Advertisement

ಜೆಎಂಬಿ ಉಗ್ರರಿಂದ ಬೆಂಗಳೂರಲ್ಲಿ ರಾಕೆಟ್ ಬಾಂಬ್‌ ತಯಾರಿ!

03:06 AM Jul 10, 2019 | sudhir |

ಬೆಂಗಳೂರು: ಜಮಾತ್‌ ಉಲ್ ಮುಜಾಹಿದೀನ್‌ ಬಾಂಗ್ಲಾದೇಶ್‌(ಜೆಎಂಬಿ) ಉಗ್ರರು ಬೆಂಗಳೂರಿನಲ್ಲೇ ಅತ್ಯಂತ ಅಪಾಯಕಾರಿ ರಾಕೆಟ್ ಬಾಂಬ್‌ ಮತ್ತಿತರ ಸ್ಫೋಟಕಗಳನ್ನು ತಯಾರಿಸಿ ಭಯೋತ್ಪಾದನ ಕೃತ್ಯಗಳನ್ನು ಎಸಗಲು ಸಂಚು ರೂಪಿಸಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

Advertisement

ಇತ್ತೀಚೆಗಷ್ಟೇ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಬಂಧಿಸಿರುವ ಪಶ್ಚಿಮ ಬಂಗಾಲದ ಬುಧ್ರ್ವಾನ್‌, ಬಿಹಾರದ ಬೋಧಗಯಾ ಸ್ಫೋಟ ಕೃತ್ಯದ ಆರೋಪಿ ಹಬೀಬುರ್‌ ರೆಹಮಾನ್‌ನ ವಿಚಾರಣೆ ವೇಳೆ ಈ ಅಂಶ ಹೊರಬಿದ್ದಿದೆ.

ಬೆಂಗಳೂರು ಹೊರವಲಯದ ಚಿಕ್ಕಬಾಣಾವರದಲ್ಲಿ ಉಗ್ರರು ವಾಸವಿದ್ದ ಮನೆಯಲ್ಲಿ 9 ಎಂ.ಎಂ. ಸ್ಫೋಟಕ, ಸುಧಾರಿತ ಗ್ರೆನೇಡ್‌ ಶೆಲ್, ಪಿಸ್ತೂಲ್, ಸರ್ಕ್ನೂಟ್‌ಗಳು ದೊರೆತಿವೆ. ಅಚ್ಚರಿಯೆಂದರೆ, ಐಇಡಿ/ರಾಕೆಟ್ ತಯಾರಿಸುವ ಇತರ ಸ್ಫೋಟಕ ಸಾಮಗ್ರಿಗಳೂ ದೊರೆತಿವೆ. ರಾಕೆಟ್ ಬಾಂಬ್‌ಗ ಬಳಸುವ 2.5 ಅಡಿ ಉದ್ದದ ಪ್ಲಾಸ್ಟಿಕ್‌ ಪೈಪ್‌ನಂತಹ ವಸ್ತು ಕೂಡ ಪತ್ತೆಯಾಗಿದೆ ಎಂದು ಎನ್‌ಐಎ ಮೂಲಗಳು ತಿಳಿಸಿವೆ.

ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆರೋಪಿಗಳು ಮತ್ತೂಂದು ವಿಧ್ವಂಸಕ ಕೃತ್ಯ ಎಸಗುವುದಕ್ಕೆ ಸಿದ್ಧತೆ ನಡೆಸಿದ್ದರು ಎಂಬುದು ಕಂಡು ಬಂದಿದೆ.

ಮತ್ತಷ್ಟು ಸದಸ್ಯರು?

Advertisement

ಜೆಎಂಬಿ ಉಗ್ರ ಸಂಘಟನೆಯ ಇನ್ನಷ್ಟು ಸದಸ್ಯರು ರಾಜ್ಯ ಮತ್ತು ದೇಶದ ಇತರ ಭಾಗಗಳಲ್ಲಿ ಸಕ್ರಿಯರಾಗಿದ್ದಾರೆ. ಅವರ ಬಳಿ ಅತ್ಯಂತ ಅಪಾಯಕಾರಿ ಸ್ಫೋಟಕಗಳು ಇರುವ ಸಾಧ್ಯತೆಯಿದೆ ಎಂಬ ಮಾಹಿತಿ ಎನ್‌ಐಎತನಿಖೆ ವೇಳೆ ಬಹಿರಂಗವಾಗಿದೆ.

ಎನ್‌ಐಎ ನೀಡಿದ ದೂರಿನಂತೆ ಸೋಲದೇವನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಜಿಎಂಬಿ ಉಗ್ರರಾದ ಹಬೀಬುರ್‌, ಕೌಸರ್‌, ನಾಜೀರ್‌ ಶೇಕ್‌, ನಜ್ರುಲ್ ಇಸ್ಲಾಂ, ಆಸೀಫ್ ಇಕ್ಬಾಲ್, ಆರೀಫ್ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

ರಾಕೆಟ್ ಐಇಡಿ

ಸಾಮಾನ್ಯವಾಗಿ ಸೇನೆ ಐಇಡಿ ಹೊಂದಿರುವ ರಾಕೆಟ್ ಬಾಂಬ್‌ಗಳನ್ನು ಬಳಸುತ್ತದೆ. ಇದೇ ಮಾದರಿಯ ರಾಕೆಟ್ ಬಾಂಬ್‌ಗಳನ್ನು ಭಯೋತ್ಪಾದಕರು ಬಳಸುತ್ತಾರೆ. ಅದಕ್ಕೆ ಪೊಟ್ಯಾಸಿಯಂ ನೈಟ್ರೇಟ್ ಮತ್ತಿತರ ಸ್ಫೋಟಕ ಸಾಮಗ್ರಿಗಳನ್ನು ತುಂಬಿಸಿ ಎತ್ತರದ ಸ್ಥಳದಿಂದ ಹಾರಿಬಿಟ್ಟು ವಿಧ್ವಂಸಕ ಕೃತ್ಯಗಳನ್ನು ಕೈಗೊಳ್ಳುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next