ಟಿ.ಎ. ಸೆಂಥಿಲ್.
Advertisement
“ಈಸಬೇಕು ಇದ್ದು ಜೈಸಬೇಕು’ ಎಂಬ ಮಂತ್ರವನ್ನು ಜೀವನದಲ್ಲಿ ಅಳವಡಿಸಿಕೊಂಡಿರುವ ಟಿ.ಎ. ಸೆಂಥಿಲ್ ಅವರು ಕುಗ್ರಾಮದಲ್ಲಿ ಹುಟ್ಟಿ ಬೆಂಗಳೂರಿನ ಚಿನ್ನಾಭರಣ ಕ್ಷೇತ್ರದ ಮಹಾಸಾಗರದಲ್ಲಿ ಈಜಿ ದಡ ಸೇರಿರುವ ಉತ್ಸಾಹಿ ಯುವ ವರ್ತಕ. ನಮಗೆ ಏನು ಸಿಗಬೇಕೋ ಅದನ್ನು ಭಗವಂತ ಕೊಟ್ಟೇ ಕೊಡುತ್ತಾನೆ. ‘ಭಗವಾನ್ ಕಿ ಘರ್ ಮೇ ದೇರ್ ಹೈ; ಮಘರ್ ಅಂಧೇರ್ ನಹಿ’ ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಇದನ್ನು ನಂಬಿಕೊಂಡು ನಾವು ಸರಿದಾರಿಯಲ್ಲಿ ಹೋಗಬೇಕಷ್ಟೇ. ಈ ನನ್ನ ವೃತ್ತಿ ಬದುಕು ನನಗೆ ಬಯಸದೆ ಬಂದಂಥ ಭಾಗ್ಯ. ಅದು ಇಂದು ಈ ಮಟ್ಟಕ್ಕೆ ತಂದು ನಿಲ್ಲಿಸಿದೆ ಎನ್ನುತ್ತಾರೆ ಚಿನ್ನಾಭರಣ ವ್ಯಾಪಾರಿ ಟಿ.ಎ. ಸೆಂಥಿಲ್.
ಇವುಗಳನ್ನು ಮೈಗೂಡಿಸಿಕೊಂಡು ಬೆಳೆದವರು. ಸಕಲವೂ ಅವನಿಂದ, ಎಲ್ಲದಕ್ಕೂ ಅವನೇ ಕಾರಣ, ಸರ್ವಸ್ವವೂ ಅವನಿಗೇ ಸಮರ್ಪಿತವೆಂದು ಸದಾ ಶ್ರೀ ಸಾಯಿನಾಥನನ್ನು ಸ್ಮರಿಸುತ್ತಾ ಕಾಯಕದಲ್ಲಿ ನಿರತರಾಗಿದ್ದಾರೆ. ಪ್ರಾಥಮಿಕ ಶಿಕ್ಷಣಕ್ಕೆ ನಾಸ್ತಿ ಹೇಳಿದ ಸೆಂಥಿಲ್…
ನೆರೆಯ ತಮಿಳುನಾಡಿನ ಕುಗ್ರಾಮದ ದಿವಂಗತ ಅಮೃತ ಕಂಠೇಶಯ್ಯ ಶೆಟ್ಟಿ ಹಾಗೂ ಶ್ರೀಮತಿ ಧನಲಕ್ಷ್ಮೀಯವರ ಎರಡನೇ ಪುತ್ರ ಟಿ.ಎ. ಸೆಂಥಿಲ್ ಅವರಿಗೆ ಅಷ್ಟಾಗಿ ವಿದ್ಯೆ ತಲೆಗೆ ಹತ್ತದಿದ್ದರೂ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣಮುಗಿಸಿ, ಎಂಟನೇ ವರ್ಷದಲ್ಲೇ ಊರನ್ನು ಬಿಟ್ಟು ಬೆಂಗಳೂರಿಗೆ ಬಂದರು. ತಂದೆಯವರು ಚಿಲ್ಲರೆ ಅಂಗಡಿ ಇಟ್ಟುಕೊಂಡಿದ್ದರಿಂದ ಸೆಂಥಿಲ್ ಅವರಿಗೆ ಬಾಲ್ಯದಿಂದಲೇ ವ್ಯವಹಾರ ಜ್ಞಾನ ಬೆಳೆದಿತ್ತು. ಅಂದಿನ ಕುಟುಂಬದ ಆರ್ಥಿಕ ಸ್ಥಿತಿಯೂ ಸರಿಯಿರಲಿಲ್ಲ ಹಾಗೂ ಶಾಲೆಗೆ ಹೋಗಲು ಇಷ್ಟವಿಲ್ಲದ ಸೆಂಥಿಲ್ ವಿದ್ಯೆ ನಾಸ್ತಿ ಹೇಳಿ ಸಹೋದರಿಯರ ನೆರವಿನೊಂದಿಗೆ ಬೆಂಗಳೂರು ಸೇರಿದರು. ಬೆಂಗಳೂರು ನಗರಕ್ಕೆ ಕಾಲಿಟ್ಟಾಗ ಬೆಂಕಿಯಿಂದ ತೆಗೆದು ಬಾಣಲೆಗೆ ಹಾಕಿದಂತಾಯ್ತು.
