ಮುಂಬಯಿ: ಏಷ್ಯಾದ ನಂ.1 ಶ್ರೀಮಂತ ಮುಕೇಶ್ ಅಂಬಾನಿ ಮಾಲಿಕತ್ವದ ಜಿಯೋ ದೂರಸಂಪರ್ಕ ಕಂಪನಿ ಮಹತ್ವದ ಹೆಜ್ಜೆಯಿಟ್ಟಿದೆ.
ಗೂಗಲ್‌ನ ಗೂಗಲ್ ಮೀಟ್, ಅಮೆರಿಕ ಮೂಲದ ಝೂಮ್, ಮೈಕ್ರೋಸಾಫ್ಟ್ ನ ಸ್ಕೈಪ್‌ಗೆ ಸೆಡ್ಡು ಹೊಡೆದು ಜಿಯೋಮೀಟ್ ದೃಶ್ಯ ಸಂವಾದ ಆ್ಯಪನ್ನು ಜಿಯೋ ಬಿಡುಗಡೆ ಮಾಡಿದೆ.
ಇದರಲ್ಲಿ ನೀವು 100 ಜನರೊಂದಿಗೆ ಏಕಕಾಲದಲ್ಲಿ ಉಚಿತವಾಗಿ ಸಭೆ ನಡೆಸಬಹುದು. ಕೋವಿಡ್ 19 ಸೋಂಕಿನ ಹಿನ್ನೆಲೆಯಲ್ಲಿ ಮನೆಯಿಂದಲೇ ಕೆಲಸ ಮಾಡುವವರ ಸಂಖ್ಯೆ ಹತ್ತಾರುಪಟ್ಟು ಜಾಸ್ತಿಯಾಗಿದೆ.
ಜೊತೆಗೆ ದೃಶ್ಯ ಸಂವಾದದ ಆ್ಯಪ್‌ಗಳ ಬಳಕೆಯೂ ಏರಿದೆ. ಇಂತಹ ಹೊತ್ತಿನಲ್ಲಿ ಜಿಯೋ ಪಕ್ಕಾ ಭಾರತೀಯ ಆ್ಯಪ್ ಸೃಷ್ಟಿಸಿದೆ.
ಈ ಆ್ಯಪನ್ನು ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಬಳಸಬಹುದು. ಕಂಪ್ಯೂಟರ್‌ನಲ್ಲಾದರೆ ಜಿಯೋಮೀಟ್.ಜಿಯೋ.ಕಾಮ್ ಮೂಲಕ ಲಾಗಿನ್ ಆಗಬೇಕು. ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ಇದನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಪ್ಲೇಸ್ಟೋರ್‌ನಲ್ಲಿ ಇದಕ್ಕೆ 4.6 ರೇಟಿಂಗ್ ಸಿಕ್ಕಿದೆ. ಆ್ಯಪ್‌ಸ್ಟೋರ್‌ನಲ್ಲಿ 4.8 ರೇಟಿಂಗ್ ಸಿಕ್ಕಿದೆ.