Advertisement

ವಿಶ್ವದ ಮೊದಲ ನೇಟಿವ್ ವೀಡಿಯೋ ಕಾಲ್ ಅಸಿಸ್ಟೆಂಟ್ ಅನಾವರಣಗೊಳಿಸಿದ “ಜಿಯೋ”

10:29 AM Oct 19, 2019 | Nagendra Trasi |

ನವದೆಹಲಿ: ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ) 2019ರಲ್ಲಿ ರಿಲಯನ್ಸ್ ಜಿಯೋ ಇನ್‌ಫೋ ಕಾಮ್ ಲಿಮಿಟೆಡ್ (ಜಿಯೋ) ಸಂಸ್ಥೆಯು ಪೇಟೆಂಟ್ ಅರ್ಜಿ ಸಲ್ಲಿಸಲಾದ ತನ್ನ ನವೀನ ಸಾಧನೆ  ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಆಧಾರಿತ ವೀಡಿಯೊ ಕಾಲ್ ಅಸಿಸ್ಟೆಂಟ್ (ಬಾಟ್) ಅನ್ನು ಅನಾವರಣಗೊಳಿಸಿದೆ.

Advertisement

ಇದನ್ನು ಬೇರೆ ಯಾವುದೇ ಅಪ್ಲಿಕೇಶನ್ ಅನ್ನು ಇನ್‌ಸ್ಟಾಲ್ ಮಾಡದೆಯೇ 4ಜಿ ದೂರವಾಣಿ ಕರೆಯ ಮೂಲಕ ಸಂಪರ್ಕಿಸಬಹುದಾಗಿದೆ. ಗ್ರಾಹಕ ಸೇವೆ ಹಾಗೂ ಸಂವಹನದ ಸನ್ನಿವೇಶಗಳಲ್ಲಿ ಕ್ರಾಂತಿಕಾರಕ ಬದಲಾವಣೆ ತರಬಲ್ಲ ಸಾಮರ್ಥ್ಯ ಜಿಯೋ ವೀಡಿಯೊ ಕಾಲ್ ಅಸಿಸ್ಟೆಂಟ್‌ಗಿದೆ. ಇದರೊಂದಿಗೆ, ಸುದೀರ್ಘ ಅವಧಿಯ ಕಾಲ್ ಹೋಲ್ಡ್ ಸಂಗೀತ ಅಥವಾ ಐವಿಆರ್‌ನಲ್ಲಿ ಮುಗಿಯುವುದೇ ಇಲ್ಲವೆನಿಸುವ ಕಾಯುವ ಸಮಯ ಇನ್ನು ಗತಕಾಲದ ಸಂಗತಿಗಳಾಗುವುದು ಸಾಧ್ಯವಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗಸಂಸ್ಥೆ ಮತ್ತು ವಿಶ್ವಾದ್ಯಂತ ಸೇವಾ ಪೂರೈಕೆದಾರರಿಗೆ ಮುಕ್ತ ಟೆಲಿಕಾಂ ಪರಿಹಾರಗಳನ್ನು ನೀಡುವಲ್ಲಿ ಮುಂಚೂಣಿಯಲ್ಲಿರುವ ಅಮೆರಿಕಾ ಮೂಲಕ ರ್‍ಯಾಡಿಸಿಸ್ ಸಹಯೋಗದಲ್ಲಿ ಜಿಯೋ ಈ ಕಸ್ಟಮರ್ ಎಂಗೇಜ್‌ಮೆಂಟ್ ವೀಡಿಯೊ ಅಸಿಸ್ಟೆಂಟ್ ಪರಿಹಾರವನ್ನು ಅಭಿವೃದ್ಧಿಪಡಿಸಿದೆ.

