Advertisement

Jharkhand; ವಿಪಕ್ಷಗಳ ವಿರುದ್ಧ ಮೋದಿ ಮೀಸಲು ಅಸ್ತ್ರ

01:08 AM Nov 05, 2024 | Team Udayavani |

ರಾಂಚಿ: ಝಾರ್ಖಂಡ್‌ನ‌ಲ್ಲೂ ಈಗ ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಪಕ್ಷಗಳ ವಿರುದ್ಧ “ಮೀಸಲಾತಿ ಅಸ್ತ್ರ’ ಪ್ರಯೋಗಿಸಿದ್ದಾರೆ. ಇಲ್ಲಿನ ಬುಡಕಟ್ಟು ಜನಾಂಗಕ್ಕೆ ನೀಡಿರುವ ಮೀಸಲನ್ನು ಕಸಿದು ಕಾಂಗ್ರೆಸ್‌ ತನ್ನ ಮತಬ್ಯಾಂಕ್‌ಗೆ ಅದನ್ನು ನೀಡಲಿದೆ ಎಂದು ಮೋದಿ ಆರೋಪಿಸಿದ್ದಾರೆ. ಸೋಮವಾರ ಝಾರ್ಖಂಡ್‌ನ‌ ಪಶ್ಚಿಮ ಸಿಂಗ್‌ಭೂಮ್‌ ಜಿಲ್ಲೆಯ ಚಾಯ್‌ಬಾಸಾದಲ್ಲಿ ರ್ಯಾಲಿ ನಡೆಸಿ ಅವರು ಮಾತನಾಡಿದರು.

Advertisement

ಇತರರು ನಿರಾಕರಿಸಿದ ಜನರನ್ನು ನಾನು ಪೂಜಿಸುತ್ತೇನೆ. ಬುಡಕಟ್ಟು ಜನರಿಗೆ ತಮ್ಮ ಹಕ್ಕು ಕಾಯ್ದಿರಿಸಿಕೊಳ್ಳಲು ಮೀಸಲನ್ನು ಬಾಬಾಸಾಹೇಬ್‌ ಅಂಬೇಡ್ಕರ್‌ ಖಚಿತಪಡಿಸಿದ್ದರು. ಆದರೆ ಅದನ್ನು ನೆಹರೂ ವಿರೋಧಿಸಿದರು. ನೆಹರೂ ಬಳಿಕವೂ ಗಾಂಧಿ ಕುಟುಂಬ ಅಧಿಕಾರದಲ್ಲಿರುವವರೆಗೂ ಮೀಸಲನ್ನು ಅವರು ವಿರೋಧಿಸಿದ್ದರು. ಇದೀಗ ಮತ್ತೆ ಅವರು(ಕಾಂಗ್ರೆಸ್‌) ಬುಡಕಟ್ಟು ಜನರ ಮೀಸಲನ್ನು ರದ್ದುಗೊಳಿಸುವುದಾಗಿ ಬಹಿರಂಗವಾಗಿ ಘೋಷಿಸಿದ್ದಾರೆ. ಅದನ್ನು ಅವರು ಅವರ “ಮತಬ್ಯಾಂಕ್‌’ಗೆ ನೀಡಲಿದ್ದಾರೆ ಎಂದು ಟೀಕಿಸಿದ್ದಾರೆ.

