ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕ ಸಂಸ್ಥೆಯಾದ ಒಪ್ಪೋ ಇಂಡಿಯಾ ತಮ್ಮ ಹೆಚ್ಚಿನ 5G ಸಾಧನಗಳು ಜಿಯೋದ ಸ್ವತಂತ್ರ 5G ನೆಟ್‌ವರ್ಕ್ ಅನ್ನು ಬೆಂಬಲಿಸುತ್ತವೆ ಎಂದು ಘೋಷಣೆ ಮಾಡಿದೆ.
ತನ್ನ ಹೇಳಿಕೆಯಲ್ಲಿ, Oppo ಕಂಪನಿಯು ರಿಲಯನ್ಸ್ ಜಿಯೋ ಸಹಯೋಗದೊಂದಿಗೆ ನೈಜ 5G ಅನುಭವಕ್ಕಾಗಿ ಅಲ್ಟ್ರಾ ಹೈ ಸ್ಪೀಡ್ ಮತ್ತು ಶೂನ್ಯ ಲೇಟೆನ್ಸಿಯಲ್ಲಿ ಕೆಲಸ ಮಾಡುವ ಡಿವೈಸ್‌ಗಳನ್ನು ರೂಪಿಸಿದೆ ಎಂದು ಹೇಳಿದೆ.
ಒಪ್ಪೋ ಇಂಡಿಯಾ ಬಿಡುಗಡೆ ಮಾಡಿದ ಯಾವುದೇ ಹೊಸ 5G ಸಾಧನವು ಸ್ವತಂತ್ರ ನೆಟ್‌ವರ್ಕ್‌ನಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಒಪ್ಪೋ ತನ್ನ 5G ಸಾಧನಗಳಿಗೆ ಸ್ವತಂತ್ರ 5G ನೆಟ್‌ವರ್ಕ್‌ಗಳನ್ನು ಬೆಂಬಲಿಸುವ ಸಾಫ್ಟ್‌ವೇರ್ ನವೀಕರಣ ಪ್ರಾರಂಭಿಸಿದೆ. ಸಾಫ್ಟ್‌ವೇರ್ ಅನ್ನು ಈಗಾಗಲೇ ರೆನೋ 8, ರೆನೋ 8 ಪ್ರೊ, ರೆನೋ 7, ಎಫ್21 ಪ್ರೊ 5G, ಎಫ್19 ಪ್ರೊ+, ಕೆ10 ಮತ್ತು ಎ53s ಸಾಧನಗಳಲ್ಲಿ ನವೀಕರಿಸಲಾಗಿದೆ. ಇತರ ಮಾದರಿಗಳನ್ನು ಸಹ ಶೀಘ್ರದಲ್ಲೇ ನವೀಕರಿಸಲಾಗುತ್ತದೆ.
ಜಿಯೋ5G ಆರ್ಕಿಟೆಕ್ಚರ್ ನೆಟ್‌ವರ್ಕ್, 4G ನೆಟ್‌ವರ್ಕ್‌ನಲ್ಲಿ ಶೂನ್ಯ ಅವಲಂಬನೆ.
– 700 MHz, 3500 MHz ಮತ್ತು 26 GHz ಬ್ಯಾಂಡ್‌ಗಳನ್ನು ಜಿಯೋ 5g ಒಳಗೊಂಡಿದೆ.