ಎಐ ಆಧಾರಿತ ಜಿಯೋ ವೀಡಿಯೊ ಕಾಲ್ ಅಸಿಸ್ಟೆಂಟ್, ತಮ್ಮ ಗ್ರಾಹಕರ ಪುನರಾವರ್ತಿತ ಪ್ರಶ್ನೆಗಳನ್ನು ತ್ವರಿತವಾಗಿ ಮತ್ತು ಶ್ರಮವಿಲ್ಲದೆ ಪರಿಹರಿಸುವ ಮೂಲಕ ವಾಣಿಜ್ಯ ಸಂಸ್ಥೆಗಳು ಮತ್ತು ಇತರ ಬಳಕೆದಾರರಿಗೆ ಹೆಚ್ಚಿನ ಶಕ್ತಿ ನೀಡುತ್ತದೆ ಮತ್ತು ಗ್ರಾಹಕರ ಜೊತೆಗಿನ ಅವರ ಸಂವಹನವನ್ನು ಸುಗಮಗೊಳಿಸುತ್ತದೆ. ಉತ್ತಮ ಗುಣಮಟ್ಟದ ಕಸ್ಟಮರ್ ಎಂಗೇಜ್‌ಮೆಂಟ್ ಅನುಭವವನ್ನು ಪರಿಣಾಮಕಾರಿಯಾಗಿ ಹಾಗೂ ಶ್ರಮವಿಲ್ಲದೆ ನೀಡುವುದಕ್ಕೂ ಇದು ಬ್ರ್ಯಾಂಡ್‌ಗಳಿಗೆ ಸಹಾಯ ಮಾಡುತ್ತದೆ.

ಗ್ರಾಹಕರ ಪ್ರಶ್ನೆಗಳನ್ನು ಕೇಳಲು ಮತ್ತು ಅವುಗಳಿಗೆ ಹೆಚ್ಚು ಸೂಕ್ತವಾದ ರೀತಿಯಲ್ಲಿ ಪ್ರತಿಕ್ರಿಯಿಸಲು ಜಿಯೋ ವೀಡಿಯೊ ಬಾಟ್ ಸಶಕ್ತವಾದ ಎಐ ಆಧಾರಿತ ವೇದಿಕೆಯನ್ನು ಬಳಸುತ್ತದೆ. ಅಲ್ಲದೆ, ಈ ವೇದಿಕೆಯಲ್ಲಿ ವಿಶಿಷ್ಟವಾದ ಸ್ವಯಂ ಕಲಿಕೆಯ ಸಾಮರ್ಥ್ಯವೂ ಇದ್ದು ಉತ್ತರಗಳ ನಿಖರತೆಯನ್ನು ಸುಧಾರಿಸಲು ಅದು ನೆರವಾಗುತ್ತದೆ.

Advertisement

ಜಿಯೋ ಬಾಟ್ ಪ್ಲಾಟ್‌ಫಾರ್ಮ್‌ ಜೊತೆಯಲ್ಲಿರುವ ಸಾಧನವಾದ ಜಿಯೋ ಬಾಟ್ ಮೇಕರ್, ಯಾವುದೇ ಕೋಡಿಂಗ್ ಇಲ್ಲದೆ ಮತ್ತು ಕನಿಷ್ಠ ಶ್ರಮದಿಂದ ತಮ್ಮದೇ ಆದ ಎಐ ಆಧಾರಿತ ಬಾಟ್ ಅನ್ನು ರಚಿಸಲು ಸಣ್ಣ ಉದ್ಯಮಗಳಿಗೆ ಅನುವು ಮಾಡಿಕೊಡುವ ಮೂಲಕ ಎಐ ಅನ್ನು ಎಲ್ಲರಿಗೂ ಎಟುಕುವಂತೆ ಮಾಡುವ ಗುರಿ ಇಟ್ಟುಕೊಂಡಿದೆ.

