ಕ್ರೈಸ್ಟ್ ಚರ್ಚ್: ನ್ಯೂಜಿಲ್ಯಾಂಡ್ ನ ಪ್ರತಿಭಾವಂತ ಆಲ್ ರೌಂಡರ್ ಜಿಮ್ಮಿ ನೀಶಮ್ ಇದೀಗ ಕ್ರಿಕೆಟ್ ಅಂಪಾಯರ್ ಆಗಿದ್ದಾರೆ. ಹೌದು ಇತ್ತೀಚೆಗೆ ನಡೆದ ಪಂದ್ಯವೊಂದರಲ್ಲಿ ಪ್ರಸಿದ್ದ ಅಂಪಾಯರ್ ಬಿಲ್ಲಿ ಬೌಡೆನ್ ಜೊತೆ ನೀಶಮ್ ತೀರ್ಪುಗಾರನ ಕೆಲಸ ಮಾಡಿದರು.
ಕ್ರೈಸ್ಟ್ ಚರ್ಚ್ ಮೈದಾನದಲ್ಲಿ ಕ್ರಿಕೆಟ್ ಆಟಗಾರರು ಮತ್ತು ರಗ್ಬಿ ಆಟಗಾರರ ನಡುವೆ ಚಾರಿಟಿ ಕ್ರಿಕೆಟ್ ಪಂದ್ಯ ಆಯೋಜಿಸಲಾಗಿತ್ತು. ಕಿವೀಸ್ ಮಾಜಿ ನಾಯಕ ಡೇನಿಯಲ್ ವೆಟೋರಿ ಕ್ರಿಕೆಟಿಗರ ತಂಡದ ನಾಯಕತ್ವ ವಹಿಸಿದ್ದರೆ, ರಗ್ಬಿ ಆಟಗಾರರ ತಂಡದ ನಾಯಕತ್ವವನ್ನು ಸರ್ ಗ್ರಹಾಂ ಹೆನ್ರಿ ವಹಿಸಿದ್ದರು.
ಪಂದ್ಯದಲ್ಲಿ ಜಿಮ್ಮಿ ನೀಶಮ್ ಅಂಪಾಯರಿಂಗ್ ನಡೆಸಿ ಗಮನ ಸೆಳೆದರು. ಮೈದಾನದಲ್ಲಿ ಮತ್ತೂ ಮೈದಾನದ ಹೊರಗೂ ತನ್ನ ಚಟುವಟಿಕೆಗಳಿಂದ ಗಮನ ಸೆಳೆಯುವ ನೀಶಮ್ ಮತ್ತು ಅಂಪಾಯರಿಂಗ್ ಕೌಶಲವನ್ನೂ ತೋರಿಸಿದರು.
ಪಂದ್ಯದಲ್ಲಿ ಡೇನಿಯಲ್ ವೆಟೋರಿ ನಾಯಕತ್ವದ ತಂಡ ಎರಡು ರನ್ ಅಂತರದಲ್ಲಿ ಜಯ ಸಾಧಿಸಿತು.