Advertisement

ಜಿಯೋನಲ್ಲಿ ಸಿಲ್ವರ್‌ ಲೇಕ್‌ನಿಂದ 5,665 ಕೋಟಿ ರೂ. ಹೂಡಿಕೆ

01:49 AM May 05, 2020 | Hari Prasad |

ಮುಂಬಯಿ: ಕೆಲವೇ ದಿನಗಳ ಹಿಂದೆ ಮುಕೇಶ್‌ ಅಂಬಾನಿ ಮಾಲಿಕತ್ವದ ಜಿಯೋ ಮೊಬೈಲ್‌ ನೆಟ್‌ವರ್ಕ್‌ನಲ್ಲಿ, ಫೇಸ್‌ಬುಕ್‌ 43,574 ಕೋಟಿ ರೂ.ಗಳನ್ನು ಹೂಡಿಕೆ ಮಾಡಿತ್ತು.

Advertisement

ಅದಾದ ಕೆಲವೇ ದಿನಗಳಲ್ಲಿ ವಿಶ್ವದ ತಾಂತ್ರಿಕ ದೈತ್ಯ ಕಂಪನಿಗಳಲ್ಲೊಂದಾದ ಸಿಲ್ವರ್‌ ಲೇಕ್‌, 5,665.75 ಕೋಟಿ ರೂ. ಹೂಡಿಕೆ ಮಾಡಲು ಒಪ್ಪಿಕೊಂಡಿದೆ.

ಈ ಮೂಲಕ ಶೇ.1.15ರಷ್ಟು ಷೇರು ಖರೀದಿ ಮಾಡಲಿದೆ. ಅಲ್ಲಿಗೆ ಜಿಯೋದಲ್ಲಿ ವಿದೇಶಿ ಕಂಪನಿಗಳ ಪಾಲು ಶೇ.12.5ಕ್ಕೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next