Advertisement

ಜಿಎಸ್‌ಟಿಗೆ ರಾಜ್ಯಸಭೆ ಅಸ್ತು; ಜುಲೈನಿಂದ ಜಾರಿ

03:45 AM Apr 07, 2017 | |

ನವದೆಹಲಿ: ಐತಿಹಾಸಿಕ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ವಿಧೇಯಕಕ್ಕೆ ಗುರುವಾರ ರಾಜ್ಯಸಭೆಯಲ್ಲೂ ಅಂಗೀಕಾರ ದೊರೆತಿದ್ದು, ಜುಲೈನಿಂದಲೇ ದೇಶಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆಯನ್ನು ಜಾರಿಮಾಡಲು ಇದ್ದ ಎಲ್ಲ ಅಡೆತಡೆಗಳೂ ನಿವಾರಣೆಯಾಗಿವೆ. 

Advertisement

ಮೇಲ್ಮನೆಯಲ್ಲಿ ಇದೇ ಮೊದಲ ಬಾರಿಗೆ ಕಾಂಗ್ರೆಸ್‌-ಬಿಜೆಪಿ ನಡುವೆ ಒಪ್ಪಂದವೇರ್ಪಟ್ಟ ಹಿನ್ನೆಲೆಯಲ್ಲಿ ಮಸೂದೆಗೆ ಅನುಮೋದನೆ ಸಿಕ್ಕಿದೆ.

ಆರಂಭದಲ್ಲಿ ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್‌ ವಿಧೇಯಕಕ್ಕೆ ಕೆಲವೊಂದು ತಿದ್ದುಪಡಿಗಳನ್ನು ಪ್ರಸ್ತಾಪಿಸಿದರಾದರೂ, ಕೊನೆಗೆ ಜಿಎಸ್‌ಟಿ ಸರ್ವಾನುಮತದಿಂದ ಅಂಗೀ ಕಾರವಾಗಬೇಕು ಎಂಬ ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಅವರ ಸೂಚನೆಯ ಮೇರೆಗೆ ತಮ್ಮ ಪ್ರಸ್ತಾಪವನ್ನು ಕೈಬಿಟ್ಟರು. ಹೀಗಾಗಿ, ರಾಜ್ಯಸಭೆಯಲ್ಲಿ ಯಾವುದೇ ಅಡ್ಡಿಗಳಿಲ್ಲದೆ ವಿಧೇಯಕ ಅಂಗೀಕಾರಗೊಂಡಿತು.

ಇನ್ನು ರಾಜ್ಯ ಸರ್ಕಾರಗಳು ಜಿಎಸ್‌ಟಿಯನ್ನು ಪಾಸ್‌ ಮಾಡಿದರೆ, ಜುಲೈನಿಂದಲೇ ಏಕರೂಪದ ತೆರಿಗೆ ಜಾರಿಯಾಗಲಿದೆ.8 ಗಂಟೆಗಳ ಕಾಲ ನಡೆದ ಚರ್ಚೆ ವೇಳೆ, ವಿತ್ತ ಸಚಿವ ಜೇಟಿÉ ಅವರು, ಜಿಎಸ್‌ಟಿ ಕ್ರೆಡಿಟ್‌ ಅನ್ನು ಹಿಂದಿನ ಯುಪಿಎ ಸರ್ಕಾರಕ್ಕೆ ನೀಡಬಯಸುತ್ತೇನೆ ಎನ್ನುವ ಮೂಲಕ ಅಚ್ಚರಿ ಮೂಡಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next