Advertisement

“ಫ‌ಸ್ಟ್‌ಡೇ, ಫ‌ಸ್ಟ್‌ ಶೋ’ಆತಂಕ

01:08 AM Aug 14, 2019 | mahesh |

ಹೊಸದಿಲ್ಲಿ: ರಿಲಯನ್ಸ್‌ ಜಿಯೋ ಸಂಸ್ಥೆಯಿಂದ ಮುಂದಿನ ತಿಂಗಳು ಆರಂಭ ಗೊಳ್ಳ ಲಿರುವ ಬ್ರಾಡ್‌ಬ್ಯಾಂಡ್‌ ಸೇವೆಯಡಿ, ಮುಂದಿನ ವರ್ಷದ ಮಧ್ಯದಿಂದ ಜಾರಿಗೆ ಬರಲಿರುವ ಫ‌ಸ್ಟ್‌ ಡೇ ಫ‌ಸ್ಟ್‌ ಶೋ ಸೌಲಭ್ಯದ ಬಗ್ಗೆ ದೇಶದ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳ ದೈತ್ಯ ಸಂಸ್ಥೆಗಳಾದ ಪಿವಿಆರ್‌ ಹಾಗೂ ಐನಾಕ್ಸ್‌ ಸಂಸ್ಥೆಗಳು ಆತಂಕ ವ್ಯಕ್ತಪಡಿಸಿವೆ.

Advertisement

ಫ‌ಸ್ಟ್‌ ಡೇ, ಫ‌ಸ್ಟ್‌ ಶೋ ಸೌಲಭ್ಯವು, ತಲೆ ತಲಾಂತರದಿಂದ ಬಂದಿರುವ ಸಿನಿಮಾ ನೋಡುವ ಸಾಂಪ್ರದಾಯಿಕ ಪರಂಪರೆ ಯನ್ನೇ ನಾಶ ಮಾಡುತ್ತದೆ. ಜತೆಗೆ, ಮನೆ ಯಲ್ಲಿ ಕುಳಿತು ಸಿನಿಮಾ ನೋಡುವುದಕ್ಕೂ, ಚಿತ್ರ ಮಂದಿರಗಳಲ್ಲಿ ನೋಡುವುದಕ್ಕೂ ವ್ಯತ್ಯಾಸ ಗಳಿವೆ ಎಂದಿವೆ. ಜತೆಗೆ ಈಗ ಜಾರಿಯಲ್ಲಿ ರುವಂತೆ, ಚಿತ್ರ ಬಿಡುಗಡೆಯಾದ 8 ವಾರ ಗ ‌ಳವರೆಗೆ ಇತರ ವೇದಿಕೆಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡದ ನಿಯ ಮವನ್ನು ನಿರ್ಮಾಪಕರು ಮುಂದುವರಿಸ  ಬೇಕೆಂದು ಚಿತ್ರ ನಿರ್ಮಾಪಕರನ್ನು ಕೋರಿದೆ.

ಷೇರು ಮೌಲ್ಯ ಏರಿಕೆ: ಜಿಯೋ ಬ್ರಾಡ್‌ಬ್ಯಾಂಡ್‌ನ‌ ಸೇವೆಯ ಬಗ್ಗೆ ಘೋಷಣೆಯಾದ ಮರುದಿನವೇ ಅಂದರೆ, ಮಂಗಳವಾರ ರಿಲಯನ್ಸ್‌ ಕಂಪೆನಿಯ ಷೇರುಗಳ ಮೌಲ್ಯ ಶೇ.10ರಷ್ಟು ಏರಿಕೆಯಾಗಿದೆ. ಇದು, 2009ರ ನಂತರ ರಿಲಯನ್ಸ್‌ ಷೇರುಗಳ ಮೌಲ್ಯದಲ್ಲಿ ಆದ ಅತಿ ದೊಡ್ಡ ಏರಿಕೆ ಎನ್ನಲಾಗಿದೆ. ವೊಡಾ ಫೋನ್‌, ಭಾರ್ತಿ ಏರ್‌ಟೆಲ್‌ ಷೇರುಗಳ ಮೌಲ್ಯ ಕ್ರಮವಾಗಿ ಶೇ. 5 ಮತ್ತು ಶೇ. 4ರಷ್ಟು ಕುಸಿದಿವೆ ಎನ್ನಲಾಗಿದೆ. ಇದೇ ವೇಳೆ, ವ್ಯಾಪಾರ ಸಮರ, ಹಾಂಕಾಂಗ್‌ ಪ್ರತಿಭಟನೆ ಮತ್ತಿತರ ಬೆಳವಣಿಗೆಗಳಿಂದಾಗಿ ಹೂಡಿಕೆ ದಾರರು ಷೇರು ಖರೀದಿಯಲ್ಲಿ ಆಸಕ್ತಿ ವಹಿ ಸದ ಕಾರಣ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಮಂಗಳವಾರ 624 ಅಂಕ ಕುಸಿದು, 37,958ರಲ್ಲಿ ಅಂತ್ಯಗೊಂಡಿದೆ. ನಿಫ್ಟಿ 184 ಅಂಕ ಕುಸಿತ ಕಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next