Advertisement

ಜಿಯೋ ಬಳಸಿ ವೈ-ಫೈ ಮೂಲಕ ಆಡಿಯೋ/ವಿಡಿಯೋ ಕಾಲ್ ಮಾಡಿ

10:12 AM Jan 19, 2020 | Nagendra Trasi |

ಮುಂಬೈ: ತನ್ನ ಗ್ರಾಹಕರಿಗೆ ಇನ್ನಷ್ಟು ಉತ್ತಮ ಉತ್ಪನ್ನಗಳು ಮತ್ತು ಅನುಭವವನ್ನು ನೀಡಲು ಮುಂದಾಗಿರುವ ಜಿಯೋ ರಾಷ್ಟ್ರವ್ಯಾಪಿ ಆಡಿಯೋ ಮತ್ತು ವಿಡಿಯೋ ಓವರ್ ವೈ ಫೈ ಸೇವೆಯನ್ನು ಪ್ರಾರಂಭಿಸಿದೆ. ಪ್ರಾರಂಭದಲ್ಲಿಯೇ ಪ್ರತಿಯೊಬ್ಬ ಗ್ರಾಹಕರಿಗೆ ಉತ್ತಮವಾದ ಸೇವೆ ಒದಗಿಸಲು ಜಿಯೋ ಕಳೆದ ಕೆಲವು ತಿಂಗಳುಗಳಿಂದ ಈ ಸೇವೆಯನ್ನು ಪರೀಕ್ಷಿಸುತ್ತಿತ್ತು ಎಂದು ವರದಿ ತಿಳಿಸಿದೆ.

Advertisement

ಜಿಯೋ ನಿರ್ದೇಶಕ ಆಕಾಶ್ ಅಂಬಾನಿ ಈ ಸೇವೆ ಕುರಿತು ಮಾತನಾಡುತ್ತ, “ಜಿಯೋ ಗ್ರಾಹಕರ ಬಳಕೆಯ ಅನುಭವವನ್ನು ಹೆಚ್ಚಿಸಲು ಮತ್ತು ಅವರ ಸಮಸ್ಯೆಗಳನ್ನು ಪರಿಹರಿಸಲು ನಾವು ಬದ್ದರಾಗಿದ್ದೇವೆ. ಇದಕ್ಕಾಗಿ ನಿರಂತರವಾಗಿ ಹೊಸತನವನ್ನು ಹುಡುಕುತ್ತಿದ್ದೇವೆ. ಈ ಸಮಯದಲ್ಲಿ, ಸರಾಸರಿ ಜಿಯೋ ಗ್ರಾಹಕರು ಪ್ರತಿ ತಿಂಗಳು 900 ನಿಮಿಷಗಳ ಆಡಿಯೋ ಕರೆಗಳನ್ನು ಬಳಸುತ್ತಿದ್ದಾರೆ.

ಮತ್ತು ಈ ಸೇವೆಯನ್ನು ಬಳಕೆ ಮಾಡುವ ಗ್ರಾಹಕರ ಸಂಖ್ಯೆಯೂ ಹೆಚ್ಚುತ್ತಿರುವ ನೆಲೆಯಲ್ಲಿ ಜಿಯೋ ವೈ ಫೈ ಕರೆ ಸೇವೆಯನ್ನು ಪರಿಚಯಿಸುತ್ತಿದೆ. ಇದು ಪ್ರತಿ ಜಿಯೋ ಗ್ರಾಹಕರ ಆಡಿಯೋ ಕರೆ ಅನುಭವವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ಈಗಾಗಲೇ ಒಂದು ಭಾರತದ ಮೊದಲ ಎಲ್ಲ  VoLTE ನೆಟ್‌ವರ್ಕ್‌ನೊಂದಿಗೆ ಉದ್ಯಮಕ್ಕೆ ಬೆಂಚ್‌ ಮಾರ್ಕ್‌ ಆಗಲಿದೆ ಎಂದು ತಿಳಿಸಿದ್ದಾರೆ.

ಜಿಯೋ ವೈ ಫೈ ಕಾಲಿಂಗ್‌ನಿಂದಾಗಿ ಗ್ರಾಹಕರಿಗೆ ದೊರೆಯುವ ಲಾಭಗಳು:

  1. ಗ್ರಾಹಕರು ಯಾವುದೇ ವೈ ಫೈ ನೆಟ್‌ವರ್ಕ್ ಅನ್ನು ಜಿಯೋ ವೈ ಫೈ ಕರೆಗಾಗಿ ಬಳಸಬಹುದು.
  2. ಉತ್ತಮ ಆಡಿಯೋ / ವಿಡಿಯೋ ಕರೆ ಅನುಭವವನ್ನು ನೀಡುವ ಸಲುವಾಗಿ ಆಡಿಯೋ ಮತ್ತು ವೀಡಿಯೊ ಕರೆಗಳು VoLTE  ಮತ್ತು Wi-Fi ನಡುವೆ ಬದಲಾಗುತ್ತದೆ.
  3. ಜಿಯೋ ವೈ ಫೈ ಕರೆ ಹ್ಯಾಂಡ್‌ ಸೆಟ್‌ಗಳ ಅತಿದೊಡ್ಡ ಇಕೋ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.
  4. ಜಿಯೋ ಗ್ರಾಹಕರು ವೈ ಫೈ ಕರೆಗಳನ್ನು ವೀಡಿಯೊ ಮೂಲಕ ಮಾಡಬಹುದು
  5. ಮತ್ತು ಇವುಗಳಿಗಾಗಿ ಗ್ರಾಹಕರು ಯಾವುದೇ ಹೆಚ್ಚುವರಿ ವೆಚ್ಚವನ್ನು ಭರಿಸಬೇಕಾಗಿಲ್ಲ

ಪ್ರಮುಖ ಮಾಹಿತಿ:

Advertisement

*ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ವೈ ಫೈ ಮೂಲಕ ಸ್ಪಷ್ಟ ಆಡಿಯೋ ಮತ್ತು ವೀಡಿಯೊ ಕರೆಗಳನ್ನು ಮಾಡಿ

*ಭಾರತದಲ್ಲಿ ಎಲ್ಲಿಯಾದರೂ ಯಾವುದೇ ವೈ ಫೈನಲ್ಲಿ ಕಾರ್ಯನಿರ್ವಹಿಸುತ್ತದೆ

*150 ಕ್ಕೂ ಹೆಚ್ಚು ಹ್ಯಾಂಡ್‌ಸೆಟ್ ಗಳಲ್ಲಿ ಕಾರ್ಯನಿರ್ವಹಿಸುತ್ತದೆ

  • ಜಿಯೋ ವೈ ಫೈ ಕರೆ ಮಾಡುವಿಕೆಯನ್ನು ಸಕ್ರಿಯಗೊಳಿಸಲು, Jio.com/wificalling ನಲ್ಲಿ ಹಂತ ಹಂತದ ಮಾರ್ಗದರ್ಶಿ ಲಭ್ಯವಿದೆ.
  • ಜಿಯೋ ವೈ ಫೈ ಕರೆ ಮಾಡುವಿಕೆಯನ್ನು ಪ್ಯಾನ್ ಇಂಡಿಯಾ ಜನವರಿ 7 ಮತ್ತು 16ರ ನಡುವೆ ಸಕ್ರಿಯಗೊಳಿಸಿದೆ.
Advertisement

Udayavani is now on Telegram. Click here to join our channel and stay updated with the latest news.

Next