Advertisement

ಪಾಕ್‌ ಗುಂಡಿನ ದಾಳಿ: ಭಾರತೀಯ ಮೇಜರ್‌, ಇಬ್ಬರು ಸೈನಿಕರು ಬಲಿ

07:25 PM Dec 23, 2017 | udayavani editorial |

ಹೊಸದಿಲ್ಲಿ : ಇಂದು ಶನಿವಾರ ಮಧ್ಯಾಹ್ನ ಜಮ್ಮು ಕಾಶ್ಮೀರದ ಕೇರಿ ವಲಯದಲ್ಲಿ ಪಾಕ್‌ ಸೇನೆ ಗಡಿಯಾಚೆಯಿಂದ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಸೇನೆಯ ಓರ್ವ ಮೇಜರ್‌ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. 

Advertisement

ಗಡಿ ನಿಯಂತ್ರಣ ರೇಖೆಯಲ್ಲಿನ ವಿವಿಧ ಭಾಗಗಳಲ್ಲಿ ಪಾಕ್‌ ಸೇನೆ ಕಳೆದ ಕೆಲ ಸಮಯದಿಂದ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದ್ದು ಭಾರತೀಯ ಸೇನೆಗೆ ಅದಕ್ಕೆ ತಕ್ಕುದಾದ ಉತ್ತರವನ್ನೇ ನೀಡುತ್ತಿದೆ.

ಕೇರಿ ವಲಯದಲ್ಲಿ ನಿಯೋಜಿಸಲ್ಪಟ್ಟಿದ್ದ ಎರಡು ಸಿಕ್ಖ್ ಬೆಟಾಲಿಯನ್‌ ಯೋಧರು ಇಂದು ಶನಿವಾರ ಮಧ್ಯಾಹ್ನ 12.15ರ ಹೊತ್ತಿಗೆ ಸಾಗಿ ಬರುತ್ತಿದ್ದಾಗ ಗಡಿಯಾಚೆಯಿಂದ ಪಾಕ್‌ ಗುಂಡಿನ ದಾಳಿಗೆ ಗುರಿಯಾದರು.

ಪಾಕ್‌ ಶೆಲ್ಲಿಂಗ್‌ಗೆ ಒಬ್ಬ ಮೇಜರ್‌ ಮತ್ತು ಇಬ್ಬರು ಸೈನಿಕರು ಹುತಾತ್ಮರಾದರು; ನಮ್ಮ ಯೋಧರು ಪಾಕ್‌ ಸೇನೆಯ ಗುಂಡಿನ ಹಾಗೂ ಶೆಲ್‌ ದಾಳಿಗೆ ಅತ್ಯಂತ ಪರಿಣಾಮಕಾರಿಯಾದ ಉತ್ತರವನ್ನು ನೀಡಿದರು ಎಂದು ಸೇನಾಧಿಕಾರಿಯೋರ್ವರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next