ನವದೆಹಲಿ: ಸರ್ಕಾರಿ ಸಂಸ್ಥೆಯಲ್ಲಿ 22 ವರ್ಷ ಪೂರ್ಣಗೊಳಿಸಿದ ಅಥವಾ 48 ವರ್ಷ ದಾಟಿದ ನಿಷ್ಪ್ರಯೋಜಕ ಅಥವಾ ಕೆಲಸದಲ್ಲಿ ಮುಂದುವರಿಯಲು ಯೋಗ್ಯವಾಗಿಲ್ಲದ ಸಿಬಂದಿಯನ್ನು ಗುರುತಿಸುವ ಪ್ರಕ್ರಿಯೆಯನ್ನು ಆರಂಭಿಸುವಂತೆ ಜಮ್ಮು-ಕಾಶ್ಮೀರ ಸರ್ಕಾರ ಶುಕ್ರವಾರ(ಜುಲೈ16) ಆಡಳಿತ ಕಾರ್ಯದರ್ಶಿಗಳಿಗೆ ಸೂಚಿಸಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಗುಜರಾತ್‌ಗೆ ಸಿಕ್ಕಷ್ಟು ಲಸಿಕೆ ನಮ್ಮ ರಾಜ್ಯಕ್ಕೆ ಸಿಕ್ಕಿದೆಯಾ : ಸರಕಾರಕ್ಕೆ ಡಿಕೆಶಿ ಪ್ರಶ್ನೆ
ಕಳೆದ ವರ್ಷ ಅಕ್ಟೋಬರ್ ನಲ್ಲಿ ಜಮ್ಮು ಮತ್ತು ಕಾಶ್ಮೀರ, ನಾಗರಿಕ ಸೇವಾ ನಿಯಮಗಳ 226(2)ನೇ ವಿಧಿಯನ್ನು ಸರ್ಕಾರ ತಿದ್ದುಪಡಿ ಮಾಡಿತ್ತು. ಇದರಂತೆ ಯಾವುದೇ ಸರ್ಕಾರಿ ಉದ್ಯೋಗಿ (ಆಕೆ/ಆತ)ಯಾಗಿರಲಿ 22 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದರೆ ಅಥವಾ 48 ವರ್ಷ ದಾಟಿದ್ದರೆ ಯಾವುದೇ ಸಂದರ್ಭದಲ್ಲಿಯೂ ನಿವೃತ್ತಿ ಹೊಂದುವ ನಿಬಂಧನೆ ಜಾರಿ ಮಾಡಿತ್ತು.
ಹಣಕಾಸು ಆಯುಕ್ತರು ಹೊರಡಿಸಿರುವ ಅಧಿಸೂಚನೆ ಪ್ರಕಾರ, ಸೂಕ್ತ ಪ್ರಾಧಿಕಾರವು ಯಾವುದೇ ಉದ್ಯೋಗಿ ನಿವೃತ್ತಿ ಹೊಂದಲು ಮೂರು ತಿಂಗಳ ಮೊದಲು ನೋಟಿಸ್ ಅಥವಾ ಮೂರು ತಿಂಗಳ ವೇತನವನ್ನು ನೀಡಬೇಕಾಗುತ್ತದೆ ಎಂದು ತಿಳಿಸಿದೆ.
ನಿಗದಿಪಡಿಸಿದ ಸಮಯವನ್ನು ಅನುಸರಿಸುವ ಮೂಲಕ ಪ್ರತಿಯೊಂದು ಇಲಾಖೆಯ ಸರ್ಕಾರಿ ನೌಕರರ ಕಾರ್ಯಕ್ಷಮತೆಯನ್ನು ಪರಿಶೀಲನೆಗೊಳಪಡಿಸುವ ಕಾರ್ಯ ನಡೆಯಲಿದೆ. 22 ವರ್ಷ ಸೇವೆ ಪೂರ್ಣಗೊಳಿಸಿದ ಮತ್ತು 48 ವರ್ಷ ದಾಟಿದ ನೌಕರರು ಈ ನಿಬಂಧನೆಗೆ ಒಳಪಡಲಿದ್ದಾರೆ ಎಂದು ವರದಿ ಹೇಳಿದೆ.