Advertisement

ಜ್ಯುವೆಲ್ಸ್‌ ಆಫ್ ಇಂಡಿಯಾ ನಾಳೆಯಿಂದ

12:08 PM Oct 25, 2018 | |

ಬೆಂಗಳೂರು: ಜುವೆಲ್ಸ್‌ ಆಫ್ ಇಂಡಿಯಾ ವತಿಯಿಂದ ಸೇಂಟ್‌ ಜೋಸೆಫ್ ಇಂಡಿಯನ್‌ ಹೈಸ್ಕೂಲ್‌ ಮೈದಾನದಲ್ಲಿ ಅ.26ರಿಂದ 29ರವರೆಗೆ ಭಾರತದ ಅತಿ ದೊಡ್ಡ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.

Advertisement

ಬುಧವಾರ ಪ್ರಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಭರಣ ಪ್ರದರ್ಶನದ ಸಂಚಾಲಕ ಸಂದೀಪ್‌ ಬೇಕಲ್‌ ಮಾತನಾಡಿ, ದೇಶದ 125ಕ್ಕೂ ಹೆಚ್ಚು ಆಭರಣ ವ್ಯಾಪಾರಿಗಳು ಈ ಮೇಳದಲ್ಲಿ ತಮ್ಮ ವೈವಿದ್ಯಮಯ ಆಭರಣಗಳನ್ನು ಪ್ರದರ್ಶಿಸಲಿದ್ದಾರೆ. ವಿವಿಧ ಅಭಿರುಚಿಯ ಹಾಗೂ ಬಜೆಟ್‌ಗೆ ಸರಿ ಹೊಂದುವ ಮನಮೋಹ ಆಭರಣಗಳು ಒಂದೇ ಸೂರಿನಡಿ ಲಭ್ಯವಿರಲಿವೆ ಎಂದರು.

ನಟಿ ರಾಧಿಕಾ ಕುಮಾರಸ್ವಾಮಿ ಈ ವರ್ಷದ ಜ್ಯುವೆಲ್ಸ್‌ ಆಫ್ ಇಂಡಿಯಾ ರಾಯಭಾರಿಯಾಗಿದ್ದಾರೆ. ಈ ಬಾರಿಯ ಪ್ರದರ್ಶನದಲ್ಲಿ ಭೀಮಾ ಜ್ಯುವೆಲ್ಲರ್ ಮತ್ತು ಜೋಯಲುಕ್ಕಾಸ್‌ ಜ್ಯುವೆಲರ್ ಪ್ರಮುಖ ಆಕರ್ಷಣೆಯಾಗಿವೆ. ಜ್ಯುವೆಲ್ಸ್‌ ಆಫ್ ಇಂಡಿಯಾದಲ್ಲಿ ಭೀಮಾ ಜ್ಯುವೆಲ್ಲರ್ ತನ್ನ ಭೀಮಾ ಮಹಾ ಉತ್ಸವ್‌ ಲಕ್ಕಿ ಬಹುಮಾನ ಯೋಜನೆ ಹಮ್ಮಿಕೊಂಡಿದ್ದು, ಅದೃಷ್ಟಶಾಲಿ ಗ್ರಾಹಕರಿಗೆ 11 ಟಾಟಾ ಟಿಯೋಗ ಕಾರುಗಳು, 55 ಸ್ಕೂಟರ್‌ಗಳನ್ನು ಬಹುಮಾನವಾಗಿ ನೀಡುತ್ತಿದ್ದಾರೆ ಎಂದರು. 

ಮೇಳದಲ್ಲಿ 40,000ಕ್ಕೂ ಹೆಚ್ಚು ಗ್ರಾಹಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. 49 ರೂ. ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಮೇಳದಲ್ಲಿ ಭೀಮಾ ಜ್ಯುವೆಲ್ಲರ್ಸ್‌, ಜೋಯಲುಕ್ಕಾಸ್‌, ಕ್ರಿಯೇಷನ್‌ ಜ್ಯುವೆಲ್ಲರ್ಸ್‌, ಪಂಚ ಕೇಸರಿ ಬಡೇರಾ ಜ್ಯುವೆಲ್ಲರ್, ಪಿಎಂಜೆ ಜ್ಯುವೆಲ್ಲರ್, ನೀಲಕಾಂತ ಜ್ಯುವೆಲ್ಸ್‌ , ಗಣೇಶ್‌ ಡೈಮಂಡ್‌ ಜ್ಯುವೆಲ್ಲರ್ ಸಂಸ್ಥೆಗಳು ಆಭರಣಗಳನ್ನು ಪ್ರದರ್ಶಿಸಲಿವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next