Advertisement
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ಜಿಪಂ ಸಭಾಂಗಣದಲ್ಲಿ ಎನ್‌ಆರ್‌ಎಲ್‌ಎಂ ಯೋಜನೆಯಡಿ “ಒಂದು ಗ್ರಾಪಂ-ಒಂದು ಬಿ.ಸಿ. ಸಖೀ’ ಎಂಬ ಪರಿಕಲ್ಪನೆಯಿಂದ ಆಯಾ ಗ್ರಾಪಂ ಮಟ್ಟದ ಸಂಜೀವಿನಿ ಸಂಘಗಳ ಸದಸ್ಯ ಮಹಿಳೆಯೊಬ್ಬರನ್ನು ಆಯ್ಕೆ ಮಾಡಿ, ತರಬೇತಿ ಹೊಂದಿದ ಬಿ.ಸಿ. ಸಖೀಯರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದ, ಸಮಾಜದ ಕಟ್ಟ ಕಡೆಯ ಮಹಿಳೆಯ ಮನೆ ಬಾಗಿಲಿಗೆ ಸರ್ಕಾರದ ವಿವಿಧ ಸೌಲಭ್ಯ ಹಾಗೂ ಬ್ಯಾಂಕಿನ ಹಲವಾರು ಸೌಲಭ್ಯ ಆನ್‌ಲೈನ್ ಮೂಲಕ ತಲುಪಿಸುವ ನಿಟ್ಟಿನಲ್ಲಿ ಬಿ.ಸಿ. ಸಖೀಯರನ್ನು ಆಯ್ಕೆ ಮಾಡಲಾಗಿದ್ದು, ತರಬೇತಿ ಪಡೆದ ಬಿ.ಸಿ. ಸಖೀಯರು ಪ್ರಾಮಾಣಿಕವಾಗಿ ಸೇವೆ ಒದಗಿಸಿದಲ್ಲಿ ತಾವೂ ಸಹ ಆರ್ಥಿಕವಾಗಿ ಸಬಲರಾಗಬಹುದು ಎಂದರು.
Related Articles
Advertisement
ಯಾರಿಗೂ ಸುಲಭವಾಗಿ ಯಶಸ್ಸು ಸಿಗುವುದಿಲ್ಲ. ಪರಿಶ್ರಮ ಪಟ್ಟರೆ ಮಾತ್ರ ಅದಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ ಎಂದರು. ಲೀಡ್ ಬ್ಯಾಂಕ್ ಮ್ಯಾನೇಜರ್, ಆರ್.ಸೆಟಿ ಸಂಸ್ಥೆ ನಿರ್ದೇಶಕ, ಅಶೋಕ್ ಮತ್ತಿತರರು ಇದ್ದರು.