Advertisement
ಈದ್ ಪ್ರಾರ್ಥನೆ ಮುಗಿಸಿ ಮನೆಗೆ ತೆರಳುತ್ತಿದ್ದ ಝಾಝಿಪೊರಾದ ಫಯಾದ್ ಅಹಮದ್ ಶಾ ಎನ್ನುವ ಪೇದೆಯ ಮೇಲೆ ಉಗ್ರರು ಗುಂಡಿನ ಮಳೆಗೈದು ಪರಾರಿಯಾಗಿದ್ದಾರೆ. ಕೂಡಲೆ ಆಸ್ಪತ್ರೆಗೆ ದಾಖಳಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಅನಂತ್ನಾಗ್ನ ಜಂಗ್ಲತ್ ಮಂಡಿ ಎಂಬಲ್ಲಿ ಈದ್ ಪ್ರಾರ್ಥನೆಯ ಬಳಿಕ ಪ್ರತ್ಯೇಕತಾವಾದಿಗಳು ಪಾಕ್ ಮತ್ತು ಐಸಿಸ್ ಧ್ವಜವನ್ನು ಹಾರಿಸಿದ್ದಾರೆ. ಪೊಲೀಸ್ ಮತ್ತು ಭದ್ರತಾ ಸಿಬಂದಿಗಳ ಮೇಲೆ ಕಲ್ಲು ತೂರಾಟ ನಡೆಸಿ ಹಿಂಸಾಚಾರ ನಡೆಸಿದ್ದಾರೆ. ಇದುವರೆಗೆ ಯಾವುದೇ ಸಾವು ನೋವಿನ ವರದಿಯಾಗಿಲ್ಲ.