Advertisement

ಜಿಗ್ನೇಶ್‌ ಮೇವಾನಿ ಸವಾಲು

03:48 PM May 03, 2018 | Team Udayavani |

ಮೈಸೂರು: ದೇಶದಲ್ಲಿ ಉದ್ಯೋಗ ಸೃಷ್ಟಿ, ರೈತರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಲ್ಲಿ ಸಂಪೂರ್ಣ ವಿಫ‌ಲವಾಗಿರುವ ಪ್ರಧಾನಿ ನರೇಂದ್ರ ಮೋದಿ, ನಾಲ್ಕು ವರ್ಷಗಳ ಆಡಳಿತಾವಧಿಯಲ್ಲಿ ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳ ಕುರಿತು ಬಹಿರಂಗ ಚರ್ಚೆಗೆ ಬರಲಿ ಎಂದು ಗುಜರಾತ್‌ ಶಾಸಕ ಜಿಗ್ನೇಶ್‌ ಮೇವಾನಿ ಸವಾಲು ಹಾಕಿದರು.

Advertisement

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಠಿಸುವ ಭರವಸೆ ನೀಡಿದ್ದ, ಪ್ರಧಾನಿ ಈವರೆಗೂ ಶೇ.1 ಉದ್ಯೋಗ ಸೃಷ್ಟಿಸಿಲ್ಲ.  ಇನ್ನೂ ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳು, ದಲಿತರು, ಹಿಂದುಳಿದ ವರ್ಗದವರ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರು ಕರ್ನಾಟಕಕ್ಕೆ ಬಂದು ಮಾತನಾಡುವ ಮೋದಿ, ಈ ವಿಷಯಗಳ ಬಗ್ಗೆ ಕಾರವೆತ್ತದೆ ಮೌನಕ್ಕೆ ಶರಣಾಗಿದ್ದಾರೆ. ಮೋದಿ ಅವರು 20 ವರ್ಷಗಳಲ್ಲಿ ಗುಜರಾತ್‌ನಲ್ಲಿ ಏನು ಅಭಿವೃದ್ಧಿ ಮಾಡಿದ್ದಾರೆ? ನಾನು ಗುಜರಾತ್‌ ಮೂಲದವನೇ ಆಗಿರುವುದರಿಂದ ಈ ಕುರಿತು
ಬಹಿರಂಗ ಚರ್ಚೆಗೆ ಸಿದ್ಧವಿರುವುದಾಗಿ ತಿಳಿಸಿದರು. 

ದೇಶದ ಯುವಜನತೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಉದ್ಯೋಗ ಕಲ್ಪಿಸಲಿದ್ದಾರೆ ಎಂಬ ವಿಶ್ವಾಸ ಹೊಂದಿದ್ದರು. ಆದರೆ ಮೋದಿ ಅವರ ನಾಲ್ಕು ವರ್ಷಗಳ ಆಡಳಿತದಲ್ಲಿ ಈ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ. ದೇಶದಲ್ಲಿ ನೋಟು ರದ್ದತಿ ಹಾಗೂ ಜಿಎಸ್‌ಟಿ ಜಾರಿಯಾದ ಬಳಿಕ ಅನೇಕರು ಉದ್ಯೋಗ ಕಳೆದುಕೊಂಡಿದ್ದಾರೆ. ಗುಜರಾತ್‌ ವಿಧಾನಸಬೆಯಲ್ಲಿ ಕೆಲಸ ಮಾಡುವ ಕೆಳಹಂತದ ಸಿಬ್ಬಂದಿ ಕನಿಷ್ಠ ವೇತನವಿಲ್ಲದೆ ಪರದಾಡುತ್ತಿರುವುದು ಯಾವ ಅಭಿವೃದ್ಧಿ ಎಂದು ಪ್ರಶ್ನಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಾಯಲ್ಲಿ ಅಂಬೇಡ್ಕರ್‌ ಹೆಸರಿದೆ, ಆದರೆ ಹೃದಯದಲ್ಲಿ ಮನುಸೃತಿ ಇದೆ. ಕೇವಲ ಅಂಬೇಡ್ಕರ್‌ ಜಯಂತಿ ಆಚರಣೆ ಮಾಡುವುದು ಯಾವ ದೊಡ್ಡತನವಲ್ಲ, ಬದಲಿಗೆ ದೇಶದ ದಲಿತರು ಮತ್ತು ಶೋಷಿತರನ್ನು ರಕ್ಷಿಸಲು ಮುಂದಾಗಬೇಕಿದೆ. ದೇಶದಲ್ಲಿ ಬಿಜೆಪಿ ಹಾಗೂ ಸಂಘ ಪರಿವಾದವರು ನ್ಯಾಯಾಂಗ ವ್ಯವಸ್ಥೆಗೆ
ಕುತ್ತುತರುವ ರೀತಿಯಲ್ಲಿ ನೆಡೆದುಕೊಳ್ಳುತ್ತಿದ್ದಾರೆ.

