Advertisement
ತಾಲೂಕಿನ ಪುರವರ ಹೋಬಳಿ ಕೊರಟಗೆರೆ ಮತ ಕ್ಷೇತ್ರದ ಹರಳಾಪುರದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಗ್ರಾಮಸ್ಥರು ಸಾಮೂಹಿಕವಾಗಿ ಸ್ಮಶಾನಕ್ಕಾಗಿ ಹಾಗೂ ಇರುವ ಸ್ಮಶಾನ ಒತ್ತುವರಿ ತೆರವಿಗಾಗಿ ಮೊರೆಯಿಟ್ಟರು. ಗ್ರೇಡ್-2 ತಹಶೀಲ್ದಾರ್ ಕಮಲಮ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು.
Related Articles
Advertisement
ಗ್ರಾಪಂ ಅಧ್ಯಕ್ಷೆಗೂ ತಟ್ಟಿದ ಸರ್ವೆ ಬಿಸಿ: ಸ್ವತಃ ಪುರವರ ಗ್ರಾಪಂ ಅಧ್ಯಕ್ಷೆ ಅಂಬಿಕಾ ಮಾತನಾಡಿ, ಪುರವರದ ಸ್ಮಶಾನಗಳ ಸರ್ವೆ ಮಾಡಿಕೊಡುವಂತೆ ಕಳೆದ ಸಾಲಿನಲ್ಲೇ ಮನವಿ ಮಾಡಿದರೂ, ಸರ್ವೆ ಇಲಾಖೆ ಕ್ರಮವಹಿಸಿಲ್ಲ. ಇನ್ನು ಜನಸಾಮಾನ್ಯರ ಪಾಡೇನು ಎಂದು ಅಸಮಾಧಾನ ಹೊರಹಾಕಿದ್ದು ಬೇಗ ಸರ್ವೆ ಮಾಡಿಸಿಕೊಡಲು ಎಡಿ ಎಲ್‌ಆರ್ ಏಕನಾಥ್ ಅವರಲ್ಲಿ ಮನವಿ ಮಾಡಿದರು.
ಆದರೆ, ಕಾರ್ಯಕ್ರಮದಲ್ಲಿ ಸರ್ವೆ ಇಲಾಖೆಯಲ್ಲಿ ಲಂಚಕ್ಕೆ ಬೇಡಿಕೆಯಿಡುತ್ತಾರೆ. ಖಾಸಗಿ ಸರ್ವೆ ಸಿಬ್ಬಂದಿ ಹೆಚ್ಚುವರಿ ಹಣ ನೀಡಿದರೆ ಮಾತ್ರ ಸರ್ವೆಗೆ ಮುಂದಾಗ್ತಾ ರೆಂದು ಸಾರ್ವಜನಿಕರು ದೂರಿದ್ದು ಅಂತಹ ಆರೋಪ ಗಳ ಬಗ್ಗೆ ಲಿಖೀತವಾಗಿ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಏಕನಾಥ್ ಜಾರಿಕೊಂಡರು.
