Advertisement

ಬಿಗ್‌ಬಾಷ್‌: ಚೆಂಡು ಮುಖಕ್ಕೆ ಬಡಿದರೂ ಜಗ್ಗದ ಪ್ರೇಕ್ಷಕ 

05:03 AM Jan 30, 2019 | Team Udayavani |

ಸಿಡ್ನಿ: ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಬಿಗ್‌ಬಾಷ್‌ ಟಿ20 ಲೀಗ್‌ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಬ್ರಿಸ್ಬೇನ್‌ ಹೀಟ್ಸ್‌ ತಂಡದ ಬ್ಯಾಟ್ಸ್‌ಮನ್‌ ಜಿಮ್ಮಿ ಪಿಯರ್ಸನ್‌ ಹೊಡೆತವೊಂದು ಮಿಡ್‌ವಿಕೆಟ್‌ನಲ್ಲಿ ತೇಲಿಕೊಂಡು
ನೇರವಾಗಿ ಪ್ರೇಕ್ಷಕನೊಬ್ಬನಿಗೆ ಹೋಗಿ ಬಡಿದಿದೆ.

Advertisement

ಅದೃಷ್ಟವಶಾತ್‌ ಚೆಂಡು ತನ್ನಕಡೆಯೇ ತೇಲಿಬರುತ್ತಿದ್ದುದನ್ನು ಮುಂಚಿತವಾಗಿಯೇ ಕಂಡುಹಿಡಿದ ಪ್ರೇಕ್ಷಕ ಸಾಧ್ಯವಾದಷ್ಟು ತಪ್ಪಿಸಿಕೊಳ್ಳಲು ಯತ್ನಿಸಿದ. ಕಡೆಗೂ ಆತನ ಕೆನ್ನೆಗೆ ಬಡಿದಿದೆ. ಆದ್ದರಿಂದ ಅಪಾಯದ ಪ್ರಮಾಣ ತಗ್ಗಿದೆ. ಅಚ್ಚರಿಯೆಂದರೆ ಹೀಗೆ ಹೊಡೆತ ತಿಂದ ಪ್ರೇಕ್ಷಕ ತಕ್ಷಣ ಹೊರಕ್ಕೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದುಕೊಂಡ. ಬಳಿಕ ಮುಖಕ್ಕೆ ಐಸ್‌ಪ್ಯಾಕ್‌ ಕಟ್ಟಿಕೊಂಡು, ಕೈಯಲ್ಲೊಂದು ಬಿಯರ್‌ ಬಾಟಲ್‌ ಹಿಡಿದು ಹಿಂತಿರುಗಿದ! ನೋವೆಂದು ವಿಶ್ರಾಂತಿ ಪಡೆಯದೇ ಮತ್ತೆ ಮರಳಿದ, ಪ್ರೇಕ್ಷಕನ ಈ ಕ್ರಿಕೆಟ್‌ ಪ್ರೀತಿ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ¨

Advertisement

Udayavani is now on Telegram. Click here to join our channel and stay updated with the latest news.

Next