ಜಮ್ಮು-ಕಾಶ್ಮೀರ: ಜಮ್ಮು-ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ(ಡಿಡಿಸಿ)ಯ ಏಳನೇ ಹಂತದ ಚುನಾವಣೆಯ ಮತದಾನ ಬುಧವಾರ(ಡಿಸೆಂಬರ್ 16, 2020) ಬೆಳಗ್ಗೆ ಆರಂಭಗೊಂಡಿದೆ. ಕಾಶ್ಮೀರ ವಿಭಾಗದ 13 ಸ್ಥಾನಕ್ಕೆ, ಜಮ್ಮು ವಿಭಾಗದ 18 ಸ್ಥಾನಕ್ಕೆ ಮತದಾನ ನಡೆಯುತ್ತಿದೆ.
ಜಮ್ಮು-ಕಾಶ್ಮೀರದ ಡಿಡಿಸಿ (ಜಿಲ್ಲಾ ಅಭಿವೃದ್ಧಿ ಮಂಡಳಿ)ಯ ಏಳನೇ ಹಂತದ ಚುನಾವಣೆಯಲ್ಲಿ 72 ಮಹಿಳೆಯರು ಸೇರಿದಂತೆ ಒಟ್ಟು 298 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.
ಚುನಾವಣಾ ಅಧಿಕಾರಿಗಳ ಪ್ರಕಾರ, ಭಾರೀ ಶೀತಗಾಳಿಯ ನಡುವೆ ಮತದಾನ ಆರಂಭಗೊಂಡಿದ್ದರ ಪರಿಣಾಮ ಮತದಾನ ನಿಧಾನಗತಿಯಲ್ಲಿ ಸಾಗಿರುವುದಾಗಿ ತಿಳಿಸಿದ್ದಾರೆ.
ಕಾಶ್ಮೀರ ಕಣಿವೆಯ ಬಹುತೇಕ ಮತಗಟ್ಟೆಗಳಲ್ಲಿ ಹಾಗೂ ಚೇನಾಬ್ ಕಣಿವೆಯ ಕೆಲವು ಮತಗಟ್ಟೆಗಳಲ್ಲಿ ಬುಧವಾರ ಬೆಳಗ್ಗೆ ಭಾರೀ ಹಿಮಪಾತದಿಂದಾಗಿ ಯಾವುದೇ ಚಟುವಟಿಕೆ ಕಂಡು ಬಂದಿಲ್ಲವಾಗಿತ್ತು. ಜನರು ಮತಗಟ್ಟೆಯತ್ತ ಬರಲು ಹಿಂದೇಟು ಹಾಕಿರುವುದಾಗಿ ವರದಿ ವಿವರಿಸಿದೆ.
ಇದನ್ನೂ ಓದಿ:ಕೇರಳ ಸ್ಥಳೀಯ ಸಂಸ್ಥೆ ಚುನಾವಣೆ: ಕೊಚ್ಚಿಯಲ್ಲಿ ಒಂದು ಮತ ಅಂತರದಿಂದ ಜಯ ಸಾಧಿಸಿದ ಬಿಜೆಪಿ
ಮಧ್ಯಾಹ್ನದ ಹೊತ್ತಿಗೆ ಜನರು ಮತಚಲಾಯಿಸಲು ಆಗಮಿಸುವ ನಿರೀಕ್ಷೆ ಇದ್ದು, 2ಗಂಟೆಗೆ ಮತದಾನ ಮುಕ್ತಾಯವಾಗಲಿದೆ. 7ನೇ ಹಂತದಲ್ಲಿ 6.87 ಲಕ್ಷ ಮತದಾರರು ಮತ ಚಲಾಯಿಸಲಿದ್ದು, 1,852 ಮತಗಟ್ಟೆಯಲ್ಲಿ ಮತದಾನ ನಡೆಯಲಿದೆ ಎಂದು ವರದಿ ತಿಳಿಸಿದೆ.