ಗುಜರಾತ್‌ನಲ್ಲಿ ಸಂಘ ಪರಿವಾರದವರಿಂದ ಕೋಮುವಾದ ಹೆಚ್ಚಾಗಿದೆ ಎಂದು ಹೇಳಿದರು. ವಿಧಾನಸಬಾ ಚುನಾವಣೆಯಲ್ಲಿ ದಲಿತ ಸಮುದಾಯದವರು ಇಂತವರಿಗೆ ಮತ ನೀಡಿ ಎಂದು ಹೇಳುವುದಿಲ್ಲ. ಆದರೆ ಬಿಜೆಪಿಗೆ ಏಕೆ ಮತ ಹಾಕಬಾರದೆಂದು ಹೇಳುತ್ತೇನೆ. ನನ್ನ ದೃಷ್ಟಿ ಕರ್ನಾಟಕದ ಜನತೆಯನ್ನು ಜಾಗೃತಗೊಳಿಸುವು ದಾಗಿದ್ದು, 2019ರಲ್ಲಿ ನಮ್ಮ ಅಜೆಂಡಾ ಇಂಡಿಯಾ ಹಾಗೂ ಬಿಜೆಪಿ ನಡುವೆ ಆಗಿರಲಿದೆ ಎಂದರು. 

Advertisement

ಸುದ್ದಿಗೋಷ್ಠಿಯಲ್ಲಿ ನೂರ್‌ಶಿಧರ್‌, ಗೋಪಾಲಕೃಷ್ಣ, ರೈತ ಸಂಘದ ಹೊಸಕೋಟೆ ಬಸವರಾಜು ಹಾಜರಿದ್ದರು
 ಪುಟ್ಟಣ್ಣಯ್ಯ ಸ್ಮರಣೆ ಕೆ.ಎಸ್‌.ಪುಟ್ಟಣ್ಣಯ್ಯ ನಿಜವಾದ ಕಾಳಜಿಯುಳ್ಳ ಮಣ್ಣಿನಮಗನಾಗಿದ್ದು, ಅಂತಹವರು ಇಂದು
ನಮ್ಮ ನಡುವೆ ಇಲ್ಲ. ಹೀಗಾಗಿ ಚುನಾವಣೆಯಲ್ಲಿ ಪುಟ್ಟಣ್ಣಯ್ಯ ಅವರ ಮಗ ದರ್ಶನ್‌ ಅವರನ್ನು ಗೆಲ್ಲಿಸುವ ಮೂಲಕ ನಿಜವಾದ ಕೃಷಿಕರಿಗೆ ಬೆಲೆ ನೀಡಬೇಕಿದೆ. ವಿಧಾನಸೌಧದಲ್ಲಿ ದರ್ಶನ್‌ ಪುಟ್ಟಣ್ಣಯ್ಯ ಕೂರುವುದನ್ನು ನೋಡುವ ಆಸೆ
ತಮ್ಮದಾಗಿದ್ದು, ದರ್ಶನ್‌ ಅವರು ಗೆದ್ದರೆ ಕೃಷಿಕ ಸಮುದಾಯಕ್ಕೆ ಹೆಚ್ಚು ಅನುಕೂಲವಾಗಲಿದೆ.
ಜಿಗ್ನೇಶ್‌ ಮೇವಾನಿ, ಗುಜರಾತ್‌ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next