Advertisement

ಜಿಡಗಾ ಮಠ ಕೊಡುಗೆ ಅನನ್ಯ

10:47 AM Dec 03, 2018 | |

ಕಲಬುರಗಿ: ಆಧ್ಯಾತ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಾ ಬರುತ್ತಿರುವ ಮುಗುಳಖೋಡ-ಜಿಡಗಾ ಮಠವು ಉತ್ತರ ಕರ್ನಾಟಕ ಭಾಗಕ್ಕೆ ಅನನ್ಯ ಕೊಡುಗೆ ನೀಡಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಖಾಶೆಂಪೂರ ಹೇಳಿದರು.

Advertisement

ನಗರದ ಕೋಟನೂರ ಡಿ ಯಲ್ಲಾಲಿಂಗೇಶ್ವರ ಪುಣ್ಯಾಶ್ರಮದಲ್ಲಿ ರವಿವಾರ ನಡೆದ ಮುಗಳಖೋಡ-ಜಿಡಗಾ ಮಠದ ಡಾ| ಮುರುಘರಾಜೇಂದ್ರ ಮಹಾಸ್ವಾಮಿಗಳ 34ನೇ ಗುರುವಂದನಾ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಜಿಡಗಾ ಮತ್ತು ಮುಗುಳಖೋಡ ಮಠದ ಹಿಂದಿನ ಪೂಜ್ಯರು ನಾಡಿನಾದ್ಯಂತ ಅಸಂಖ್ಯಾತ ಭಕ್ತರನ್ನು ಸೃಷ್ಟಿಮಾಡಿದ್ದಾರೆ. ಇದು ಈ ಪೀಠದಲ್ಲಿ ಶಕ್ತಿಯಿದೆ ಎನ್ನುವುದನ್ನು ನಿರೂಪಿಸುತ್ತದೆ ಎಂದು ಹೇಳಿದರು. 

ಕೆಪಿಸಿಸಿ ಕಾರ್ಯಧ್ಯಾಕ್ಷ ಈಶ್ವರ ಖಂಡ್ರೆ ಮಾತನಾಡಿ, ಜಿಡಗಾ-ಮುಗಳಖೋಡ ಮಠವು ಈ ಭಾಗದಲ್ಲಿ ಧಾರ್ಮಿಕ ಕ್ಷೇತ್ರವನ್ನು ಶ್ರೀಮಂತಗೊಳಿಸಿದೆ. ಮಠದ ಈಗಿನ ಪೂಜ್ಯರು ಮಠದ ಅಭಿವೃದ್ಧಿ ಕಾರ್ಯಗಳನ್ನು ಮುಂದುವರಿಸಿಕೊಂಡು ಬರುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾಗಿದೆ ಎಂದು ಹೇಳಿದರು.

ಕೋಟನೂರ ಡಿ ಯಲ್ಲಾಲಿಂಗೇಶ್ವರ ಪುಣ್ಯಾಶ್ರಮದ ಆವರಣದಲ್ಲಿ ರವಿವಾರ ನಡೆದ ಮುಗಳಖೋಡ-ಜಿಡಗಾ ಮಠದ ಡಾ| ಮುರುಘರಾಜೇಂದ್ರ ಮಹಾಸ್ವಾಮಿಗಳ 34ನೇ ಗುರುವಂದನಾ ಮಹೋತ್ಸವವನ್ನು ಪ್ರಭಾವತಿ ಧರ್ಮಸಿಂಗ್‌ ಉದ್ಘಾಟಿಸಿದರು. ಶಾಸಕರಾದ ದತ್ತಾತ್ರೇಯ ಪಾಟೀಲ, ಬಸವರಾಜ ಮತ್ತಿಮಡು, ಬಿ.ಜಿ. ಪಾಟೀಲ, ಆನಂದ ನ್ಯಾಮಗೌಡ, ಪಿ.ರಾಜು, ಆನಂದ ಮಾಮನಿ ಹಾಗೂ ಮುಖಂಡರಾದ ಅಲ್ಲಂಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಶರಣುಕುಮಾರ ಮೋದಿ, ಪವನಕುಮಾರ ವಳಕೇರಿ ಹಾಗೂ ಮುಂತಾದವರಿದ್ದರು. ಈ ಸಂದರ್ಭದಲ್ಲಿ ಡಾ| ಮುರುಘರಾಜೇಂದ್ರ ಮಹಾ ಸ್ವಾಮೀಜಿಗಳನ್ನು ಭಕ್ತವೃಂದದಿಂದ ಸನ್ಮಾನಿಸಿ, ಗುರುವಂದನೆ ಸಲ್ಲಿಸಲಾಯಿತು.

Advertisement

ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿ ಪ್ರಸಕ್ತ ಬರಗಾಲ ಕಾಲದಲ್ಲೂ ತೊಗರಿ ಬೆಳೆದಿದ್ದು ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸಲು ಮುಂದಾಗಿದೆ. ಬೆಂಬಲ ಬೆಲೆಯಲ್ಲಿ ಖರೀದಿಸುವ ಸಂಬಂಧ ಈಗಾಗಲೇ ಸರ್ಕಾರ ಕೇಂದ್ರದ ಗಮನಕ್ಕೆ ತಂದಿದೆ. ಒಟ್ಟಾರೆ ಹಿಂದಿನ ವರ್ಷದಂತೆ ಸರ್ಕಾರ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸುವ ಮೂಲಕ ರೈತರ ನೆರವಿಗೆ ಧಾವಿಸಲಿದೆ. ಹೀಗಾಗಿ ರೈತರು ಆತಂಕಕ್ಕೆ ಒಳಗಾಗಬಾರದು.
  ಬಂಡೆಪ್ಪ ಖಾಶೆಂಪೂರ, ಸಹಕಾರ ಸಚಿವೆ

Advertisement

Udayavani is now on Telegram. Click here to join our channel and stay updated with the latest news.

Next