Related Articles
Advertisement
ಸತತ ಐದಾರು ವರ್ಷಗಳು ಆ ಚಿನ್ನದ ಅಂಗಡಿಯಲ್ಲಿ ಕೆಲಸ ಮಾಡಿದ ಅವರು ಕಾರ್ಯ ನಿರ್ವಹಿಸುತ್ತಿದ್ದ ಚಿನ್ನದಂಗಡಿ ಮಾಲೀಕರಸಹಕಾರ, ಪ್ರೀತಿಯಿಂದ ಕೆಲಸ ಕಲಿಯಲು ಅನುಕೂಲವಾಯಿತು. ಒಬ್ಬ ಗುರುವಾಗಿ ವ್ಯಾಪಾರದ ಜ್ಞಾನವನ್ನು ತಿಳಿಸಿಕೊಟ್ಟರು.
ಚಿನ್ನಾಭರಣ ಪೂರೈಕೆಯಿಂದ ಅಂಗಡಿವರೆಗೆ: ಅಂದಿನ ದಿನಗಳಲ್ಲಿ ಅಂಗಡಿ ಮಾಲೀಕರು ಚಿನ್ನಾಭರಣಗಳನ್ನು ಅಕ್ಕಸಾಲಿಗರಿಗೆ ಕೊಟ್ಟು ಮಾಡಿಸುತ್ತಿದ್ದರು. ಇದನ್ನು ಮನಗಂಡ ಸೆಂಥಿಲ್ ಅವರು ಮಾಲೀಕರ ಅನುಮತಿ ಪಡೆದು ತಾನೇ ಚಿನ್ನಾಭರಣಗಳನ್ನು ತಯಾರು ಮಾಡಿಸಿ ಅಂಗಡಿಗೆ ಪೂರೈಸಲು ಶುರು ಮಾಡಿದರು. ಹಂತ ಹಂತವಾಗಿ ಚಿನ್ನಾಭರಣ ಪೂರೈಕೆ ವ್ಯಾಪಾರ ಕುದುರಿದ್ದಲ್ಲದೆ, ಹಣ ಸೇರುತ್ತಾ ಬಂತು. ಇದರಿಂದ ಪ್ರೇರಿತರಾದ ಸೆಂಥಿಲ್ ಒಂದು ಮೊತ್ತ ಒಟ್ಟುಗೂಡಿದ ಮೇಲೆ ಸಂಬಂಧಿಕರು, ಗೆಳೆಯರ ಸಹಾಯ ಪಡೆದು ಹಾಗೂ ತಮ್ಮನ್ನ ಬೆಳೆಸಿದ ಗುರುಗಳ ಅಪ್ಪಣೆ ಪಡೆದು ಸ್ವಂತಕ್ಕೆ ಒಂದು ಸಣ್ಣ ಚಿನ್ನದ ಅಂಗಡಿ ಮಾಡಿದರು. ಚಿನ್ನಾಭರಣ ಮಾರುಕಟ್ಟೆಯ ಜ್ಞಾನವನ್ನು ಪಡೆದ ಸೆಂಥಿಲ್ ಅವರು ಅಣ್ಣನ ಜೊತೆಗೂಡಿ ಬಸವನಗುಡಿ ಭಾಗದ ಡಿ.ವಿ.ಗುಂಡಪ್ಪ ರಸ್ತೆಯಲ್ಲಿ 20 ಅಡಿ ಉದ್ದ, 10 ಅಡಿ ಅಗಲದ ಸಣ್ಣ ಅಂಗಡಿಯೊಂದನ್ನು ತೆರೆದರು. ಅದಕ್ಕೆ ಶ್ರೀ ಸಾಯಿ ಜ್ಯುವೆಲರ್ ಎಂದು ನಾಮಕರಣವನ್ನು ಮಾಡಿದರು. ಬಸವನಗುಡಿ, ಡಿವಿಜಿ ರಸ್ತೆ, ಗಾಂಧಿಬಜಾರ್ ಹಾಗೂ ಸುತ್ತಮುತ್ತಲಿನ ಗ್ರಾಹಕರ ಒಲವನ್ನು, ವಿಶ್ವಾಸವನ್ನು ಗಳಿಸಿದ ಸೆಂಥಿಲ್
ಅವರು ದಿನದಿಂದ ದಿನಕ್ಕೆ ಬೆಳೆಯುತ್ತಾ ಹೋದರು. ಅಂಗಡಿಗೆ ಬರುವ ಗ್ರಾಹಕರ ಸಂಖ್ಯೆಯೂ ಹೆಚ್ಚಾಯ್ತು. ವ್ಯಾಪಾರ ಉತ್ತಮ
