Advertisement

ಕಾಶ್ಮೀರ : ಸೇನಾ ವಾಹನದ ಮೇಲೆ ಉಗ್ರರ ದಾಳಿ; 3 ಯೋಧರಿಗೆ ಗಾಯ

04:16 PM Apr 01, 2017 | Team Udayavani |

ಶ್ರೀನಗರ : ಜಮ್ಮು ಕಾಶ್ಮೀರದ ಶ್ರೀನಗರದಲ್ಲಿನ ಪಾರಿಂಪೋರಾ – ಪಂಥಾಚೌಕ್‌ ಬೈಪಾಸ್‌ ನಲ್ಲಿ ಆಸ್ಪತ್ರೆ ಸಮೀಪ ಸಾಗುತ್ತಿದ್ದ ಮಿಲಿಟರಿ ವಾಹನಗಳ ಸಾಲಿನ ಮೇಲೆ ಉಗ್ರರು  ಇಂದು ಶನಿವಾರ ಮಧ್ಯಾಹ್ನ 1.15ರ ಹೊತ್ತಿಗೆ ನಡೆಸಿದ  ಹೊಂಚು ದಾಳಿಯಲ್ಲಿ  ಕನಿಷ್ಠ ಮೂವರು ಯೋಧರು ಗಾಯಗೊಂಡಿರುವುದಾಗಿ ವರದಿಯಾಗಿದೆ. 

Advertisement

ಉಗ್ರರ ದಾಳಿಗೆ ಯೋಧರು ಕೂಡಲೇ ಗುಂಡಿನ ಪ್ರತ್ಯುತ್ತರ ನೀಡಿದ್ದಾರೆ. ಆದರೆ ಎರಡೂ ಕಡೆಗಳಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಪೊಲೀಸ್‌ ಅಧಿಕಾರಿಯೋರ್ವರು ಸುದ್ದಿಗಾರರಿಗೆ ತಿಳಿಸಿದ್ದಾರೆ. 

ಬೇಮಿನಾ ದಲ್ಲಿನ ಸ್ಕಿಮ್ಸ್‌ ಆಸ್ಪತ್ರೆ ಸಮೀಪ ಮಿಲಿಟರಿ ವಾಹನಗಳ ಸಾಲು ಸಾಗುತ್ತಿದ್ದಾಗ ಉಗ್ರರು ನಡೆಸಿದ ಗುಂಡಿನ ದಾಳಿಗೆ ಸಾಲಲ್ಲಿದ್ದ ಕೊನೆಯ ವಾಹನವು ಗುರಿಯಾಯಿತು. ಗಾಯಗೊಂಡ ಮೂವರು ಸೇನಾ ಸಿಬಂದಿಗಳನ್ನು ಒಡನಯೇ ಚಿಕಿತ್ಸೆಗಾಗಿ ಸಮೀಪದ ಸರಕಾರಿ ಆಸ್ಪತ್ರೆಗೆ ಸೇರಿಸಲಾಯಿತು. 

ಘಟನೆ ನಡೆದ ಸ್ಥಳವನ್ನು ಭದ್ರತಾ ಪಡೆಗಳು ಎಲ್ಲ ದಿಕ್ಕುಗಳಿಂದ ಸುತ್ತುವರಿದಿದ್ದು ಉಗ್ರರಿಗಾಗಿ ಶೋಧ ಕಾರ್ಯಾಚರಣೆ ಸಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next