ಮುಂಬೈ: ದೇಶದ ಪ್ರತಿಷ್ಠಿತ ಸಿಮೆಂಟ್ ಉತ್ಪಾದನಾ ಕಂಪನಿಯಾದ ಜೆ.ಕೆ.ಸಿಮೆಂಟ್ ನ ಚೀಫ್ ಆಪರೇಟಿಂಗ್ ಆಫೀಸರ್ ((COO) ರಜನೀಶ್ ಕಪೂರ್ ಸೆಪ್ಟೆಂಬರ್ 30ರಂದು ನಿವೃತ್ತಿಯಾಗಿದ್ದರು. ಈ ನಿಟ್ಟಿನಲ್ಲಿ ಅನುಜ್ ಖಾಂಡೆಲ್ ವಾಲ್ ಅವರನ್ನು ಜೆ.ಕೆ.ಸಿಮೆಂಟ್ ಕಂಪನಿಯ ಬ್ಯುಸಿನೆಸ್ ಹೆಡ್ ಆಗಿ ನೇಮಕ ಮಾಡಲಾಗಿದೆ ಎಂದು ಮಂಗಳವಾರ (ಅಕ್ಟೋಬರ್ 03) ಘೋಷಿಸಿದೆ.
ಇದನ್ನೂ ಓದಿ:Earthquake: ನೇಪಾಳದಲ್ಲಿ ಪ್ರಬಲ ಭೂಕಂಪನ: ರಾಷ್ಟ್ರ ರಾಜಧಾನಿಯಲ್ಲೂ ಕಂಪಿಸಿದ ಭೂಮಿ
ರೆಗ್ಯುಲೇಟರಿ ಫೈಲಿಂಗ್ ನಲ್ಲಿ ಕಂಪನಿ ನೀಡಿರುವ ಮಾಹಿತಿ ಪ್ರಕಾರ, ಅನುಜ್ ಖಾಂಡೆಲ್ ವಾಲ್ ಅವರನ್ನು ಜೆಕೆ ಸಿಮೆಂಟ್ ಕಂಪನಿಯ ಬ್ಯುಸಿನೆಸ್ ಹೆಡ್ ಆಗಿ ನೇಮಕ ಮಾಡಲಾಗಿದ್ದು, ಅಕ್ಟೋಬರ್ 16ರಿಂದ ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ ಎಂದು ತಿಳಿಸಿದೆ.
ಅಂಜು ಅವರು ನೇರವಾಗಿ ಸಿಇಒ ಮಾಧವ್ ಕೃಷ್ಣ ಸಿಂಘಾನಿಯ ಅವರಿಗೆ ರಿಪೋರ್ಟ್ ಮಾಡಿಕೊಳ್ಳಲಿದ್ದಾರೆ ಎಂದು ವರದಿ ತಿಳಿಸಿದೆ. ಕಟ್ಟಡ ನಿರ್ಮಾಣದ ಪೀಠೋಪಕರಣಗಳ ಕೈಗಾರಿಕಾ ಕ್ಷೇತ್ರದಲ್ಲಿ ಅಂಜು ಅವರ 20ವರ್ಷಕ್ಕಿಂತಲೂ ಹೆಚ್ಚು ಕಾಲದ ನುರಿತ ಅನುಭವವನ್ನು ಕಂಪನಿ ಇನ್ಮುಂದೆ ಬಳಸಿಕೊಳ್ಳಲಿದೆ ಎಂದು ವರದಿ ತಿಳಿಸಿದೆ.
ನೇಮಕಾತಿ ಕುರಿತು ಕಂಪನಿ ಆಡಳಿತ ನಿರ್ದೇಶಕ ರಾಘವ್ ಪತ್ ಸಿಂಘಾನಿಯಾ ಪ್ರತಿಕ್ರಿಯೆ ನೀಡಿ, ಜೆಕೆ ಕಂಪನಿಯ ಸಿಒಒ ಆಗಿ ಕಾರ್ಯನಿರ್ವಹಿಸಿದ್ದ ರಜನೀಶ್ ಕಪೂರ್ ಅವರ ಲೀಡರ್ ಶಿಪ್ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು. ಕಪೂರ್ ಕಾರ್ಯದಕ್ಷತೆಯ ಪರಿಣಾಮ ಜೆಕೆ ಸಿಮೆಂಟ್ ಕಂಪನಿಯ ಮಾರುಕಟ್ಟೆ ಬೃಹತ್ ಪ್ರಮಾಣದಲ್ಲಿ ವಿಸ್ತರಣೆಯಾಗಿದ್ದು, ಇದಕ್ಕಾಗಿ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.