Advertisement

Jharkhand: ಸಂಸದ ಧೀರಜ್‌ ಬಳಿ ಸಿಕ್ಕಿದ್ದು 353 ಕೋಟಿ

12:04 AM Dec 11, 2023 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ರಾಜ್ಯಸಭಾ ಸದಸ್ಯ ಧೀರಜ್‌ ಸಾಹು ಮತ್ತವರ ಸಹೋದರರಿಗೆ ಸೇರಿದ ಕಂಪೆನಿಗಳಿಂದ ವಶಪಡಿಸಿಕೊಂಡಿದ್ದ ಹಣ ಎಣಿಕೆ ಮುಕ್ತಾಯವಾಗಿದೆ. ಅದರ ಪ್ರಕಾರ ಬರೋಬ್ಬರಿ 350 ಕೋಟಿ ರೂ. ನಗದು ಅವರಿಗೆ ಸೇರಿದ ಸ್ಥಳದಲ್ಲಿ ಇದ್ದದ್ದು ದೃಢಪಟ್ಟಿದೆ. ಅದನ್ನು ಎಣಿಕೆ ಮಾಡಲು ಒಟ್ಟು 40 ಯಂತ್ರಗಳನ್ನು ಬಳಕೆ ಮಾಡಿಕೊಳ್ಳಲಾಗಿತ್ತು.

Advertisement

ಇದನ್ನು ಬಲವಾದ ಶಸ್ತ್ರವನ್ನಾಗಿ ಬಳಸಿಕೊಂಡಿರುವ ಬಿಜೆಪಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ರಾಹುಲ್‌ ನೀವೇಕೆ ಮೌನವಾಗಿದ್ದೀರಿ? ಇದು ನವಭಾರತ. ಇಲ್ಲಿ ರಾಜವಂಶದ ಹೆಸರಲ್ಲಿ ಜನರನ್ನು ಶೋಷಣೆ ಮಾಡುವುದಕ್ಕೆ ಅವಕಾಶ ನೀಡುವುದಿಲ್ಲ. ನೀವು ಓಡುತ್ತ ಓಡುತ್ತ ಸುಸ್ತಾಗಿರಬಹುದು, ಆದರೆ ಕಾನೂನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕುಟುಕಿದ್ದಾರೆ. ಮಾತ್ರವಲ್ಲ, ಕಾಂಗ್ರೆಸ್‌ ಭ್ರಷ್ಟಾಚಾರದ ಭರವಸೆ ನೀಡಿದರೆ, ಮೋದಿ ಯವರು ಭ್ರಷ್ಟಾಚಾರದ ವಿರುದ್ಧ ಕ್ರಮ ತೆಗೆದುಕೊಳ್ಳುವ ಭರವಸೆಯಾಗಿದ್ದಾರೆ. ಜನರಿಂದ ವಸೂಲಿ ಮಾಡಿರುವ ಪ್ರತೀ ರೂ.ಅನ್ನೂ ವಾಪಸ್‌ ಮರಳಿಸಬೇಕು ಎಂದು ನಡ್ಡಾ ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next