ಜಾರಿ ಮಾಡುತ್ತಿದೆ. ಹೀಗಾಗಿ ಮದ್ಯಪ್ರಿಯರು ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಮದ್ಯಪಾನ ಮಾಡುತ್ತಿದ್ದಾರೆ. ಇದು ಸಾರ್ವಜನಿಕರು, ಮಹಿಳೆಯರಿಗೆ ಕಿರಿಕಿರಿ ಉಂಟುಮಾಡುತ್ತಿದೆ.
Advertisement
ಪಟ್ಟಣದಲ್ಲಿ ಇರುವ ಮದ್ಯದ ಅಂಗಡಿಗಳ ಪೈಕಿ ಸಿಎಲ್ ಒಂಭತ್ತು ಪರವಾನಗಿ ಹೊಂದಿರುವ ನಾಲ್ಕು ಸಿಎಲ್, ಏಳು ಪರವಾನಗಿ ಪಡೆದಿರುವ ಎರಡು ಬಾರ್ ಆ್ಯಂಡ್ ರೆಸ್ಟೋರೆಂಟ್‌ಗಳಿವೆ. ಇಲ್ಲಿ ಮಾತ್ರ ಕುಳಿತು ಮದ್ಯಪಾನ ಮಾಡಲು ಅವಕಾಶವಿದೆ. ಉಳಿದ ಅಂದರೆ ಸಿಎಲ್ ಎರಡು ಪರವಾನಿಗೆ ಪಡೆದಿರುವ ಅಂಗಡಿಗಳಲ್ಲಿ ಮದ್ಯಪಾನ ಮಾಡಲು ಅವಕಾಶವಿಲ್ಲ. ಚುನಾವಣೆ ಸಂದರ್ಭದಲ್ಲಿ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುತ್ತದೆ. ಹೀಗಾಗಿ ಮದ್ಯ ಖರೀದಿಸಿದವರು ಅಕ್ಕಪಕ್ಕದ ಸಾರ್ವಜನಿಕ ಸ್ಥಳದ ಸಂದುಗೊಂದುಗಳನ್ನು ಹುಡುಕುತ್ತಾರೆ. ಜನಸಂಚಾರ ಕಡಿಮೆ ಇರುವ ಅಥವಾ ಸಂದಿಗೊಂದಿಗಳಲ್ಲಿ ಕುಳಿತು ಮದ್ಯಪಾನ ಮಾಡುತ್ತಾರೆ. ಕೆಲವೊಮ್ಮೆ ರಸ್ತೆ ಪಕ್ಕದಲ್ಲೇ ಮದ್ಯಪಾನ ಮಾಡುತ್ತಿರುವ ದೃಶ್ಯಗಳು ಕಂಡುಬರುತ್ತವೆ.
ಬಾಟಲ್‌ಗಳು ಕಾಣಸಿಗುತ್ತವೆ. ಸಂಜೆಯಾಗುವುದೇ ತಡ ಬೈಕ್, ಕಾರುಗಳಲ್ಲಿ ಮದ್ಯದ ಬಾಟಲ್ ಗಳೊಂದಿಗೆ ತೆರಳಿ ಕುಡಿದು ರಸ್ತೆ ಮೇಲೆ ಬಾಟಲ್ ಒಡೆದು ಹಾಕಲಾಗುತ್ತಿದೆ. ಒಟ್ಟಾರೆಯಾಗಿ ಬೈಪಾಸ್ ರಸ್ತೆ ಕುಡುಕರ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ಸಂಜೆ ವಾಯು ವಿಹಾರಕ್ಕೆ ಹೋಗುವವರು ತೀವ್ರ ಕಿರಿಕಿರಿ ಅನುಭವಿಸುತ್ತಿದ್ದಾರೆ. ಮಹಿಳೆಯರು ಸಂಜೆ ಸಮಯದಲ್ಲಿ ಅಡ್ಡಾಡಲು ಹಿಂಜರಿಯುತ್ತಿದ್ದಾರೆ. ರಸ್ತೆ ಪಕ್ಕದಲ್ಲಿ ಮತ್ತು ಜಮೀನುಗಳ ಅಂಚಿನಲ್ಲಿ ಮದ್ಯದ ಬಾಟಲ್‌ಗಳು ಕಂಡುಬರುತ್ತದೆ. ಚುನಾವಣೆ ಇರುವುದರಿಂದ ಮದ್ಯದಂಗಡಿಗಳ ಮುಂದೆ ನಿಂತುಕೊಂಡು ಮದ್ಯ ಸೇವನೆ ಮಾಡಬೇಡಿ. ಅಬಕಾರಿ ಇಲಾಖೆ ಅ ಧಿಕಾರಿಗಳು ಬಂದು ಬೈಯುತ್ತಾರೆ. ಹೀಗಾಗಿ ಬೇರೆಡೆ ಕೊಂಡೊಯ್ಯಿರಿ ಎಂದು ಮದ್ಯದಂಗಡಿ ಮಾಲೀಕರು ಹೇಳುತ್ತಾರೆ.
Related Articles
Advertisement
ಸಾರ್ವಜನಿಕ ಸ್ಥಳಗಳಲ್ಲೂ ಮದ್ಯ ಸೇವನೆಗೆ ಕಡಿವಾಣ ಹಾಕಬೇಕು. ಅಬಕಾರಿ ಹಾಗೂ ಪೊಲೀಸ್ ಇಲಾಖೆ ಅ ಧಿಕಾರಿಗಳು ಗಸ್ತು ನಡೆಸಿ ಈ ಕುರಿತು ನಿಗಾ ಇಡಬೇಕು ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ. ಜೇವರ್ಗಿ: ಪಟ್ಟಣದ ವಿಜಯಪುರ- ಕಲಬುರಗಿ ಬೈಪಾಸ್ ರಸ್ತೆ ಅಕ್ಕ ಪಕ್ಕದಲ್ಲಿ ಬಿದ್ದಿರುವ ಮದ್ಯದ ಬಾಟಲ್‌ಗಳು.
ವಿಜಯಕುಮಾರ ಎಸ್.ಕಲಾ