ಚಾಮರಾಜನಗರ: ದೂರವಾಣಿ ಸಂಪರ್ಕ ನೆಟ್ ವರ್ಕ್ ಕಂಪೆನಿ ಜಿಯೋ ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ತನ್ನ 4ಜಿ ಸೇವೆಯನ್ನು ಪ್ರಾರಂಭಿಸಿದೆ.
ಮಲೆ ಮಹದೇಶ್ವರ ಬೆಟ್ಟ ದಟ್ಟ ಅರಣ್ಯ ಶ್ರೇಣಿಯಲ್ಲಿರುವ ಪ್ರಸಿದ್ಧ ಯಾತ್ರಾ ಸ್ಥಳವಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಭಕ್ತರು ಈ ಬೆಟ್ಟಕ್ಕೆ ಭೇಟಿ ನೀಡುತ್ತಾರೆ.ಮಲೆ ಮಹದೇಶ್ವರ ಬೆಟ್ಟದಲ್ಲಿ ಸಮರ್ಪಕ ಮೊಬೈಲ್ ನೆಟ್ ವರ್ಕ್ ಸಂಪರ್ಕ ಇರಲಿಲ್ಲ. ಇದರಿಂದಾಗಿ ಸ್ಥಳೀಯ ಜನರಿಗೆ ಮಾತ್ರವಲ್ಲ, ಬೆಟ್ಟಕ್ಕೆ ಬರುವ ಭಕ್ತಾದಿಗಳಿಗೆ ದೂರವಾಣಿ ಸಂವಹನಕ್ಕೆ ಬಹಳ ತೊಂದರೆಯಾಗಿತ್ತು.
ಇದನ್ನರಿತ ಜಿಯೋ 4ಜಿ ಡಿಜಿಟಲ್ ಸೇವೆಯನ್ನು ಮಲೆ ಮಹದೇಶ್ವರ ಬೆಟ್ಟದಲ್ಲಿ ಆರಂಭಿಸಿದೆ. ಇದರಿಂದ ಆ ಪ್ರದೇಶದ ಜನರು ಸಂವಹನ ಸಾಧಿಸಲು, ವಿದ್ಯಾರ್ಥಿಗಳು ಆನ್ ಲೈನ್ ಪಾಠ ಆಲಿಸಲು, ಯುವ ಜನರು ತಮ್ಮ ಉದ್ಯೋಗಾವಕಾಶಗಳನ್ನು ತಾವಿರುವ ಸ್ಥಳದಿಂದಲೇ ನಿರ್ವಹಿಸಲು ಸಹಾಯಕವಾಗಿದೆ.
ನೆಟ್ ವರ್ಕ್ ಸಮಸ್ಯೆಯಿಂದ ಬೆಟ್ಟಕ್ಕೆ ಬರುವ ಭಕ್ತಾದಿಗಳು ತಮ್ಮ ಮನೆಗಳಿಗೆ ಕರೆ ಮಾಡಲು ಅಥವಾ ಆನ್‍ಲೈನ್ ಸಂಪರ್ಕ ಸಾಧಿಸಲು ಕಷ್ಟಪಡಬೇಕಾಗಿತ್ತು. ಈಗ ಜಿಯೋ 4ಜಿ ನೆಟ್ ವರ್ಕ್ ನಿಂದಾಗಿ ಸುಲಲಿತ ಸಂವಹನಕ್ಕೆ ನೆರವಾಗಿದೆ. ಸ್ಥಳೀಯ ಕುಟುಂಬಗಳಿಗೂ ಸಹ ಇದರಿಂದ ಬಹಳ ಅನುಕೂಲವಾಗಿದೆ. ಇದಕ್ಕಾಗಿ ಸ್ಥಳೀಯರು ಜಿಯೋಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಗ್ರಾಹಕರ ಸಂತೋಷವು ಜಿಯೋದ ಮೂಲಾಧಾರವಾಗಿದೆ. ಮಲೆ ಮಹದೇಶ್ವರ ಬೆಟ್ಟದಂಥ ದುರ್ಗಮ ಪ್ರದೇಶದಲ್ಲಿ ಸಂಪರ್ಕ ನೀಡುವ ಮೂಲಕ ಜಿಯೋ, ಜಿಲ್ಲೆಯಾದ್ಯಂತ ತನ್ನ ದೃಢವಾದ ನೆಟ್‌ವರ್ಕ್ ಅನ್ನು ಮತ್ತಷ್ಟು ಬಲಪಡಿಸಿದೆ. ಮುಂದೆಯೂ ಮಲೆ ಮಹದೇಶ್ವರ ಬೆಟ್ಟದ ಯಾತ್ರಾರ್ಥಿಗಳಿಗೆ ಅಡಚಣೆ ರಹಿತ ಸೇವೆಯನ್ನು ಸದಾ ನೀಡುತ್ತದೆ ಎಂದು ಕಂಪೆನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.