Advertisement

ಕಂಠೀರವದ ಟ್ರ್ಯಾಕ್‌ ಜಿಂದಾಲ್‌ ನುಂಗಿತ್ತಾ!

11:47 AM Aug 24, 2017 | |

ಬೆಂಗಳೂರು: ಉದ್ಯಾನನಗರಿಯಲ್ಲಿರುವ ಕಂಠೀರವ ಕ್ರೀಡಾಂಗಣದಲ್ಲಿ ಅಥ್ಲೀಟ್‌ಗಳು ಮತ್ತೆ ಅತಂತ್ರರಾಗಿದ್ದಾರೆ. ಬುಧವಾರ ಅಭ್ಯಾಸ ನಡೆಸಲಾಗದೆ ತೀವ್ರ ಪರದಾಟ ನಡೆಸಿದ್ದಾರೆ. ಕ್ರೀಡಾ ಇಲಾಖೆ ಜತೆ ಒಪ್ಪಂದ ಅವಧಿ ಮುಗಿದಿದ್ದರೂ ಜಿಂದಾಲ್‌ ಎಗ್ಗಿಲ್ಲದೆ ಕ್ಲಬ್‌ ಫ‌ುಟ್ಬಾಲ್‌ ಪಂದ್ಯಗಳನ್ನು ನಡೆಸುತ್ತಾ ಬಂದಿದೆ. ತನಗೆ ಬೇಕಾದಂತೆ ಟ್ರ್ಯಾಕ್‌ ಮೇಲೆ ವಸ್ತುಗಳನ್ನು ಚೆಲ್ಲಾಪಿಲ್ಲಿಯಾಗಿ ಹಾಕುತ್ತಿದೆ. ಇದರಿಂದಾಗಿ ಸುಮಾರು 300ಕ್ಕೂ ಹೆಚ್ಚು ಅಥ್ಲೀಟ್‌ಗಳು
ಅಭ್ಯಾಸ ನಡೆಸಲಾಗದೆ ಭಾರೀ ಒದ್ದಾಟ ನಡೆಸಿದ್ದಾರೆ. ಇದು ಮತ್ತೂಂದು ಜಗಳಕ್ಕೆ ಕಾರಣವಾಗಿದೆ.

Advertisement

ಕ್ರೀಡಾ ಇಲಾಖೆ ಮೌನವೇಕೆ?: ಕ್ರೀಡಾಂಗಣದಲ್ಲಿ ಫ‌ುಟ್ಬಾಲ್‌ ಗೆ ಅವಕಾಶ ನೀಡಬೇಡಿ ಎಂದು ಅಥ್ಲೀಟ್‌ಗಳು ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ ಕಿವಿ ಇದ್ದೂ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೌನವಾಗಿದೆ. ಅಥ್ಲೀಟ್‌ಗಳ ಕೂಗು ಕೇಳಿದರೂ ನಿರ್ದೇಶಕ ಅನುಪಮ್‌
ಅಗರ್ವಾಲ್‌ ಇಲ್ಲಿವರೆಗೆ ಕ್ರಮ ತೆಗೆದುಕೊಂಡಿಲ್ಲ. ಪ್ರತಿ ಬಾರಿಯೂ ಅವರು ಜಿಂದಾಲ್‌ ಹಾಗೂ ಅಥ್ಲೀಟ್‌ಗಳ ನಡುವೆ ಸಭೆ ನಡೆಸಿದ್ದು ಬಿಟ್ಟರೆ ಬೇರೆ ಯಾವ ಬದಲಾವಣೆಯೂ ಆಗಿಲ್ಲ. ಅವಧಿ ಮುಗಿದರೂ ಜಿಂದಾಲ್‌ ಗೆ ಅವಕಾಶ ಸಿಕ್ಕಿದೆ. ಇದು ಹೇಗೆ? ಕ್ರೀಡಾ ಇಲಾಖೆಗೆ ಒಂದು ಕ್ಲಬ್‌ ತಂಡದ ಮೇಲೆ ಇರುವ ಅತಿಯಾದ ಪ್ರೀತಿ, ಮಮತೆ ಏಕೆ? ಎಂದು ಕ್ರೀಡಾ ಪ್ರೇಮಿಗಳು ತೀವ್ರ ಪ್ರಶ್ನಿಸಿದ್ದಾರೆ. ಅಥ್ಲೀಟ್‌ ಸಮಸ್ಯೆ ಕೇಳಿದ ಮಾಜಿ ಗೃಹಸಚಿವರು
ಕೆಪಿಸಿಸಿ ಅಧ್ಯಕ್ಷ ಹಾಗೂ ಕೆಎಎ ಅಧ್ಯಕ್ಷರಾಗಿರುವ ಡಾ.ಜಿ.ಪರಮೇಶ್ವರ್‌ ಹಠಾತ್‌ ಕಂಠೀರವ ಹೊರಾಂಗಣ ಕ್ರೀಡಾಂಗಣಕ್ಕೆ ಬುಧವಾರ ಭೇಟಿ ನೀಡಿ
ಪರಿಶೀಲನೆ ನಡೆಸಿದರು. ಅಥ್ಲೀಟ್‌ಗಳ, ಕೋಚ್‌ಗಳ ಸಮಸ್ಯೆ ಆಲಿಸಿದರು. ಇದೇ ವೇಳೆ ಅವರು ಅವಧಿ ಮುಗಿದಿದ್ದರೂ ಜಿಂದಾಲ್‌ಗೆ ಫ‌ುಟ್ಬಾಲ್‌
ಆಯೋಜಿಸಲು ಹೇಗೆ ಅವಕಾಶ ನೀಡಿದ್ದೀರಿ? ಎಂದು ಇಲಾಖೆ ನಿರ್ದೇಶಕ ಅನುಪಮ್‌ ಅಗರ್ವಾಲ್‌ರನ್ನು ಪ್ರಶ್ನಿಸಿದ್ದಾರೆ ಎನ್ನಲಾಗಿದೆ. ಅಥ್ಲೀಟ್‌ಗಳ ಪರವಾಗಿ ಹೋರಾಟ ಮಾಡುವ ಭರವಸೆ ನೀಡಿ ಅಲ್ಲಿಂದ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next