Advertisement

ಪ್ರಥಮ ದರ್ಜೆ ಕ್ರಿಕೆಟ್‌: ಜಾರ್ಖಂಡ್‌ 1,008 ರನ್‌ ಲೀಡ್‌ ದಾಖಲೆ!

11:19 PM Mar 16, 2022 | Team Udayavani |

ಕೋಲ್ಕತಾ: ಪ್ರಥಮ ದರ್ಜೆ ಕ್ರಿಕೆಟ್‌ ಇತಿಹಾಸದಲ್ಲೇ ಅತ್ಯಧಿಕವೆನಿಸಿದ 1,008 ರನ್‌ ಲೀಡ್‌ ದಾಖಲೆಯೊಂದಿಗೆ ಜಾರ್ಖಂಡ್‌ ತಂಡ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್‌ ತಲುಪಿದೆ.

Advertisement

ಅದು ಈ ಸಾಧನೆಗೈದದ್ದು ದುರ್ಬಲ ನಾಗಾಲ್ಯಾಂಡ್‌ ವಿರುದ್ಧ. ಏಕೈಕ ಪ್ರಿ-ಕ್ವಾರ್ಟರ್‌ ಫೈನಲ್‌ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತು.

ಜಾರ್ಖಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ 880 ರನ್‌ ರಾಶಿ ಹಾಕಿತು.

ಜವಾಬಿತ್ತ ನಾಗಾಲ್ಯಾಂಡ್‌ 289ಕ್ಕೆ ಆಲೌಟ್‌ ಆಯಿತು. ದ್ವಿತೀಯ ಇನ್ನಿಂಗ್ಸ್‌ನಲ್ಲಿ ಜಾರ್ಖಂಡ್‌ ಸ್ಕೋರ್‌ 6 ವಿಕೆಟಿಗೆ 417 ರನ್‌. ಪಂದ್ಯ ಡ್ರಾಗೊಳ್ಳುವ ವೇಳೆ ಅದು 1,008 ರನ್‌ ಲೀಡ್‌ ಹೊಂದಿತ್ತು.

ಈ ಪಂದ್ಯದಲ್ಲಿ ಸೌರಭ್‌ ತಿವಾರಿ ನಾಯಕತ್ವದ ಜಾರ್ಖಂಡ್‌ ಒಟ್ಟು 1,297 ರನ್‌ ಪೇರಿಸಿತು. 3 ಶತಕ ಹಾಗೂ ಒಂದು ದ್ವಿಶತಕ ದಾಖಲಾಯಿತು.

Advertisement

4ನೇ ದಿನದ ಅಂತ್ಯಕ್ಕೆ 723 ರನ್‌ ಮುನ್ನಡೆ ಹೊಂದಿದ್ದ ಜಾರ್ಖಂಡ್‌ ಅಂತಿಮ ದಿನ ಗೆಲುವಿಗೆ ಪ್ರಯತ್ನಿಸದೆ ಬ್ಯಾಟಿಂಗ್‌ ಮುಂದುವರಿಸಿದ್ದು ಅನೇಕರ ಅಸಮಾಧಾನಕ್ಕೆ ಕಾರಣವಾಗಿದೆ. ಕ್ವಾರ್ಟರ್‌ ಫೈನಲ್‌ಗೆ ಬ್ಯಾಟಿಂಗ್‌ ಅಭ್ಯಾಸ ನಡೆಸುವುದು ನಮ್ಮ ಉದ್ದೇಶವಾಗಿತ್ತು ಎಂದಿದ್ದಾರೆ ತಿವಾರಿ.

ಜಾರ್ಖಂಡ್‌ನ‌ ದ್ವಿತೀಯ ಸರದಿಯಲ್ಲಿ ಅನುಕೂಲ್‌ ರಾಯ್‌ 153 ರನ್‌ ಬಾರಿಸಿದರು. ಕ್ರಮವಾಗಿ 266 ಮತ್ತು 89 ರನ್‌ ಹೊಡೆದ ಕುಮಾರ ಕುಶಾಗ್ರ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಐಪಿಎಲ್‌ ಬಳಿಕ ರಣಜಿ ಟ್ರೋಫಿ ಕ್ವಾರ್ಟರ್‌ ಫೈನಲ್ಸ್‌ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌: ಜಾರ್ಖಂಡ್‌-880 (ಕುಶಾಗ್ರ 266, ಶಬಾಜ್‌ ನದೀಂ 177, ವಿರಾಟ್‌ ಸಿಂಗ್‌ 107, ಲೆಮುcರ್‌ 179ಕ್ಕೆ 4, ಕೆನ್ಸೆ 166ಕ್ಕೆ 3) ಮತ್ತು 6 ವಿಕೆಟಿಗೆ 417 (ಅನುಕೂಲ್‌ 153, ಜೊನಾಥನ್‌ 109ಕ್ಕೆ 3). ನಾಗಾಲ್ಯಾಂಡ್‌-289 (ಚೇತನ್‌ ಬಿಷ್ಟ್ ಔಟಾಗದೆ 122, ನದೀಂ 70ಕ್ಕೆ 3). ಪಂದ್ಯಶ್ರೇಷ್ಠ: ಕುಮಾರ ಕುಶಾಗ್ರ.

Advertisement

Udayavani is now on Telegram. Click here to join our channel and stay updated with the latest news.

Next