Advertisement

ನಾಳೆಯಿಂದ ಜಿಯೋ ಗಿಗಾ ಫೈಬರ್ ಸೇವೆ ಆರಂಭ

09:47 AM Sep 05, 2019 | Sriram |

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಡೆಟ್ ನ(ಆರ್ ಐಎಲ್) 42ನೇ ವಾರ್ಷಿಕ ಸಭೆಯಲ್ಲಿ ಪ್ರಸ್ತಾವಗೊಂಡಂತೆ ಜಿಯೋ ಗಿಗಾ ಫೈಬರ್ ಸೇವೆ ನಾಳೆ (ಸೆಪ್ಟೆಂಬರ್ 5ರಂದು) ದೇಶಾದ್ಯಂತ ಲಭ್ಯವಾಗಲಿದೆ. ತಿಂಗಳಿಗೆ 700 ರೂಪಾಯಿಗೆ ಪ್ಯಾಕೇಜ್ ಪ್ಲ್ಯಾನ್ ಆರಂಭವಾಗಲಿದೆ. ಅಲ್ಲದೇ ಟಾರಿಫ್ ಫ್ಲ್ಯಾನ್ ಪ್ರಕಾರ 100ಎಂಬಿಪಿಎಸ್ ಮತ್ತು 1 ಜಿಬಿಪಿಎಸ್ ಸ್ಪೀಡ್ ಹೊಂದಿರಲಿದೆ ಎಂದು ತಿಳಿಸಿದೆ.

Advertisement

ಜಿಯೋ ಫೈಬರ್ ಸರ್ವಿಸ್ ನಲ್ಲಿ ಜಿಯೋ ಹೋಮ್ ಫೋನ್ ಸರ್ವಿಸ್ ಕೂಡಾ ಸೇರಿದ್ದು, ಈ ವಯರ್ ಲೆಸ್ ಫೋನ್ ಬಳಸಿ ಸ್ಥಳೀಯ ಮತ್ತು ಎಸ್ ಟಿಡಿ ವೈಸ್ ಕರೆ ಮಾಡಬಹುದಾಗಿದೆ. ಅಷ್ಟೇ ಅಲ್ಲ ಅಂತಾರಾಷ್ಟ್ರೀಯ ಕರೆಯನ್ನು ಗ್ರಾಹಕರು ಕಡಿಮೆ ವೆಚ್ಚಕ್ಕೆ ಮಾಡಬಹುದಾಗಿದೆ. ಏನೆಲ್ಲಾ ಇರಲಿದೆ.


ಜಿಯೋ ಗಿಗಾಫೈಬರ್ ಎಫ್ ಟಿಟಿ ಎಚ್ ಬ್ರಾಡ್ ಬ್ಯಾಂಡ್ ಸೇವೆ ಮೂಲಕ ಡಿಜಿಟಲ್ ಸೆಟಪ್ ಬಾಕ್ಸ್ ಸಂಪರ್ಕ ನಾಳೆಯಿಂದ ದೊರೆಯಲಿದೆ. ಜಿಯೋ ಫೈಬರ್ ವಾರ್ಷಿಕ ಫ್ಲ್ಯಾನ್ ಆಯ್ದುಕೊಂಡಲ್ಲಿ ಗ್ರಾಹಕರಿಗೆ ಎಚ್ ಡಿ 4 ಕೆ ಟಿವಿ, ಸೆಟಪ್ ಬಾಕ್ಸ್ ಉಚಿತವಾಗಿ ನೀಡಲಾಗುತ್ತದೆ ಎಂದು ಅಂದು ನಡೆದ ಸಭೆಯಲ್ಲಿ ತಿಳಿಸಲಾಗಿತ್ತು.

ಸೆ. 5ರ ಮೊದಲ ಹಂತದಲ್ಲಿ ದೇಶದ ಆಯ್ದ ನಗರಗಳನ್ನು ಮಾತ್ರ ಇದಕ್ಕೆ ಸೇಪಡೆಗೊಳಿಸಲಾಗಿದೆ. ದಿಲ್ಲಿ, ಮುಂಬೈ, ಕೊಲ್ಕತ್ತಾ, ಜೈಪುರ, ಹೈದರಾಬಾದ್‌, ಸೂರತ್‌, ವಡೋದರಾ, ಚೆನ್ನೈ, ನೋಯ್ಡಾ, ಘಾಜಿಯಾಬಾದ್‌, ಬುಭನೇಶ್ವರ್‌, ವಾರಣಸಿ, ಅಲಹಾಬಾದ್‌, ಬೆಂಗಳೂರು, ಸೂರತ್‌, ಆಗ್ರಾ, ಮೀರತ್‌,ವಿಝಾಗ್‌, ಲಕ್ನೋ, ಜಮ್ಶೇದ್‌ಪುರ್‌, ಹರಿದ್ವಾರ್‌, ಗಯಾ,ಪಾಟ್ನಾ, ಪೋಟ್‌ಬ್ಲೈರ್‌, ಪಂಜಾಬ್‌ ಸೇರಿದಂತೆ ಕೆಲವು ಇತರ ನಗರಗಳಲ್ಲಿ ಲಭ್ಯವಾಗಲಿದೆ.