ಮಧ್ಯಾಹ್ನ ಬಂದ ತಹಶೀಲ್ದಾರ್: ಲೋಕಯುಕ್ತ ನ್ಯಾಯಾಲಯಕ್ಕೆ ಹೋಗಿದ್ದ ತಹಶೀಲ್ದಾರ್ ಸುರೇಶಾ ಚಾರ್ ಮಧ್ಯಾಹ್ನ ಕಾರ್ಯಕ್ರಮಕ್ಕೆ ಬಂದರು. ತಕ್ಷಣವೇ ಗ್ರಾಮದ ಮನೆ ಮನೆಗಳಿಗೆ ಭೇಟಿ ನೀಡಿದ ಅವರು, ಸಿದ್ಧವಿದ್ದ ಹಲವು ಸೌಲಭ್ಯಗಳ ವಿತರಣೆ ಮಾಡಿದರು. ಮತ್ತೆ ಯಾವುದೇ ಸಮಸ್ಯೆಯಿದ್ದರೂ ರಾತ್ರಿಯಿಡಿ ಗ್ರಾಮದಲ್ಲೇ ವಾಸ್ತವ್ಯ ಮಾಡುತ್ತಿದ್ದು, ನಿಮ್ಮ ಸಮಸ್ಯೆ ತಿಳಿಸಿ. ಕಾನೂನು ರೀತಿಯಲ್ಲಿ ಶೀಘ್ರ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
ಗ್ರೇಡ್-2 ತಹಶೀಲ್ದಾರ್ ಕಮಲಮ್ಮ ಮಾತನಾಡಿದರು. ಉಪ ತಹಶೀಲ್ದಾರ್ ಜಯಲಕ್ಷ್ಮಮ್ಮ, ಗ್ರಾಪಂ ಅಧ್ಯಕ್ಷೆ ಅಂಬಿಕಾ, ಉಪಾಧ್ಯಕ್ಷೆ ರಾಧಿಕಾ, ಪಿಡಿಒ ಪುಂಡ ಲೀಕ, ಸಿಡಿಪಿಒ ಅನಿತಾ, ಟಿಎಚ್‌ಒ ಡಾ.ರಮೇಶ್‌ಬಾಬು, ರಾಮದಾಸ, ವಲಯ ಅರಣ್ಯಾಧಿಕಾರಿ ರವಿ, ಅಬಕಾರಿ ನಿರೀಕ್ಷಕ ರಾಮಮೂರ್ತಿ, ಆಹಾರ ನಿರೀಕ್ಷಕ ಗಣೇಶ್, ಸಹಾಯಕ ಕಾರ್ಯ ನಿರ್ವಾಹಕ ಅಧಿಕಾರಿ ವಿಶ್ವನಾಥ್ ಗೌಡ, ಹನುಮಂತರಾಯಪ್ಪ, ಲಕ್ಷ್ಮೀ ನರಸಯ್ಯ, ಗಿರೀಶ್ ಬಾಬು ರೆಡ್ಡಿ, ರಂಗಸ್ವಾಮಿ, ಟಿಎಸ್‌ಡಬ್ಲೂ ಹರೀಶ್, ಎಇಇ ರಾಜಗೋಪಾಲ್, ಸುರೇಶ್‌ರೆಡ್ಡಿ, ಕೃಷಿ ಇಲಾಖೆ ಎಒ ಶಿವಣ್ಣ, ಸರ್ವಜ್ಞ ವೇದಿಕೆಯ ಅಧ್ಯಕ್ಷ ವೆಂಕಟರವಣಪ್ಪ, ಕಂದಾ ಯಾಧಿಕಾರಿ ಸಿದ್ದರಾಜು, ಗ್ರಾಮಲೆಕ್ಕಿಗರಾದ ಶ್ರೀನಿವಾಸ್, ನಟರಾಜ್, ಶಿವರಾಂ, ಶ್ರೀಧರ್, ನಾಗಭೂಷಣ್, ಸುನೀಲ್, ಗಂಗರಾಜ್, ಹಾಗೂ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರು, ಕಲಾವಿದ ರಾಮಚಂದ್ರಪ್ಪ, ಗ್ರಾಮಸ್ಥರು ಇದ್ದರು.
ಸರ್ಕಾರಕ್ಕೆ ಹಣಕಾಸಿನ ಸಮಸ್ಯೆಯಿಲ್ಲ. ನಮಗೆ 1 ತಿಂಗಳ ಪಡಿತರ ನೀಡದಿದ್ದರೂ ಪರವಾಗಿಲ್ಲ. ನಮ್ಮೂರಿಗೆ ಒಂದು ಸ್ಮಶಾನ ಮಂಜೂರು ಮಾಡಿಕೊಡಿ ಕೊಟ್ಟು ಪುಣ್ಯ ಕಟ್ಟಿಕೊಳ್ಳಿ.-ಹನುಮಂತರಾಯಪ್ಪ, ಹರಳಾಪುರ ನಿವಾಸಿ