ಮಟ್ಟ ತಲುಪಿತು. ಆದರೆ, ಅಂಗಡಿಯ ವಿಸ್ತೀರ್ಣದಲ್ಲಿ ಕೊರತೆ ಕಂಡುಬಂತು. ಗ್ರಾಹಕರ ಅವಶ್ಯಕತೆಗೆ ತಕ್ಕಂತೆ ಜಾಗ ಸಾಕಾಗದಿದ್ದಾಗ ಇದೇ ಬೀದಿಯಲ್ಲಿ ಬೃಹತ್ ಮಳಿಗೆ ತೆರೆದರು. ಅಲ್ಲಿಂದ ಮುಂದುವರಿದು ಪದ್ಮನಾಭನಗರದ ಮುಖ್ಯ ರಸ್ತೆಯಲ್ಲಿ ಬೃಹತ್ ಮಳಿಗೆ ಆರಂಭಿಸಿ ತಮ್ಮ ಕಾಯಕ ಮುಂದುವರಿಸಿದ್ದಾರೆ. ಶ್ರೀ ಸಾಯಿ ಜ್ಯುವೆಲ್ಸ್ ಪ್ಯಾಲೇಸ್ ಸ್ಥಾಪನೆ:
ಬೆಂಗಳೂರು ದಕ್ಷಿಣ ಭಾಗದ ಪ್ರಮುಖ ಬಡಾವಣೆ ಪದ್ಮನಾಭನಗರದ ಸುತ್ತಮುತ್ತಲ ಜನತೆಗೆ ಅನುಕೂಲವಾಗಲೆಂದು ಅತ್ಯಾಧುನಿಕ ಬೃಹತ್ ಕಟ್ಟದಲ್ಲಿ ಶ್ರೀ ಸಾಯಿ ಜ್ಯುವೆಲ್ಸ್ ಪ್ಯಾಲೇಸ್ ಹಾಗೂ ಪಾರ್ಟಿ ಹಾಲ್ ಆರಂಭಿಸಿದರು. ಚಿನ್ನಾಭರಣ ಕ್ಷೇತ್ರದಲ್ಲಿ ಅಪಾರ ಅನುಭವ ಗಳಿಸಿರುವ ಸೆಂಥಿಲ್ ಅವರು ಗ್ರಾಹಕರ ಹಾಗೂ ಮಾರುಕಟ್ಟೆಯ ಏರಿಳಿತಕ್ಕೆ ತಕ್ಕಂತೆ ಆಭರಣಗಳನ್ನು ಮಾರಾಟ
ಮಾಡುತ್ತಿದ್ದಾರೆ. ಗ್ರಾಹಕರ ಆಕರ್ಷಣೆಗಾಗಿ ವಿಶೇಷ ರಿಯಾಯಿತಿ, ಹಬ್ಬ ಹರಿದಿನಗಳಲ್ಲಿ ವಿಶೇಷ ಕೊಡುಗೆಗಳು, ಯೋಜನೆಗಳನ್ನು ರೂಪಿಸಿ ಗ್ರಾಹಕರ ನಂಬಿಕೆ, ವಿಶ್ವಾಸವೇ ಬಂಡವಾಳವಾಗಿಸಿಕೊಂಡಿದ್ದಾರೆ. ವ್ಯಾಪಾರಂ ದ್ರೋಹ ಚಿಂತನಂ ತತ್ವಕ್ಕೆ ವಿರುದ್ಧವಾಗಿ ದೈನಂದಿನ ಚಿನ್ನದ ಬೆಲೆಯಲ್ಲಿ ಉಂಟಾಗುವ ಏರಿಳಿತವನ್ನು ಗ್ರಾಹಕರಿಗೆ ತಿಳಿಯುವಂತೆ ಪ್ರದರ್ಶಿಸುತ್ತಾ, ಪಾರದರ್ಶಕ ವ್ಯವಹಾರ ನಡೆಸುತ್ತಿದ್ದಾರೆ. ಅದೇ ರೀತಿ ಹಾಲ್‌ಮಾರ್ಕ್ ಚಿನ್ನದೊಡವೆಗಳು, ಪ್ರಮಾಣೀಕೃತ ವಜ್ರದೊಡವೆಗಳು, ಪ್ಲಾಟಿನಂ ಹಾಗೂ ಉತ್ತಮ ಬೆಳ್ಳಿ ವಸ್ತುಗಳ ಮೇಲೆ ಗ್ಯಾರಂಟಿ ನೀಡುವ ಮೂಲಕ ಗ್ರಾಹಕರ ನಂಬಿಕೆಗೆ ಪಾತ್ರರಾಗಿದ್ದಾರೆ. ಗ್ರಾಹಕರ ಬೇಡಿಕೆಗೆ ತಕ್ಕಂಥ ಗುಣಮಟ್ಟದ ಲೈಟ್ ವೆಯಿಟ್ ಜ್ಯುವೆಲ್ಸ್, ಫ್ಯಾಷನ್ ಜ್ಯುವೆಲರಿ, ಟ್ರೆಡಿಷನಲ್ ಜ್ಯುವೆಲರಿ, ಎತ್ನಿಕ್ ಜ್ಯುವೆಲರಿ ಮುಂತಾದ ಚಿನ್ನಾಭರಣಗಳು, ಪ್ಲಾಟಿನಂ, ವಜ್ರದ ಒಡವೆಗಳು, ಬೆಳ್ಳಿ ಆಭರಣ ಹಾಗೂ ವಸ್ತುಗಳ ಬೃಹತ್ ಖಜಾನೆ ಹೊಂದಿದ್ದಾರೆ. ಪಾರ್ಟಿ ಹಾಲ್ ಪ್ರಾರಂಭ
ಬಂಗಾರದ ಮಾರಾಟದ ಜೊತೆ, ಇದೇ ಕಟ್ಟಡದಲ್ಲಿ ಸಣ್ಣ ಪಾರ್ಟಿ ಹಾಲ್ ಕೂಡ ಮಾಡಿದ್ದಾರೆ. ವಿವಾಹ ನಿಶ್ಚಿತಾರ್ಥ, ಹುಟ್ಟಿದಬ್ಬ,
ನಾಮಕರಣ ಮುಂತಾದ ಕಾರ್ಯಕ್ರಮಗಳನ್ನು ಆಚರಿಸಲು ಅನುಕೂಲವಾಗುವಂತ ಐಷಾರಾಮಿ ಪಾರ್ಟಿ ಹಾಲ್ ಅನ್ನು
ಆರಂಭಿಸಿದ್ದಾರೆ. ಶ್ರೀ ಸಾಯಿ ಸಿನಿಮಾ
ಸೆಂಥಿಲ್ ಅವರಿಗೆ ಬಾಲ್ಯದಿಂದಲೇ ಭಕ್ತಿ ಚಿತ್ರ ನೋಡುವುದು, ಭಕ್ತಿಗೀತೆಗಳನ್ನು ಕೇಳುವುದೆಂದರೆ ಬಹಳ ಇಷ್ಟ. ಇನ್ನೂ ಶಿರ್ದಿ
ಸಾಯಿಬಾಬಾರ ಪರಮ ಭಕ್ತ. ಆದ್ದರಿಂದ ಅವರ ನೆನಪಿಗಾಗಿ ಶ್ರೀ ಸಾಯಿ ಎಂಬ ಭಕ್ತಿ ಪ್ರಧಾನ ಸಿನಿಮಾ ನಿರ್ಮಾಣ ಮಾಡಿದ್ದಲ್ಲದೆ, ಆ
ಚಿತ್ರದಲ್ಲಿ ನಟನೆಯನ್ನೂ ಮಾಡಿದ್ದಾರೆ. ಜೊತೆಯಲ್ಲಿ ಓಂಕಾರ ಸ್ವರೂಪ ಶ್ರೀ ಅಯ್ಯಪ್ಪನೆಂದರೂ ಕೂಡ ಇಷ್ಟ ಅವರಿಗೆ. ಇದರ ಜೊತೆಯಲ್ಲಿ ತಾಯಿ- ತಂದೆ, ಗೆಳೆತನ, ರೈತರ, ಕನ್ನಡನಾಡಿನ ಬಗ್ಗೆ ಹಾಡನ್ನು ರಚನೆ ಮಾಡಿಸಿದ್ದಾರೆ. ಸದ್ಯದಲ್ಲಿ ಅದನ್ನು ಬಿಡುಗಡೆ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ. ಸಮಾಜ ಸೇವೆ ಸಮಾಜಸೇವೆ ಎಂಬುದು ಒಂದು ಕೈಯಿಂದ ಕೊಟ್ಟದ್ದು, ಮತ್ತೂಂದು ಕೈಗೂ ತಿಳಿಯಬಾರದು ಎನ್ನುವ ಸೆಂಥಿಲ್ ಅವರಿಗೆ ಸಹಾಯ ಮಾಡಿದ್ದನ್ನು ಪ್ರಚಾರ ಪಡೆಯುವ ಇಷ್ಟವಿಲ್ಲ. ತಮ್ಮದೇ ವ್ಯವಸ್ಥೆಯಡಿ ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಗೋಪಾಲ್ ತಿಮ್ಮಯ್ಯ