Advertisement
-ಮ್ಯಾಚಿಂಗ್ ಮ್ಯಾಚಿಂಗ್ ಬೇಡಹಿಂದೆಲ್ಲಾ, ಉಡುಪಿಗೆ ತಕ್ಕಂತೆ ಜ್ಯುವೆಲರಿ ಧರಿಸುವ ಟ್ರೆಂಡ್ ಇತ್ತು. ಈಗ, ವಿರುದ್ಧ ಬಣ್ಣದ ಬಳೆ, ಸರ, ಕಿವಿಯೋಲೆ ಧರಿಸುವುದೇ ಸ್ಟೈಲ್. ಬಟ್ಟೆ ಹಾಗೂ ಒಡವೆಯನ್ನು ಮಿಕ್ಸ್ ಅಂಡ್ ಮ್ಯಾಚ್ ಮಾಡಿ, ಲುಕ್‌ಗೊಂದು ಹೊಸ ಸ್ಪರ್ಶ ನೀಡಿ.
ಧರಿಸಿರುವ ಉಡುಪು, ಮಲ್ಟಿ ಕಲರ್ (ಒಂದಕ್ಕಿಂತ ಹೆಚ್ಚು ಬಣ್ಣ)ನದ್ದಾಗಿದ್ದರೆ, ಅದರಲ್ಲಿ ತಿಳಿಯಾದ ಬಣ್ಣ ಯಾವುದೋ, ಆ ಬಣ್ಣದ ಜ್ಯುವೆಲರಿ ಧರಿಸಿ. ಒಂದು ವೇಳೆ, ತಿಳಿಯಾದ ಬಣ್ಣವೇ ಬಟ್ಟೆಯ ತುಂಬೆಲ್ಲಾ ಆವರಿಸಿದ್ದರೆ, ಬಟ್ಟೆಯನ್ನು ಅತಿ ಕಡಿಮೆ ಆವರಿಸಿರುವ ಬಣ್ಣದ ಜ್ಯುವೆಲರಿ ಧರಿಸಿದರೆ ಚೆನ್ನ. ( ಗಾಢ ಹಸಿರು ಬಣ್ಣದ ಚಿತ್ತಾರವಿರುವ ಬಿಳಿ ಬಣ್ಣದ ಬಟ್ಟೆಗೆ ಹಸಿರು ಬಣ್ಣದ ಜ್ಯುವೆಲರಿ, ಹಳದಿ, ಕೆಂಪು, ನೀಲಿ ಬಣ್ಣದ ಬಟ್ಟೆಗೆ ಹಳದಿ ಆ್ಯಕ್ಸೆಸರೀಸ್ ಒಪ್ಪುತ್ತದೆ) -ಪ್ರದರ್ಶನ ಬೇಡ
ಊಟಕ್ಕೆ ಉಪ್ಪಿನಕಾಯಿ ಹೇಗೋ, ದಿರಿಸಿಗೆ ಆಭರಣಗಳೂ ಹಾಗೆಯೇ. ಹೆಚ್ಚೆಚ್ಚು ಒಡವೆಗಳನ್ನು, ಅದ್ಧೂರಿ ಎನಿಸುವಂಥ ಆ್ಯಕ್ಸೆಸರೀಸ್‌ಗಳನ್ನು ಧರಿಸಿದರೆ ಪ್ರದರ್ಶನದ ಗೊಂಬೆಯಂತೆ ಕಾಣಿಸಬಹುದು. ಡ್ರೆಸ್‌ನ ಅಂದವನ್ನೇ ಒಡವೆ ನುಂಗಿಬಿಡುವುದೂ ಉಂಟು.
Related Articles
ಆಫೀಸ್ ಪಾರ್ಟಿಗೆ ಯಾವ ಒಡವೆ, ಮದುವೆಗೆ ಯಾವ ಬಗೆಯ ಆಭರಣ, ಕಿಟಿ ಪಾರ್ಟಿಗೆ ಯಾವುದು ಅಂತ ಅರಿತುಕೊಳ್ಳುವುದು ಅಗತ್ಯ. ಸಿಂಪಲ್ ದಿರಿಸಿಗೆ ಅದ್ಧೂರಿ ಸರ-ಕಿವಿಯೋಲೆ, ಅದ್ಧೂರಿ ಡ್ರೆಸ್‌ಗೆ ಸಿಂಪಲ್ ಒಡವೆ ಧರಿಸಿದರೆ ಚೆನ್ನ.
Advertisement
-ಮೈ ಬಣ್ಣ ಮರೆಯದಿರಿಬಗೆ ಬಗೆ ಬಣ್ಣಗಳ ಜೊತೆ ಪ್ರಯೋಗ ಮಾಡುವುದು ಫ್ಯಾಷನ್‌ನ ಮೂಲ ಮಂತ್ರ. ಆದರೆ, ಮೈ ಬಣ್ಣಕ್ಕೆ ತಕ್ಕಂತೆ ವಸ್ತ್ರ-ಒಡವೆ ಧರಿಸುವುದು ಜಾಣತನ.