Advertisement

J. P. Nadda: ನುಸುಳುಕೋರರಿಗೆ ಮದ್ರಸಾದಲ್ಲಿ ಆಶ್ರಯ ಕೊಟ್ಟ ಜೆಎಂಎಂ

11:40 PM Nov 17, 2024 | Team Udayavani |

ಬೊಕಾರೋ: ಹೇಮಂತ್‌ ಸೊರೇನ್‌ ನೇತೃತ್ವದ ಝಾರ್ಖಂಡ್‌ ಸರಕಾರ ಬಾಂಗ್ಲಾದೇಶಿ ನುಸುಳುಕೋರರಿಗೆ ಮದ್ರಸಾಗಳಲ್ಲಿ ಆಶ್ರಯ ಕಲ್ಪಿಸು ತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ.

Advertisement

ಬೊಕಾರೋದಲ್ಲಿ ನಡೆದ ರ್‍ಯಾಲಿಯಲ್ಲಿ ಮಾತನಾಡಿದ ನಡ್ಡಾ, “ಕೇಂದ್ರ ಗುಪ್ತಚರ ಸಂಸ್ಥೆಗಳು ನೀಡಿದ ಮಾಹಿತಿ ಯಂತೆ ಜೆಎಂಎಂ ಸರಕಾರ ಅಕ್ರಮ ನುಸುಳು ಕೋರರಿಗೆ ಆಶ್ರಯ ನೀಡಿದೆ.

ಅವರಿಗೆ ಆಧಾರ್‌, ಮತದಾರರ ಚೀಟಿ, ಅಡುಗೆ ಅನಿಲ ಸಂಪರ್ಕ, ಜಮೀನು ನೀಡಿದೆ ಎಂಬ ಅಂಶ ಖಚಿತ ವಾಗಿದೆ’ ಎಂದು ಆರೋಪಿಸಿದರು. ಹೇಮಂತ್‌ ಸೊರೇನ್‌ ಭೂಮಿ ಲೂಟಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next