Advertisement

ಏಷ್ಯಾದ ಮೊದಲ ರಾಷ್ಟ್ರೀಯ ಉದ್ಯಾನವನ ಜಿಮ್‌ ಕಾರ್ಬೆಟ್‌

10:34 AM Aug 13, 2019 | Sriram |

ಮಣಿಪಾಲ: ಪ್ರಧಾನ ಮಂತ್ರಿ ಮೋದಿ ಭಾಗವಹಿಸಿದ ಡಿಸ್ಕವರಿ ವಾಹಿನಿಯ “ಮ್ಯಾನ್‌ ವರ್ಸಸ್‌ ವೈಲ್ಡ್ ‘ ಕಾರ್ಯಕ್ರಮ ಇಂದು ದೇಶಾದ್ಯಂತ ಪ್ರಸಾರವಾಗಲಿದೆ.ಇದು ಭಾರತದಲ್ಲೇ ಚಿತ್ರೀಕ ರಣಗೊಂಡಿದ್ದು, ಮೋದಿ ಮತ್ತು ಬೇರ್‌ ಗ್ರಿಲ್ಸ್ ಚಿತ್ರೀಕರಿಸಿದ ಈ ಉದ್ಯಾನವನ ಏಷ್ಯಾದ ಮೊದಲ ರಾಷ್ಟ್ರೀಯ ಉದ್ಯಾನವೂ ಹೌದು.

Advertisement

ಇತಿಹಾಸ
ಇದು ಏಷ್ಯಾದ ಮೊದಲ ರಾಷ್ಟ್ರೀಯ ಉದ್ಯಾನವನ. ಉದ್ಯಾನವನ ಎಂದು ಘೋಷಣೆಯಾದ ಬಳಿಕ ಅಲ್ಲಿ ಮರಗಿಡಗಳ ನಾಶ ಮತ್ತು ಪ್ರಾಣಿ- ಪಕ್ಷಿಗಳಿಗೆ ಹಿಂಸೆ ಕೊಡುವುದನ್ನು ನಿಷೇಧಿಸಲಾಯಿತು. ಬಳಿಕ ಮರಗಳು ಬೆಳೆಯಲು ಆರಂಭವಾದವು. ಜಗತ್ತಿಗೆ ಸಂದೇಶ ನೀಡುವ ಸಲುವಾಗಿ ಇದನ್ನು ಬಳಸಿಕೊಂಡಿದ್ದಾರೆ. ಈ ಮೂಲಕ ಭಾರತದಲ್ಲಿ ಪ್ರಾಣಿಗಳ ಸಂರಕ್ಷಣೆ ಮತ್ತು ಹವಾಮಾನ ಬದಲಾವಣೆಯ ಜಾಗೃತಿ ಮೂಡಿಸುವ ಕಾರ್ಯವನ್ನು ನರೇಂದ್ರ ಮೋದಿ ಮಾಡುತ್ತಿದ್ದಾರೆ.

1954
ಪಾರ್ಕ್‌ ಹೆಸರನ್ನು ಹೇಲಿ ರಾಷ್ಟ್ರೀಯ ಉದ್ಯಾನ ಎಂದು ಕರೆಯಲಾಗುತ್ತಿತ್ತು. ಆದರೆ 1954ರಲ್ಲಿ ರಾಮನಗರ ರಾಷ್ಟ್ರೀಯ ಉದ್ಯಾನವನ ಎಂದು ಮರುನಾಮಕರಣವಾಯಿತು.

1955
ಕಾರ್ಬೆಟ್‌ ನ್ಯಾಶನಲ್‌ ಪಾರ್ಕ್‌ ಎಂದು ಉದ್ಯಾನವನದ ಹೆಸರು ಅಂತಿಮವಾಗಿದ್ದು 1955ರಲ್ಲಿ.

