Advertisement
ಇದುವರೆಗೆ ಅತ್ಯಂತ ಹೆಚ್ಚು ಪ್ರಕರಣ ಗಳಿದ್ದ ಕೇರಳದಲ್ಲಿ ಈಗ 148 ಕೇಸು ಗಳಿದ್ದು, ಆ ರಾಜ್ಯ ದ್ವಿತೀಯ ಸ್ಥಾನ ಪಡೆದು ಕೊಂಡಿದೆ. ಗೋವಾದಲ್ಲಿ 47, ಗುಜರಾತ್‌ನಲ್ಲಿ 36, ಮಹಾರಾಷ್ಟ್ರದಲ್ಲಿ 32, ತಮಿಳುನಾಡಿನಲ್ಲಿ 26, ದಿಲ್ಲಿಯಲ್ಲಿ 15 ಪ್ರಕರಣಗಳು ದೃಢಪಟ್ಟಿವೆ. ದಿನವಹಿ ಪ್ರಕರಣಕ್ಕೆ ಸಂಬಂಧಿಸಿ ದೇಶದಲ್ಲಿ ಸಕ್ರಿಯ ಸೋಂಕು ಸಂಖ್ಯೆ 4,440ಕ್ಕೆ ಏರಿಕೆಯಾಗಿದ್ದು, ಐವರು ಅಸುನೀಗಿದ್ದಾರೆ. ಈ ಪೈಕಿ ಕೇರಳದಲ್ಲಿ ಇಬ್ಬರಿದ್ದಾರೆ. ಹೊಸದಾಗಿ 602 ಪ್ರಕರಣಗಳು ದೃಢಪಟ್ಟಿವೆ.
ಕರ್ನಾಟಕದಲ್ಲಿ ಬುಧವಾರ 260 ಮಂದಿಯಲ್ಲಿ ಕೋವಿಡ್ ದೃಢಪಟ್ಟಿದೆ. ಈ ಪೈಕಿ ಬೆಂಗಳೂರಲ್ಲೇ 134 ಕೋವಿಡ್ ಕೇಸುಗಳಿವೆ. ಕೊಪ್ಪಳದಲ್ಲಿ ಓರ್ವರು ಮೃತಪಟ್ಟಿದ್ದಾರೆ. 7,497 ಮಂದಿಗೆ ಸೋಂಕು ಪತ್ತೆ ಪರೀಕ್ಷೆ ಮಾಡಲಾಗಿದ್ದು, ಶೇ. 3.46 ಪಾಸಿಟಿವಿಟಿ ದರ ದಾಖ ಲಾಗಿದೆ. 228 ಮಂದಿ ಕೋವಿಡ್ ಮುಕ್ತರಾಗಿದ್ದಾರೆ. ಸದ್ಯ 1,175 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ ಹೋಮ್ ಐಸೊಲೇಷನ್‌ನಲ್ಲಿ 1,107 ಮಂದಿ, ಆಸ್ಪತ್ರೆಯಲ್ಲಿ 68, ವೆಂಟಿಲೇಟರ್ ಸಹಿತ ಐಸಿಯುನಲ್ಲಿ ನಾಲ್ವರು ಮತ್ತು ಐಸಿಯುನಲ್ಲಿ 17 ಮಂದಿ ಇದ್ದಾರೆ.