ಮನುಷ್ಯರೊಡನೆ ಸಂವಾದ ನಡೆಸುವಂತಹ ಅನುಭವ ನೀಡುವ ಜೊತೆಗೆ ಕಸ್ಟಮರ್ ಎಂಗೇಜ್‌ಮೆಂಟ್‌ನ ವಿವಿಧ ಅಗತ್ಯಗಳನ್ನು ಪೂರೈಸಲು ವೀಡಿಯೊ ಬಾಟ್ ಅನ್ನು ವ್ಯಾಪಕವಾಗಿ ಕಸ್ಟಮೈಸ್ ಮಾಡಬಹುದಾಗಿದೆ.

ವೀಡಿಯೊ ಕಾಲ್ ಬಾಟ್‌ ಅಳವಡಿಸಿಕೊಳ್ಳುವ ಬ್ರ್ಯಾಂಡ್‌ಗಳು ಅದಕ್ಕೆ ವಿಶಿಷ್ಟ ಅವತಾರವನ್ನು ನೀಡಬಹುದು. ಈ ಅವತಾರ ಗ್ರಾಹಕ ಸೇವಾ ಪ್ರತಿನಿಧಿ, ಸಿಇಓ, ಬ್ರ್ಯಾಂಡ್ ರಾಯಭಾರಿ ಅಥವಾ ಬ್ರ್ಯಾಂಡಿನ ಆಯ್ಕೆಯ ಬೇರೆ ಯಾವುದೇ ವ್ಯಕ್ತಿ ಅಥವಾ ಪಾತ್ರ ಆಗಿರಬಹುದು. ವೀಡಿಯೊ ಕರೆ ಸಕ್ರಿಯಗೊಳಿಸಿದ ಸಹಾಯವಾಣಿಗೆ ಕರೆ ಮಾಡುವ ಮೂಲಕ ಗ್ರಾಹಕರು ಈ ಎಐ ಆಧಾರಿತ ಗ್ರಾಹಕ ಸೇವಾ ಅವತಾರವನ್ನು ಸಂಪರ್ಕಿಸಬಹುದು. ಬಹುಭಾಷಾ ಸಾಮರ್ಥ್ಯದೊಡನೆ ಬರುವ ಈ ಎಐ ವೀಡಿಯೊ ಕಾಲ್ ಬಾಟ್ ಗ್ರಾಹಕರೊಂದಿಗೆ ತಮ್ಮ ಆಯ್ಕೆಯ ಭಾಷೆಯಲ್ಲಿ ಸಂವಹನ ನಡೆಸಲು ಬ್ರ್ಯಾಂಡ್‌ಗಳಿಗೆ ನೆರವಾಗುತ್ತದೆ.

ಎಐ ಅನ್ನು ಎಲ್ಲರಿಗೂ ಎಟುಕುವಂತೆ ಮಾಡಲು ರ್‍ಯಾಡಿಸಿಸ್ ಸಂಸ್ಥೆಯು ನಮಗೆ ಸಹಾಯ ಮಾಡುತ್ತಿದೆ. 5ಜಿ, ಐಓಟಿ ಮತ್ತು ಓಪನ್ ಸೋರ್ಸ್ ಆರ್ಕಿಟೆಕ್ಚರ್ ಅಳವಡಿಕೆಯ ಕ್ಷೇತ್ರಗಳಲ್ಲಿ ಜಿಯೋ ಜಾಗತಿಕ ನಾವೀನ್ಯತೆ ಮತ್ತು ತಂತ್ರಜ್ಞಾನ ನಾಯಕತ್ವವನ್ನು ಇನ್ನಷ್ಟು ಮುನ್ನಡೆಸಲು ರಾಡಿಸಿಸ್‌ನ ಆವಿಷ್ಕಾರವು ನೆರವಾಗುತ್ತಿದೆ.” ಎಂದು ರಿಲಯನ್ಸ್ ಜಿಯೋ ಇನ್‌ಫೋಕಾಮ್‌ನ ಅಧ್ಯಕ್ಷ ಮ್ಯಾಥ್ಯೂ ಊಮ್ಮೆನ್ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next