ ಸಂಘದ ಶಕುಂತಳಾ ಜಗನ್ನಾಥ ಶೆಟ್ಟಿ ಸಭಾಭವನ, ಕರ್ನಾಟಕ ಸ್ಕೂಲ್, ಗಣೇಶ್ ನಗರ ಇಲ್ಲಿ ಗಾನ ವ್ಯಾಖ್ಯಾನ ಕಾರ್ಯಕ್ರಮವು ವಿವಿಧ ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಹೆಸರಾಂತ ಸಂಗೀತ ವಿದುಷಿ ನಂದಿನಿ ರಾವ್ ಗುಜರ್ ಅವರಿಂದ ಪುರಂದರದಾಸರ ಹಾಗೂ ಕನಕದಾಸರ ಕೀರ್ತನೆಗಳ ಗಾಯನ ಹಾಗೂ ಬಾಕೂìರು ಮಹಾಸಂಸ್ಥಾನದ ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರಿಂದ ದಾಸ ಕೀರ್ತನೆಗಳ ವೈಚಾರಿಕ ವಿಶ್ಲೇಷಣೆ ನಡೆಯಲಿದೆ. ಈ ಸಂದರ್ಭ ವಿದ್ಯಾವಾಚಸ್ಪತಿ ಡಾ| ವಿಶ್ವ ಸಂತೋಷ ಭಾರತಿ ಶ್ರೀಪಾದರಿಂದ ಆಧ್ಯಾತ್ಮಿಕ ಪ್ರವಚನ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪುಣೆ ಬಂಟರ ಸಂಘದ ಗೌರವಾಧ್ಯಕ್ಷ ಓಣಿಮಜಲು ಜಗನ್ನಾಥ ಶೆಟ್ಟಿ, ಪುಣೆ ಕನ್ನಡ ಸಂಘದ ಅಧ್ಯಕ್ಷ ಕುಶಲ್ ಹೆಗ್ಡೆ, ಪುಣೆ ಬಂಟರ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ ಇನ್ನ ಕುರ್ಕಿಲ್‌ಬೆಟ್ಟು, ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿ ಇದರ ಗೌರವಾಧ್ಯಕ್ಷ ಸಿಎ ಶಂಕರ್ ಶೆಟ್ಟಿ, ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆ ಮುಂಬಯಿ ಇದರ ಅಧ್ಯಕ್ಷರಾದ ಡಾ| ಸತ್ಯಪ್ರಕಾಶ್ ಶೆಟ್ಟಿ, ಬೆಳಗಾವಿ ಬಂಟರ ಸಂಘದ ಮಾಜಿ ಅಧ್ಯಕ್ಷ ಹಾಗೂ ಬಾಕೂìರು ಮಹಾ ಸಂಸ್ಥಾನದ ವಿಶ್ವಸ್ತರಾದ ವಿಟuಲ್ ಹೆಗ್ಡೆ, ಬಾಕೂìರು ಮಹಾಸಂಸ್ಥಾನದ ಮಹಾ ಪೋಷಕರಾದ ಕರುಣಾಕರ ಎಂ. ಶೆಟ್ಟಿ, ಪಿಂಪ್ರಿ -ಚಿಂಚಾÌಡ್ ಬಂಟರ ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಶೆಟ್ಟಿ, ಬಂಟ್ಸ್ ಅಸೋಸಿಯೇಶನ್ ಪುಣೆ ಮಾಜಿ ಅಧ್ಯಕ್ಷ ಜಯ ಶೆಟ್ಟಿ ಮಿಯ್ನಾರ್, ಮಜೂರು ದೊಡ್ಡಮನೆ ಫ್ಯಾಮಿಲಿ ವೆಲ್ಫೆàರ್ ಅಸೋಸಿಯೇಶನ್ ಅಧ್ಯಕ್ಷರಾದ ಕಟ್ಟಿಂಗೇರಿಮನೆ ಸುಭಾಶ್ಚಂದ್ರ ಹೆಗ್ಡೆ, ಪುಣೆ ತುಳುಕೂಟದ ಅಧ್ಯಕ್ಷ ತಾರಾನಾಥ
ರೈ ಮೇಗಿನಗುತ್ತು ಭಾಗವಹಿಸಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಖ್ಯಾತ ನೃತ್ಯ ನಿರ್ದೇಶಕಿ ಅರುಂಧತಿ ಪಟವರ್ಧನ್ ಮತ್ತು ಬಳಗದಿಂದ ಭರತನಾಟ್ಯ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ. ಕಾರ್ಯಕ್ರಮದ ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಪುಣೆಯ ತುಳು-ಕನ್ನಡಿಗರು ಪಾಗೊಂಡು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸುವಂತೆ ಜ್ಞಾನಭಾರತಿ ಆಧ್ಯಾತ್ಮಿಕ ವೇದಿಕೆಯ ಪದಾಧಿಕಾರಿಗಳು ಪ್ರಕಟನೆಯಲ್ಲಿ ತಿಳಿಸಿದ್ದಾರೆ.