Advertisement

ಜಮ್ಮು ಕಾಶ್ಮೀರ : ಪಾಕ್‌ ಪಡೆಗಳ ಗುಂಡಿನ ದಾಳಿಗೆ ಮಹಿಳೆ ಬಲಿ

11:30 AM Aug 12, 2017 | udayavani editorial |

ಕುಪ್‌ವಾರಾ : ಇಂದು ಶನಿವಾರ ನಸುಕಿನ 5.30ರ ವೇಳೆಗೆ ಜಮ್ಮು ಕಾಶ್ಮೀರದ ಮೇಂಧಾರ್‌ ವಲಯದಲ್ಲಿ ಪಾಕ್‌ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ ಪರಿಣಾಮವಾಗಿ 45ರ ಹರೆಯದ ಮಹಿಳೆಯೊಬ್ಬರು ಅಸುನೀಗಿದರು.

Advertisement

ಮೃತ ಮಹಿಳೆಯನ್ನು ರಕಿಯಾ ಬೇಗಂ ಎಂದು ಗುರುತಿಸಲಾಗಿದೆ. ಈಕೆ ಮೇಂಧಾರ್‌ನ ಗೋಲಾತ್‌ ಮೇಲ್ಭಾಗದ ನಿವಾಸಿಯಾಗಿದ್ದಾರೆ ಎಂದು ಮೇಂಧಾರ್‌ ಉಪ ವಿಭಾಗೀಯ ಪೊಲೀಸ್‌ ಅಧಿಕಾರಿ ರಿಯಾಜ್‌ ತಾಂತ್ರೇ ತಿಳಿಸಿದ್ದಾರೆ. 

ಉತ್ತರ ಕಾಶ್ಮೀರದ ಕುಪ್‌ವಾರಾ ಜಿಲ್ಲೆಯ ಕಾಲಾರೂಸ್‌ ಅರಣ್ಯ ಪ್ರದೇಶದಲ್ಲಿನ 42ನೇ ರಾಷ್ಟ್ರೀಯ ರೈಫ‌ಲ್ಸ್‌ ಪಡೆಯ ಮುಖ್ಯ ಕಾರ್ಯಾಲಯವನ್ನು ಗುರಿ ಇರಿಸಿಕೊಂಡು ಪಾಕ್‌ ಪಡೆಗಳು ಶುಕ್ರವಾರ ತಡರಾತ್ರಿ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದವು. 

ಈ ದಾಳಿಯಲ್ಲಿ ಒಬ್ಬ ಭಾರತೀಯ ಯೋಧ ಗಾಯಗೊಂಡಿದ್ದು ಆತನನ್ನು ದ್ರಗ್‌ಮೂಲಾ ಮಿಲಿಟರಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಒಯ್ಯಲಾಗಿದೆ. ಈ ವಲಯದಲ್ಲಿ ಉಗ್ರರ ಶೋಧ ಕಾರ್ಯಾಚರಣೆ ಮುಂದುವರಿದಿದೆ. 

Advertisement

Udayavani is now on Telegram. Click here to join our channel and stay updated with the latest news.

Next