Advertisement
ನಿಕಟ ಸ್ಪರ್ಧೆ ಇರುವ ಸೂಚನೆ ಬೆನ್ನಲ್ಲೇ , ಲಾಲ್ ಚೌಕ್ನ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಅಭ್ಯರ್ಥಿ ಜುಹೈಬ್ ಯೂಸುಫ್ ಮಿರ್ ಮಾತನಾಡಿ, ಬಿಜೆಪಿಯನ್ನು(BJP) ಅಧಿಕಾರಕ್ಕೇರುವುದರಿಂದ ತಡೆಯಲು ನಮ್ಮ ಪಕ್ಷ ನ್ಯಾಷನಲ್ ಕಾನ್ಫರೆನ್ಸ್-ಕಾಂಗ್ರೆಸ್ (NC-Congress) ಮೈತ್ರಿಯನ್ನು ಬೆಂಬಲಿಸಬಹುದು. ಕಾಶ್ಮೀರದ ವಿಶಿಷ್ಟ ಗುರುತನ್ನು ಕಾಪಾಡಲು ಯಾವುದೇ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಪಕ್ಷ ಸಿದ್ಧವಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಜಾತ್ಯತೀತ ಸರ್ಕಾರವನ್ನು ರಚಿಸುವಲ್ಲಿ ಪಿಡಿಪಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ ಎಂದು ವಿಶ್ವಾಸವಿದೆ’ ಎಂದು ಹೇಳಿದರು.
Related Articles
Advertisement
ಸಮೀಕ್ಷೆಯಲ್ಲೇನಿದೆ?
ಈ ಬಾರಿ ಕಾಂಗ್ರೆಸ್- ಎನ್ಸಿ ಮೈತ್ರಿಯಲ್ಲಿ ಸ್ಪರ್ಧಿಸಿದ್ದರೆ, ಬಿಜೆಪಿ ಹಾಗೂ ಪಿಡಿಪಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಕಾಂಗ್ರೆಸ್ಗೆ ಸಿ ವೋಟರ್ (40-48), ಪೀಪಲ್ಸ್ ಪಲ್ಸ್ (46-50) ಬಹುಮತ ಸಿಗಬಹುದು ಎಂದಿವೆ. ಉಳಿದಂತೆ ದೈನಿಕ್ ಭಾಸ್ಕರ್ 35-40, ಗಲಿಸ್ಥಾನ್ ನ್ಯೂಸ್ 31-36, ಆ್ಯಕ್ಸಿಸ್ ಮೈ ಇಂಡಿಯಾ 35-45 ಸ್ಥಾನಗಳಲ್ಲಿ ಗೆಲ್ಲಬಹುದು ಎಂದಿವೆ. ಬಿಜೆಪಿ ಸಿ ವೋಟರ್ ಪ್ರಕಾರ 27-32, ದೈನಿಕ್ ಭಾಸ್ಕರ್ ಪ್ರಕಾರ 22-26, ಗಲಿಸ್ಥಾನ್ ನ್ಯೂಸ್ 28-30, ಪೀಪಲ್ಸ್ ಪಲ್ಸ್ 23-27 ಮತ್ತು ಆ್ಯಕ್ಸಿಸ್ ಮೈ ಇಂಡಿಯಾ ಪ್ರಕಾರ 23-27 ಸ್ಥಾನ ದೊರೆಯಬಹುದು ಎನ್ನಲಾಗಿದೆ.
ನಿಜವಾಗಿದ್ದ 2014ರ ಸಮೀಕ್ಷೆ2014ರಲ್ಲಿ ಪ್ರಕಟವಾಗಿದ್ದ ಚುನಾವಣೋತ್ತರ ಸಮೀಕ್ಷೆಗಳು ನಿಜವಾಗಿದ್ದವು. ಪಿಡಿಪಿ ಅಧಿಕಾರ ಹಿಡಿಯಲಿದೆ ಎಂದು ಬಹಳಷ್ಟು ಸಮೀಕ್ಷೆಗಳು ಹೇಳಿದ್ದವು. ಆ ಚುನಾವಣೆಯಲ್ಲಿ ಪಿಡಿಪಿ 28, ಬಿಜೆಪಿ 25, ಎನ್ಸಿ 15, ಕಾಂಗ್ರೆಸ್ 12ರಲ್ಲಿ ಜಯ ಗಳಿಸಿತ್ತು.