Advertisement
ಫಿಟ್‌ನೆಸ್ ಫಾರ್ಮುಲಾ ಕುರಿತು ಮಾತಾಡಿದ ‘ಯುನಿವರ್ಸ್ ಬಾಸ್’ ಖ್ಯಾತಿಯ ಕ್ರಿಸ್ ಗೇಲ್, ‘ಯೋಗ ಮತ್ತು ಮಸಾಜ್ ಮಾಡುವುದರಿಂದ ಸಹಜ ಸಾಮರ್ಥ್ಯ ಲಭಿಸುತ್ತದೆ. ಇದರಿಂದ ದಿನವಿಡೀ ಅಂಗಳದಲ್ಲಿ ಕಳೆಯಲು ಸಾಧ್ಯವಾಗುತ್ತದೆ. ಹಾಗೆಯೇ ಸುದೀರ್ಘ ವಿಶ್ರಾಂತಿ ಕೂಡ ಲಭಿಸುತ್ತದೆ’ ಎಂದರು.
ಕಳೆದ ಐಪಿಎಲ್ನಲ್ಲಿ 40.83ರ ಸರಾಸರಿಯಲ್ಲಿ 490 ರನ್ ಪೇರಿಸಿದ ಕ್ರಿಸ್ ಗೇಲ್ ವಿಶ್ವಕಪ್‌ಗೆ ಭರ್ಜರಿ ತಯಾರಿ ನಡೆಸಿದ್ದಾರೆ. ‘ಇದೊಂದು ಫನ್ನಿ ಗೇಮ್. ವಿಶ್ವಕಪ್ ಸಮೀಪಿಸುತ್ತಿರುವಾಗಲೇ ನನ್ನ ಬ್ಯಾಟಿನಿಂದ ರನ್ ಹರಿದು ಬರುತ್ತಿದೆ. ನನ್ನ ಈಗಿನ ಬ್ಯಾಟಿಂಗ್ ತೃಪ್ತಿ ಹಾಗೂ ಸಂತಸ ಕೊಟ್ಟಿದೆ’ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಕ್ರಿಸ್ ಗೇಲ್ ಹೇಳಿದರು. ‘ವಯಸ್ಸು ಹೆಚ್ಚುತ್ತಲೇ ಹೋಗುತ್ತದೆ. ನಾವಿನ್ನು ಎಳೆಯರಾ ಗುವುದಿಲ್ಲ. ಆದರೆ ಮಾನಸಿಕವಾಗಿ ಗಟ್ಟಿಯಾಗಿರುವುದು ಮುಖ್ಯ. ಕಳೆದೆರಡು ತಿಂಗಳಿಂದ ನಾನು ಜಿಮ್‌ಗೆ ತೆರಳಿ ದೇಹ ದಂಡಿಸಿಕೊಂಡಿಲ್ಲ. ಇದರ ಬದಲು ಯೋಗ ನಡೆಸುತ್ತಿದ್ದೇನೆ. ಇದರಿಂದ ಪ್ರತಿಯೊಂದು ಪಂದ್ಯಕ್ಕೂ ಫ್ರೆಶ್ ಆಗಿ ಕಣಕ್ಕಿಳಿಯಲು ಸಾಧ್ಯವಾ ಗುತ್ತದೆ’ ಎಂದು ಏಕದಿನದಲ್ಲಿ 10,151 ರನ್ ರಾಶಿ ಹಾಕಿದ ಗೇಲ್ ಹೇಳಿದರು.
Related Articles
Advertisement
ಬೆಂಗಳೂರು, ಮೇ 15: ಭಾರತದ ವಿಶ್ವಕಪ್ ತಂಡದಲ್ಲಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಇರಬೇಕಿತ್ತು ಎಂಬುದಾಗಿ ಮಾಜಿ ಕ್ರಿಕೆಟಿಗ, 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ಸಯ್ಯದ್ ಕಿರ್ಮಾನಿ ಹೇಳಿದ್ದಾರೆ.
ಭಾರತದ ಮಧ್ಯಮ ಕ್ರಮಾಂಕ ಹೆಚ್ಚು ಗಟ್ಟಿಯಾಗಿಲ್ಲ ಎಂದು ಅಭಿಪ್ರಾಯಪಟ್ಟ ಕಿರ್ಮಾನಿ, ‘ವಿಜಯ್ ಶಂಕರ್ ಬದಲು ಕೇದಾರ್ ಜಾಧವ್ ಅವರನ್ನು 4ನೇ ಕ್ರಮಾಂಕದಲ್ಲಿ ಆಡಿಸುವುದು ಸೂಕ್ತ. ಅಕಸ್ಮಾತ್ ಗಾಯಾಳು ಜಾಧವ್ ಲಭ್ಯರಾಗದೇ ಹೋದಲ್ಲಿ ಈ ಅವಕಾಶವನ್ನು ಅಂಬಾಟಿ ರಾಯುಡು ಅವರಿಗೆ ನೀಡಬೇಕು. ಅಜಿಂಕ್ಯ ರಹಾನೆ ಕೂಡ ಸೂಕ್ತ ಆಯ್ಕೆಯಾಗಲಿದೆ’ ಎಂದರು.’ಭಾರತ ತಂಡದ ಮೇಲೆ ನನಗೆ ನಂಬಿಕೆ ಇದೆ. ವಿಶ್ವಕಪ್‌ಗ್ೂ ಮುನ್ನ ಉಳಿದ ತಂಡಗಳೆಲ್ಲ ಸಾಕಷ್ಟು ಏಕದಿನ ಪಂದ್ಯಗಳನ್ನಾಡಿ ತಯಾರಿ ನಡೆಸಿವೆ. ಈ ನಿಟ್ಟಿನಲ್ಲಿ ಭಾರತವೇ ಹಿಂದಿದೆ. ಇದರಿಂದ ಕೊಹ್ಲಿ ಪಡೆಗೇನೂ ಅಡ್ಡಿಯಾಗದು’ ಎಂದರು.