ಟೆಲಿಕಾಂ ಸೆಕ್ಟರ್‌ಗೆ ಹೊಡೆತ ಕೊಟ್ಟಿದ್ದ ಜಿಯೋ
ಜಿಯೋ ನೆಟ್‌ವರ್ಕ್‌ಗಳು ಬಂದ ಬಳಿಕ ಬಿಎಸ್‌ಎನ್‌ಎಲ್‌ ಸೇರಿದಂತೆ ಇತರ ಖಾಸಗಿ ನೆಟ್‌ವರ್ಕ್ ಪ್ರೊವೈಡರ್‌ಗಳು ತಮ್ಮ ಗ್ರಾಹಕರನ್ನು ಕಳೆದುಕೊಂಡಿತ್ತು. ಅಲ್ಲಿನ ತನಕ ಏಕ ರೂಪದಲ್ಲಿ ಸಾಗುತ್ತಿದ್ದ ಮೊಬೈಲ್‌ ನೆಟ್‌ವರ್ಕ್‌ಗಳು ಬಳಿಕ ತೀವ್ರ ಪೈಪೋಟಿಯನ್ನು ಎದುರಿಸಿತ್ತು. ಇದರಿಂದ ದರಗಳಲ್ಲಿ ಭಾರೀ ಕಡಿತ ಕಂಡುಬಂದಿತ್ತು. ಇದೀಗ ಮತ್ತೊಮ್ಮೆ ರಿಲಾಯನ್ಸ್‌ ಒಡೆತನದ ಜಿಯೋ ಡಿಟಿಎಚ್‌ ಸೇವೆಗೆ ತಮ್ಮನ್ನು ವಿಸ್ತರಿಸಿದ್ದು, ಮುಂಬರುವ ದಿನಗಳಲ್ಲಿ ಭಾರೀ ಪೈಪೋಟಿಗಳು ಏರ್ಪಡುವ ಸಾಧ್ಯತೆ ಇದೆ. ಈಗಾಗಲೇ ಡಿಟಿಎಚ್‌ ನೆಟ್‌ವರ್ಕ್‌ಗಳು ಮತ್ತು ಕೇಬಲ್‌ ನೆಟ್‌ವರ್ಕ್‌ ಸೇವೆ ನೀಡುವ ಸಂಸ್ಥೆಗಳಿಗೆ ಇದು ಭಾರೀ ಹೊಡೆತ ನೀಡಲಿದೆ. ಜಿಯೋ ಕಡಿಮೆ ದರಕ್ಕೆ ಹಲವು ಸೌಲಭ್ಯವನ್ನು ನೀಡಲಿರುವ ಕಾರಣ ಗ್ರಾಹಕರನ್ನು ತನ್ನತ್ತ ಸೆಳೆಯುವುದು ಖಾತ್ರಿಯಾಗಿದೆ.

ಜಿಯೋ ಫೈಬರ್ ಬೇಕಾದರೆ ಏನು ಮಾಡಬೇಕು?
1. Jio Fiber Registration Website ಗೆ ಭೇಟಿ ಕೊಡಬೇಕು
2. ನೀವು ಇರುವ ಜಾಗದ ಮಾಹಿತಿಯನ್ನು ಪೂರ್ಣ ವಿಳಾಸವನ್ನು ಅಲ್ಲಿ ನಮೂದಿಸಿ.
3. ನಿಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಇ ಮೇಲ್ ಐಡಿ ದಾಖಲಿಸಿ
4. ಇಷ್ಟು ಆದ ಬಳಿಕ ‘Generate OTP’ ’ ಗೆ ಕ್ಲಿಕ್ ಮಾಡಿ
5. ನಿಮ್ಮ ಫೋನ್ಗೆ ಬಂದ OTP ಸಂಖ್ಯೆಯನ್ನು ನಮೂದಿಸಿ
6. ಬಳಿಕ ನೀವು ನೀಡಿರುವ ಮಾಹಿತಿ ಆಧರಿಸಿ ಸಂಸ್ಥೆಯ ಸಂಬಂಧಪಟ್ಟ ಅಧಿಕಾರಿಗಳು ನಿಮ್ಮನ್ನು ಸಂಪರ್ಕಿಸುತ್ತಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next