Advertisement

ಕಾಶ್ಮೀರ ಬಿಜೆಪಿ ನಾಯಕನ ಹೊಸ ಮನೆ ಉಗ್ರರಿಂದ ಸುಟ್ಟು ಭಸ್ಮ

07:31 PM Nov 30, 2017 | Team Udayavani |

ಜಮ್ಮು : ಕಾಶ್ಮೀರದ ಬಿಜೆಪಿ ನಾಯಕರೋರ್ವರು ಸೋಪೋರ್‌ ಪಟ್ಟಣದಲ್ಲಿ ಈಚೆಗೆ ಹೊಸದಾಗಿ ಕಟ್ಟಿದ ಮನೆಯನ್ನು ಉಗ್ರರು ಬೆಂಕಿ ಹಾಕಿ ಸುಟ್ಟು ನಾಶ ಮಾಡಿದ್ದಾರೆ.

Advertisement

ಉಗ್ರರ ಈ ಕೃತ್ಯ ಅತ್ಯಂತ ಖಂಡನೀಯ ಹಾಗೂ ಆಘಾತಕಾರಿಯಾಗಿದೆ ಎಂದು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಸತ್‌ ಶರ್ಮಾ ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 

ಉಗ್ರರು ಮನೆಯನ್ನು ಸುಟ್ಟಾಗ ಮನೆ ಮಾಲಕ, ಬಿಜೆಪಿ ನಾಯಕ (ಕ್ಷೇತ್ರ ಪ್ರಭಾರಿ) ಫಾರೂಕ್‌ ಅಹ್ಮದ್‌ ಮನೆಯಲ್ಲಿರಲಿಲ್ಲ. ದುಷ್ಕರ್ಮಿಗಳು ಫಾರೂಕ್‌ ಅವರಿಗೆ ಅವರ ಬೇರೊಂದು ನಿವಾಸದಲ್ಲೂ ಜೀವ ಬೆದರಿಕೆ ಹಾಕಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next