Advertisement

ಬುಮ್ರಾ ಬಳಿಕ ಇದೀಗ ಮತ್ತೋರ್ವ ವೇಗಿ ಔಟ್; ಮುಂಬೈ ಪಾಳಯಕ್ಕೆ ಮತ್ತಷ್ಟು ಚಿಂತೆ

04:37 PM Mar 06, 2023 | Team Udayavani |

ಮುಂಬೈ: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕೂಟಕ್ಕೆ ಇನ್ನು ಕೆಲವೇ ವಾರಗಳು ಬಾಕಿಯಿದೆ. ಎಲ್ಲಾ ಫ್ರಾಂಚೈಸಿಗಳು ಸಿದ್ದತೆಯಲ್ಲಿ ತೊಡಗಿದೆ. ಕೆಲ ಆಟಗಾರರು ಈಗಾಗಲೇ ಕ್ಯಾಂಪ್ ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ.

Advertisement

ಐಪಿಎಲ್ ನ ಯಶಸ್ವಿ ತಂಡವಾಗಿರುವ ಮುಂಬೈ ಇಂಡಿಯನ್ಸ್ ತಂಡವು ಕಳೆದ ಸೀಸನ್ ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ತೋರಿತ್ತು. ಆದರೆ ಈ ಬಾರಿ ಉತ್ತಮ ಪ್ರದರ್ಶನದೊಂದಿಗೆ ತಿರುಗೇಟು ನೀಡಲು ಸಿದ್ದತೆ ನಡೆಸಿದೆ. ಆದರೆ ರೋಹಿತ್ ಶರ್ಮಾ ಪಡೆಗೆ ಇದೀಗ ಮತ್ತೊಂದು ಹಿನ್ನೆಡೆಯಾಗಿದೆ.

ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಅವರು ಈಗಾಗಲೇ ಗಾಯದ ಕಾರಣದಿಂದ ಈ ಬಾರಿಯ ಕೂಟದಿಂದ ಹೊರಬಿದ್ದಿದ್ದಾರೆ. ಬೆನ್ನುನೋವಿನಿಂದ ಬಳಲುತ್ತಿರುವ ಬುಮ್ರಾ ಸೇವೆ ಈ ಬಾರಿ ರೋಹಿತ್ ಪಡೆಗೆ ಲಭ್ಯವಾಗಿರುವುದಿಲ್ಲ. ಇದೇ ವೇಳೆ ಆಸ್ಟ್ರೇಲಿಯಾದ ವೇಗಿ ಜೇ ರಿಚರ್ಡ್ ಸನ್ ಅವರು ಕೂಡಾ ಗಾಯಗೊಂಡಿದ್ದು, ಅವರೂ ಕೂಟದಿಂದ ಹೊರಬೀಳುವ ಆತಂಕದಲ್ಲಿದ್ದಾರೆ.

ಜನವರಿ 4 ರಂದು ತನ್ನ ಮಂಡಿರಜ್ಜು ಗಾಯಗೊಂಡ ನಂತರ ರಿಚರ್ಡ್‌ಸನ್ ಯಾವುದೇ ಕ್ರಿಕೆಟ್ ಆಡಿರಲಿಲ್ಲ. ಭಾರತದಲ್ಲಿ ಮಾರ್ಚ್ 17 ರಂದು ಮುಂಬೈನಲ್ಲಿ ಪ್ರಾರಂಭವಾಗುವ ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಮತ್ತೆ ಗಾಯಗೊಂಡ ಕಾರಣ ಅವರು ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next