ಝಾರ್ಖಂಡ್‌ನ‌ ಬಿಜೆಪಿ ನಾಯಕಿ ಸೀತಾ ಸೊರೇನ್‌ ಹಾಗೂ ಮಹಾರಾಷ್ಟ್ರದ ಒಬ್ಬ ನಾಯಕಿಯನ್ನು ಕಾಂಗ್ರೆಸ್‌ ಅವಮಾನಿಸಿದೆ ಎಂದು ಆರೋಪಿಸಿದ ಮೋದಿ, “ಮಹಿಳೆಯರನ್ನು ಅವಮಾನಿಸುವುದು ಕಾಂಗ್ರೆಸ್‌ನ ಚಾಳಿ’ ಎಂದರು.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಜೆಎಂಎಂ ನೇತೃತ್ವದ ಮೈತ್ರಿಕೂಟವು ಬಾಂಗ್ಲಾದೇಶದಿಂದ ಬರುವ ಒಳನುಸುಳುಕೋರರಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಲು ಸಹಾಯ ಮಾಡುವುದರೊಂದಿಗೆ ಬುಡಕಟ್ಟು ಜನರ ಗುರುತು, ಘನತೆ ಹಾಗೂ ಅಸ್ತಿತ್ವಕ್ಕೆ ಕುತ್ತು ತಂದಿದೆ. ಒಳನುಸುಳುಕೋರರು ನಮ್ಮ ಹೆಣ್ಣುಮಕ್ಕಳು, ಭೂಮಿ ಹಾಗೂ ಅನ್ನವನ್ನು ಕಸಿಯುತ್ತಿದ್ದಾರೆ. ಝಾರ್ಖಂಡ್‌ನ‌ ಜನಸಂಖ್ಯಾಶಾಸ್ತ್ರ ಬದಲಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಜೆಎಂಎಂ ವಿರುದ್ದವೂ ವಾಗ್ಧಾಳಿ ನಡೆಸಿದರು.

ಝಾರ್ಖಂಡ್‌ ಎಲೆಕ್ಷನ್‌: ಪ್ರಧಾನಿ ಮೋದಿಗೆ ಕಾಂಗ್ರೆಸ್‌ನಿಂದ 3 ಪ್ರಶ್ನೆ
ಝಾರ್ಖಂಡ್‌ ವಿಧಾನಸಭೆ ಚುನಾವಣೆ ಕಾವು ದಿನೇ ದಿನೇ ಏರುತ್ತಿದ್ದು ಬಿಜೆಪಿ- ಕಾಂಗ್ರೆಸ್‌ ಮಧ್ಯೆ ವಾಕ್ಸಮರ ಮುಂದುವರಿದಿದೆ. ಈ ಮಧ್ಯೆ ಪ್ರಧಾನಿ ಮೋದಿ ಅವರಿಗೆ ಕಾಂಗ್ರೆಸ್‌ 3 ಪ್ರಶ್ನೆ ಕೇಳಿದ್ದು, ಝಾರ್ಖಂಡ್‌ನ‌ಲ್ಲಿ ಒಂದೇ ಒಂದು ಮತ ಕೇಳುವ ಮುನ್ನ, ಕಳೆದ 10 ವರ್ಷಗಳ ಹಿಂದೆ ನೀವು ನೀಡಿದ್ದ ಭರವಸೆಗಳ ಬಗ್ಗೆ ಉತ್ತರಿಸುವಂತೆ ಆಗ್ರಹಿಸಿದೆ. ಕೋರಾº-ಲೋಹಾರxಗಾ ಮತ್ತು ಛಾತ್ರಾ-ಗಯಾ ರೈಲು ಮಾರ್ಗ ಎಲ್ಲಿದೆ? 2014ರ ಚುನಾವಣೆಯಲ್ಲಿ ಮೋದಿಯವರು ಝಾರ್ಖಂಡ್‌ಗೆ ಕೈಗಾರಿಕೆ ಮತ್ತು ಶಿಕ್ಷಣ ಯೋಜನೆಗಳ ಭರವಸೆ ನೀಡಿದ್ದರು. ಎಂಜಿನಿಯರಿಂಗ್‌, ವೈದ್ಯಕೀಯ ಕಾಲೇಜು ಎಲ್ಲಿವೆ ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ. ಮನಮೋಹನ್‌ ಸಿಂಗ್‌ ಕಾಲದಲ್ಲಿ ಐಐಎಂ ರಾಂಚಿ, ಕೇಂದ್ರೀಯ ವಿವಿಯಂಥ ಪ್ರತಿಷ್ಠಿತ ಸಂಸ್ಥೆಗಳನ್ನು ನಿರ್ಮಿಸಲಾಯಿತು ಎಂದೂ ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next