Advertisement

ಜೀಪ್‌ಗೆ ಗುರಾಣಿಯಾದ ಯುವಕ

03:50 AM Apr 15, 2017 | |

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಯುವಕರ ಗುಂಪೊಂದು ಸಿಆರ್‌ಪಿಎಫ್ ಯೋಧರನ್ನು ಪೀಡಿಸಿ, ಅವಮಾನಿಸಿದ ವೀಡಿಯೋ ವೈರಲ್‌ ಆದ ಬೆನ್ನಲ್ಲೇ, ಶ್ರೀನಗರ ಲೋಕಸಭೆ ಚುನಾವಣೆ ದಿನ ಸೇನಾ ಪಡೆಯ ಜೀಪ್‌ ಮುಂಭಾಗ ಯುವಕನೊಬ್ಬನನ್ನು ಕೂರಿಸಿ, ಕಟ್ಟಿಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

Advertisement

ಕಾಶ್ಮೀರದ ಬುಡಗಾಂ ಜಿಲ್ಲೆಯ ಬೀರಾವಾಹ್‌ ಗ್ರಾಮದಲ್ಲಿ ಸಾಗುತ್ತಿದ್ದ ಸೇನಾ ವಾಹನಗಳ ಮುಂಚುಣಿಯಲ್ಲಿದ್ದ ಜೀಪ್‌ ಮುಂಭಾಗದಲ್ಲಿ ಯುವಕನೊಬ್ಬನನ್ನು ಹಗ್ಗದಿಂದ ಕಟ್ಟಲಾಗಿತ್ತು. ಗ್ರಾಮಸ್ಥರ ಕಲ್ಲು ತೂರಾಟಕ್ಕೆ ಪ್ರತಿಯಾಗಿ ಆ ಯುವಕನನ್ನು “ಮಾನವ ಗುರಾಣಿ’ ರೀತಿ ಬಳಸಲಾಗಿರುವ ವೀಡಿಯೋ ಎಲ್ಲೆಡೆ ದೊಡ್ಡ ಸುದ್ದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಮ್ಮು- ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ, ಇತ್ತೀಚೆಗೆ ನಡೆದ ಎರಡೂ ಘಟನೆಗಳು “ಆಘಾತಕಾರಿ’ ಹಾಗೂ “ಅನಿರೀಕ್ಷಿತ’ ವಿದ್ಯಮಾನ ಎಂದಿದ್ದಾರೆ. ಜತೆಗೆ, ಈ ಕುರಿತು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ವಿಸ್ತೃತ ವರದಿ ನೀಡಿ ಎಂದು ಪೊಲೀಸರಿಗೆ ಸೂಚಿಸಿದ್ದಾರೆ “ಘಟನೆ ಅಚ್ಚರಿ ಹುಟ್ಟಿಸಿದೆ. ಈ ಬಗ್ಗೆ ತನಿಖೆ ನಡೆಸಬೇಕು,” ಎಂದು ಜಮ್ಮು-ಕಾಶ್ಮೀರ ಮಾಜಿ ಸಿಎಂ ಒಮರ್‌ಅಬ್ದುಲ್ಲಾ ಹೇಳಿದ್ದಾರೆ.

ಬಾಲಿವುಡ್‌ ಖಂಡನೆ: ಜಮ್ಮು-ಕಾಶ್ಮೀರದ ಚಡೂರದಲ್ಲಿ ಸಿಆರ್‌ಪಿಎಫ್ ಯೋಧರನ್ನು ಕೀಳಾಗಿ ನಡೆಸಿಕೊಂಡ ಘಟನೆಯನ್ನು ಬಾಲಿವುಡ್‌ ನಟರಾದ ಅನುಪಮ್‌ ಖೇರ್‌, ಫ‌ರ್ಹಾನ್‌ ಅಖ್ತರ್‌, ರಣದೀಪ್‌ ಹೂಡಾ, ಬಹುಭಾಷಾ ನಟ ಕಮಲ್‌ ಹಾಸನ್‌ ಸೇರಿ ಹಲವು ನಟರು ಖಂಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next