Advertisement

ಜಮ್ಮು-ಕಾಶ್ಮೀರ; ಉಗ್ರರ ಗುಂಡಿಗೆ ಇಬ್ಬರು ಟ್ರಕ್ ಚಾಲಕರು ಬಲಿ, ಟ್ರಕ್ ಗೆ ಬೆಂಕಿ

09:39 AM Oct 26, 2019 | Team Udayavani |

ಜಮ್ಮು-ಕಾಶ್ಮೀರ: ಇಬ್ಬರು ಟ್ರಕ್ ಚಾಲಕರನ್ನು ಉಗ್ರರು ಗುಂಡಿಟ್ಟು ಹತ್ಯೆಗೈದಿರುವ ಘಟನೆ ಜಮ್ಮು-ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ನಡೆದಿದೆ. ದಾಳಿಯಲ್ಲಿ ಮತ್ತೊಬ್ಬ ಚಾಲಕ ಗಾಯಗೊಂಡಿದ್ದು, ಟ್ರಕ್ ಅನ್ನು ಬೆಂಕಿಹಚ್ಚಿ ಸುಟ್ಟು ಹಾಕಿರುವುದಾಗಿ ವರದಿ ತಿಳಿಸಿದೆ.

Advertisement

ಇಬ್ಬರು ಟ್ರಕ್ ಚಾಲಕರು ರಾಜಸ್ಥಾನ ಮೂಲದವರಾಗಿದ್ದು, ಮತ್ತೊಬ್ಬ ಚಾಲಕ ಹರ್ಯಾಣ ಮೂಲದವರು. ಗಾಯಗೊಂಡ ಟ್ರಕ್ ಚಾಲಕನನ್ನು ಶ್ರೀನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬರನ್ನು ಇಲಿಯಾಸ್ ಎಂದು ಗುರುತಿಸಲಾಗಿದೆ. ಇನ್ನಿಬ್ಬರ ಗುರುತನ್ನು ಇನ್ನಷ್ಟೇ ಖಚಿತಪಡಿಸಬೇಕಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸರು ಹಾಗೂ ಭದ್ರತಾ ಪಡೆಗಳು ತಕ್ಷಣವೇ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆ ಆರಂಭಿಸಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next