Advertisement
2018ರಲ್ಲಿಯೇ ‘ಜಿಯೋ ಬುಕ್’ ಹೆಸರಿನ ಲ್ಯಾಪ್‍ಟಾಪ್ ಸಿದ್ಧಪಡಿಸಲು ಯೋಜನೆ ರೂಪಿಸಲಾಗಿತ್ತು. ಈ ವಿನೂತನ ಪ್ರಯೋಗಕ್ಕೆ 2019ರಲ್ಲಿ ಚಾಲನೆ ನೀಡಲಾಗಿತ್ತು. ಇದೀಗ ಅತೀ ಕಡಿಮೆ ದರದ ಲಾಪ್ ಟಾಪ್ ಜನರ ಕೈ ಸೇರುವ ಕಾಲ ಸನ್ನಿಹಿತವಾಗಿದೆ.
Related Articles
Advertisement
‘ಜಿಯೋಬುಕ್’ ತನ್ನದೆಯಾದ ಆಪರೇಟಿಂಗ್ ಸಿಸ್ಟಂ ಹೊಂದಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿರುವ ಲ್ಯಾಪ್‍ಟಾಪ್ಗಳು ವಿಂಡೋಸ್ ಬಳಸುತ್ತವೆ. ಆದರೆ,ಇದರ ಬದಲಾಗಿ ಗೂಗಲ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಸಿದ್ಧಪಡಿಸಲಾಗಿದೆ. ಇದನ್ನು ಜಿಯೋ ಒಎಸ್ ಎಂದು ಕರೆಯಲಾಗಿದೆ.
ಚೀನಾ ಕಂಪನಿ ಜತೆ ಒಪ್ಪಂದ :
ಜಿಯೋಬುಕ್ ರಿಲಾಯನ್ಸ್ ಹಾಗೂ ಚೀನಾ ಮೂಲದ ಕಂಪನಿ ಬ್ಲೂಬ್ಯಾಂಕ್ ಸಹಭಾಗಿತ್ವದಡಿ ರೂಪಗೊಳ್ಳುತ್ತಿದೆ. ಬ್ಲೂಬ್ಯಾಂಕ್ ಪ್ರಸಿದ್ಧ ಮೊಬೈಲ್ ಹಾಗೂ ತಂತ್ರಾಂಶ ( ಸಾಫ್ಟ್ ವೇರ್ ) ತಯಾರಿಕಾ ಸಂಸ್ಥೆ. ಮೂರನೇ ವ್ಯಕ್ತಿಗಳಿಗೆ ಸಾಫ್ಟ್ ವೇರ್ ಸಿದ್ಧಪಡಿಸಿ ಮಾರಾಟ ಮಾಡುತ್ತದೆ. ಈ ಸಂಸ್ಥೆ ಜತೆಗೆ ರಿಲಾಯನ್ಸ್ ಒಪ್ಪಂದ ಮಾಡಿಕೊಂಡು ಜಿಯೋಬುಕ್ ವಿನ್ಯಾಸಗೊಳಿಸಿದೆ.
ಮಾರುಕಟ್ಟೆಗೆ ಯಾವಾಗ ?
‘ಜಿಯೋಬುಕ್’ ಮಾರುಕಟ್ಟೆಗೆ ಯಾವಾಗ ಲಗ್ಗೆ ಇಡುತ್ತದೆ ಎನ್ನುವುದರ ಕುರಿತು ಅಂತೆ-ಕಂತೆಗಳು ಹರಿದಾಡಿದ್ದವು. ಆದರೆ, ಇದೀಗ ಅಧಿಕೃತವಾಗಿ ಮಾರುಕಟ್ಟೆಗೆ ಪರಿಚಯಿಸುವ ದಿನಾಂಕ ನಿಗಧಿಯಾಗಿದೆ. ಈ ವರ್ಷದ (2021) ಮೊದಲಾರ್ಧದಲ್ಲಿ ಅಂದರೆ ಜೂನ್ ಇಲ್ಲವೆ ಜುಲೈನಲ್ಲಿ ಗ್ರಾಹಕರ ಕೈ ಸೇರಲಿದೆ ಜಿಯೋಬುಕ್ .