ಜಿಮ್‌ ಕಾರ್ಬೆಟ್‌ ಯಾರು?
ಜಿಮ್‌ ಕಾರ್ಬೆಟ್‌ ಸಾಮಾನ್ಯ ವ್ಯಕ್ತಿಯಲ್ಲ. ಚತುರ ಬೇಟೆಗಾರ, ಪರಿಸರ ಪ್ರೇಮಿ ಹಾಗೂ ಲೇಖಕ. ಇಂಗ್ಲೆಂಡ್‌ ಮೂಲದ ಕುಟುಂಬವಾದರೂ ಹುಟ್ಟಿದ್ದು ಭಾರತದಲ್ಲಿ. ಇಲ್ಲಿ ಬ್ರಿಟಿಷರ ಸೈನ್ಯ ಮುನ್ನಡೆಸುತ್ತಿದ್ದರು. ಮನುಷ್ಯರನ್ನು ತಿಂದು ಮೆರೆದಾಡುತ್ತಿದ್ದ ಹುಲಿ ಮತ್ತು ಚಿರತೆ ಗಳನ್ನು ಬೇಟೆಯಾಡುವುದು ಇವರ ಹವ್ಯಾಸ. ಇವರ “The Man-Eating Leopard of Rudraprayag’ ‘ ಪುಸ್ತಕವನ್ನು ಪೂರ್ಣಚಂದ್ರ ತೇಜಸ್ವೀಯವರು ಕನ್ನಡಕ್ಕೆ ಭಾಷಾಂತರಿಸಿದ್ದು “ರುದ್ರಪ್ರಯಾಗದ ನರಭಕ್ಷಕ’ ಎಂಬುದು ಇದರ ಶೀರ್ಷಿಕೆ.

Advertisement

ಏನಿದರ ವೈಶಿಷ್ಟ್ಯ?
ಹುಲಿಗಳ ಸಂರಕ್ಷಣೆಗೆ ಎಂದೇ ಈ ಪಾರ್ಕ್‌ ಆರಂಭಿ ಸಲಾಗಿತ್ತು. 1900ರಲ್ಲಿ ಬ್ರಿಟಿಷರು ಉದ್ಯಾನವನ ನಿರ್ಮಿಸುವ ಪ್ರಸ್ತಾವನೆ ಹೊಂದಿದ್ದರು. 1936ರಲ್ಲಿ ಉದ್ಯಾನವನ ಸ್ಥಾಪಿಸಿ, “ಹೇಲಿ ರಾಷ್ಟ್ರೀಯ ಉದ್ಯಾ ನವನ’ ಎಂದು ಕರೆಯಲಾಯಿತು. ಹೇಲಿ ಅವರು “ಯುನೈಟೆಡ್‌ ಪ್ರಾವಿನ್ಸ್‌’ನ ಗವರ್ನರ್‌.

700 ಆನೆ
ರಾಯಲ್‌ ಬೆಂಗಾಲ್‌ ಟೈಗರ್‌ಗಳಿಗಾಗಿ ಈ ಪಾರ್ಕ್‌ ಜಾಗತಿಕ ಮಟ್ಟದಲ್ಲೇ ಹೆಸರುವಾಸಿ. ಏಷ್ಯಾಟಿಕ್‌ ಆನೆಗಳು, ಏಷ್ಯಾಟಿಕ್‌ ಕಪ್ಪು ಕರಡಿ,ಹಾಗ್‌ ಜಿಂಕೆ ಸೇರಿದಂತೆ ನೂರಾರು ಪ್ರಾಣಿಗಳಿವೆ. ಸುಮಾರು 700 ಆನೆಗಳು, 215 ಹುಲಿಗಳಿವೆ.

1974ರಲ್ಲಿ
ಟೈಗರ್‌ ಪ್ರಾಜೆಕ್ಟ್ ಮೂಲಕ ಅಂದ ಗೊಳಿಸಲಾಯಿತು. ಆರಂಭದಲ್ಲಿ ಇದರ ವಿಸ್ತೀರ್ಣ 323.75 ಕಿ.ಮೀ.

436
ಜನರ ಸಾವಿಗೆ ಕಾರಣವಾಗಿದ್ದ ಚಂಪಾವತ್‌ ಹುಲಿಯ ಬೇಟೆ.

400
ಜನರನ್ನು ಕೊಂದಿದ್ದ ಒಂದು ಚಿರತೆಯನ್ನು° ಜಿಮ್‌ ಕಾರ್ಬೆಟ್‌ ಸಂಹರಿಸಿದ್ದರು.

ಎಲ್ಲಿದೆ “ಜಿಮ್‌ ಕಾರ್ಬೆಟ್‌
ಉತ್ತರಾಖಂಡ ರಾಜ್ಯದ ನೈನಿತಾಳ ಜಿಲ್ಲೆಯ ರಾಷ್ಟ್ರೀಯ ಉದ್ಯಾನವನ ಇದಾಗಿದೆ.
ಈ ಐತಿಹಾಸಿಕ ಉದ್ಯಾನವನ ಜಿಲ್ಲೆಯ ರಾಮನಗರ ನಗರಕ್ಕೆ ಹತ್ತಿರದಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next