Advertisement

ಜಾರ್ಖಂಡ್ ನಲ್ಲಿ ಹನುಮಾನ್ ವಿಗ್ರಹ ಧ್ವಂಸ ನಂತರ ಉದ್ವಿಗ್ನ; ಇಂಟರ್ನೆಟ್ ಸೇವೆ ಸ್ಥಗಿತ

07:15 PM Apr 03, 2023 | Team Udayavani |

ರಾಂಚಿ : ಜಾರ್ಖಂಡ್‌ನ ಸಾಹಿಬ್‌ಗಂಜ್‌ನಲ್ಲಿ ಸೋಮವಾರ ಮುಂಜಾನೆ ಹನುಮಾನ್ ವಿಗ್ರಹವನ್ನು ಧ್ವಂಸಗೊಳಿಸಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ಅಧಿಕಾರಿಯನ್ನು ಉಲ್ಲೇಖಿಸಿ ವರದಿ ಮಾಡಿದೆ.

Advertisement

ವಿಗ್ರಹವನ್ನು ರಾಂಚಿಯಿಂದ 425 ಕಿಲೋಮೀಟರ್ ದೂರದಲ್ಲಿರುವ ಸಾಹಿಬ್‌ಗಂಜ್ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಮರದ ಕೆಳಗೆ ದೇವಾಲಯದಲ್ಲಿ ಇರಿಸಲಾಗಿದೆ ಎಂದು ಸಾಹಿಬ್‌ಗಂಜ್ ಜಿಲ್ಲಾಧಿಕಾರಿ ರಾಮನಿವಾಸ್ ಯಾದವ್ ಹೇಳಿದ್ದಾರೆ. ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆಯೇ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಹಾಗೂ ಸ್ಥಳೀಯರು ದೇವಸ್ಥಾನದ ಬಳಿ ಜಮಾಯಿಸಿ ಸುಮಾರು ಒಂದು ಗಂಟೆ ಕಾಲ ರಸ್ತೆ ತಡೆ ನಡೆಸಿ ಆರೋಪಿಯನ್ನು ಬಂಧಿಸುವಂತೆ ಒತ್ತಾಯಿಸಿದರು.

ಗುಂಪನ್ನು ಚದುರಿಸಲು ಪೊಲೀಸರು ಲಾಠಿಗಳನ್ನು ಬಳಸಿದರು. ಆಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಿದೆ. ಒಬ್ಬನನ್ನು ಪೊಲೀಸರು ಬಂಧಿಸಿದ್ದಾರೆ ಮತ್ತು ಆತನನ್ನು ಕೂಲಂಕಷವಾಗಿ ವಿಚಾರಣೆ ನಡೆಸಲಾಗುತ್ತಿದೆ. ಪಟ್ಟಣದ ಪರಿಸ್ಥಿತಿಯು ನಿಯಂತ್ರಣದಲ್ಲಿದೆ. ಮುನ್ನೆಚ್ಚರಿಕೆಯಾಗಿ, ನಾವು ಸೋಮವಾರ ಬೆಳಿಗ್ಗೆ 9 ರಿಂದ 24 ಗಂಟೆಗಳ ಕಾಲ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಈ ಪ್ರದೇಶದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸಾಹಿಬ್‌ಗಂಜ್‌ನ ಪೊಲೀಸ್ ವರಿಷ್ಠಾಧಿಕಾರಿ ಅನುರಂಜನ್ ಕಿಸ್ಪೊಟ್ಟಾ ಪಿಟಿಐಗೆ ತಿಳಿಸಿದ್ದಾರೆ.

ವಿಗ್ರಹವನ್ನು ದುರಸ್ತಿಗೊಳಿಸಿ ಅದರ ಮೂಲ ಸ್ಥಾನಕ್ಕೆ ಮರಳಿಸಲಾಗಿದೆ. ಶನಿವಾರ ಸಾಹಿಬ್‌ಗಂಜ್ ಪಟ್ಟಣದಲ್ಲಿ ದುರ್ಗಾ ವಿಗ್ರಹ ವಿಸರ್ಜನೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದ್ದು, ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಗಾಯಗೊಂಡಿದ್ದಾರೆ.ಜಾರ್ಖಂಡ್‌ನಲ್ಲಿ ‘ಚೈತಿ ದುರ್ಗಾ’ ಹಬ್ಬದ ಸಮಯದಲ್ಲಿ ದುರ್ಗಾ ದೇವಿಯನ್ನು ಪೂಜಿಸಲಾಗುತ್ತದೆ, ಇದು ವರ್ಷದ ಈ ಸಮಯದಲ್ಲಿ ನಡೆಯುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next