Advertisement
ಚುನಾವಣೋತ್ತರ ಸಮೀಕ್ಷೆಗಳು ಎರಡೂ ರಾಜ್ಯಗಳಲ್ಲಿ ಎನ್‌ಡಿಎ ಮೈತ್ರಿಕೂಟವೇ ಅಧಿಕಾರಕ್ಕೇರಲಿವೆ ಎಂದು ಭವಿಷ್ಯ ನುಡಿದಿವೆ. ಮಹಾರಾಷ್ಟ್ರದಲ್ಲಿ ನ.20ರಂದು ನಡೆದಿದ್ದ ಒಂದೇ ಹಂತದ ಮತದಾನದಲ್ಲಿ ಶೇ.66.05 ರಷ್ಟು ಮತದಾನವಾಗಿತ್ತು.
Related Articles
ಫಲಿತಾಂಶಕ್ಕೂ ಮುನ್ನವೇ ಮಹಾರಾಷ್ಟ್ರದಲ್ಲಿ ತಮ್ಮ ಶಾಸಕರನ್ನು ಬಿಜೆಪಿ ಖರೀದಿಸದಂತೆ ತಡೆಯಲು ರೆಸಾರ್ಟ್, ಚಾರ್ಟರ್ಡ್ ವಿಮಾನಗಳನ್ನು ಅಘಾಡಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಿದೆೆ. ಅಘಾಡಿಯು ಶಾಸಕರನ್ನು ಕರ್ನಾಟಕದ ಬೆಳಗಾವಿಯ ರೆಸಾರ್ಟ್‌ಗೆ ಕಳುಹಿಸಿಕೊಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಇದೇ ವೇಳೆ, ಸಿಎಂ ಚರ್ಚೆಯೂ ಶುರುವಾಗಿದ್ದು, ಮಹಾಯುತಿ ಮೈತ್ರಿ ಗೆದ್ದರೆ ಫಡ್ನವೀಸ್ ಅವರೇ ಸಿಎಂ ಆಗಬೇಕು ಎಂದು ಬಿಜೆಪಿ ಅಧ್ಯಕ್ಷ ಭಾವನ್‌ಕುಲೆ ಪ್ರತಿಪಾದಿಸಿದ್ದಾರೆ. ಆದರೆ ಶಿಂಧೆ ಮುಂದುವರಿಯಲಿ ಎಂದು ಅವರ ಬೆಂಬಲಿ ಗರು ಹೇಳಿದ್ದಾರೆ. ಮತ್ತೂಂದೆಡೆ ಕಾಂಗ್ರೆಸ್‌ನವರೇ ಸಿಎಂ ಆಗಲಿ ಎಂದು ರಾಜ್ಯಾಧ್ಯಕ್ಷ ಪಟೋಲೆ ಹೇಳಿದ್ದಾರೆ.
Advertisement
ವಯನಾಡ್ ಸಂಸದರಾಗುವರೇ ಪ್ರಿಯಾಂಕಾ?ಬಹು ನಿರೀಕ್ಷಿತ ವಯನಾಡ್ ಲೋಕಸಭಾ ಕ್ಷೇತ್ರದ ಫಲಿತಾಂಶ ಶನಿವಾರವೇ ಪ್ರಕಟವಾಗಲಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಪ್ರಿಯಾಂಕಾ ವಾದ್ರಾ ಸಂಸದರಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಮಧ್ಯಾಹ್ನದ ಒಳಗಾಗಿ ಉತ್ತರ ಸಿಗಲಿದೆ. ಮೊದಲ ಬಾರಿಗೆ ಪ್ರಿಯಾಂಕಾ ಸ್ಪರ್ಧಿಸಿರುವುದರಿಂದ ದೇಶಾದ್ಯಂತ ಫಲಿತಾಂಶದ ಬಗ್ಗೆ ಕುತೂಹಲ ಇದೆ. ಲೋಕಸಭೆ ಚುನಾವಣೆಯಲ್ಲಿ ರಾಯ್‌ಬರೇಲಿ ಮತ್ತು ವಯನಾಡ್‌ನಿಂದ ಸ್ಪರ್ಧಿಸಿದ್ದ ರಾಹುಲ್ ಗಾಂಧಿ 2 ಕ್ಷೇತ್ರಗಳಲ್ಲಿಯೂ ಗೆದ್ದಿದ್ದರು. ಅಂತಿಮವಾಗಿ ಅವರು ರಾಯ್‌ಬರೇಲಿ ಕ್ಷೇತ್ರ ಉಳಿಸಿಕೊಂಡು ವಯನಾಡ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರಿಂದ ಉಪಚುನಾವಣೆ ನಡೆದಿದೆ. ಪ್ರಿಯಾಂಕಾ ಗೆದ್ದರೆ ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಮೊದಲ ಬಾರಿಗೆ ಗಾಂಧಿ ಕುಟುಂಬದ ಮೂವರು ಸದಸ್ಯರು ಸಂಸತ್‌ನಲ್ಲಿ ಪ್ರಾತಿನಿಧ್ಯ ಹೊಂದಿದಂತೆ ಆಗುತ್ತದೆ. ತಾಯಿ ಸೋನಿಯಾ ಗಾಂಧಿ ರಾಜ್ಯಸಭೆ ಸದಸ್ಯೆ, ಸಹೋದರ ರಾಹುಲ್ ಗಾಂಧಿ ಲೋಕಸಭೆ ಸದಸ್ಯ. ಮಹಾಗೆ ಕರ್ನಾಟಕ ಸಚಿವ ಪರಂ ಕಾಂಗ್ರೆಸ್ ವೀಕ್ಷಕ
ಮಹಾರಾಷ್ಟ್ರ ಹಾಗೂ ಝಾರ್ಖಂಡ್ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶುಕ್ರವಾರ ಒಟ್ಟು 6 ಹಿರಿಯ ನಾಯಕರನ್ನು ವೀಕ್ಷಕರನ್ನಾಗಿ ನೇಮಿಸಿದೆ. ಆ ಪೈಕಿ ಮಹಾರಾಷ್ಟ್ರಕ್ಕೆ ಕರ್ನಾಟಕದ ಗೃಹ ಸಚಿವ ಡಾ| ಜಿ. ಪರಮೇಶ್ವರ, ಅಶೋಕ್ ಗೆಹೊÉàಟ್, ಭೂಪೇಶ್ ಬಘೇಲ್‌ರನ್ನು ನೇಮಿಸಿದ್ದರೆ, ಝಾರ್ಖಂಡ್‌ಗೆ ತಾರೀಖ್ ಅನ್ವರ್, ಮಲ್ಲು ಭಟ್ಟಿ ವಿಕ್ರಮಾರ್ಕ, ಕೃಷ್ಣ ಅಲ್ಲಾವುರು ಅವರನ್ನು ನೇಮಿಸಲಾಗಿದೆ. 48 ವಿಧಾನಸಭಾ ಕ್ಷೇತ್ರಗಳ ಉಪಸಮರ ರಿಸಲ್ಟ್ ಇಂದು
ಕರ್ನಾಟಕದ 3 ಸೇರಿ 14 ರಾಜ್ಯಗಳ 48 ಉಪಚು ನಾವಣೆ ಫಲಿತಾಂಶವೂ ಶನಿವಾರ ಪ್ರಕಟವಾಗ ಲಿದೆ. ಈ ಪೈಕಿ ಉ.ಪ್ರದೇಶದ 9, ರಾಜಸ್ಥಾನದ 7, ಪ.ಬಂಗಾಲದ 6, ಅಸ್ಸಾಂನ 5, ಪಂಜಾಬ್, ಬಿಹಾರದ ತಲಾ 4, ಕೇರಳ, ಸಿಕ್ಕಿಂ, ಮಧ್ಯಪ್ರದೇಶದ ತಲಾ 2, ಗುಜರಾತ್, ಛತ್ತೀಸ್‌ಗಢ, ಉತ್ತರಾಖಂಡದ ತಲಾ 1 ಕ್ಷೇತ್ರ ಸೇರಿವೆ.