Advertisement
ಕರಕಿಹಳ್ಳಿ ಗ್ರಾಪಂ ಚುನಾವಣೆಯ 7 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬೆಣ್ಣೂರ ಗ್ರಾಮದಿಂದ ಬಿಜೆಪಿ ಬೆಂಬಲಿತ ದೇವಕ್ಕಿ ಶಿವಾನಂದ, ಭಾಗಮ್ಮ ಮುತ್ತಪ್ಪ, ವಸ್ತಾರಿ ಗ್ರಾಮದಿಂದ ಬಿಜೆಪಿ ಬೆಂಬಲಿತ ದೊಡ್ಡಪ್ಪಗೌಡ ಮಾಲಿಪಾಟೀಲ, ದ್ರೌಪತಿ ಸಂಜೀವಕುಮಾರ, ವರವಿ ಗ್ರಾಮದಿಂದ ಬಿಜೆಪಿ ಬೆಂಬಲಿತ ಶಿವಾನಂದಗೌಡ ಮಾಲಿಪಾಟೀಲ, ಶಮಸುದ್ದೀನ್ ಮುಲ್ಲಾ ಜಯಶಾಲಿಯಾಗಿದ್ದಾರೆ.
Related Articles
ಮಡಿವಾಳಪ್ಪ, ಕಾಶಿಬಾಯಿ ಸುಭಾಶ್ಚಂದ್ರ, ಕಾಂತಪ್ಪ ಮಹಾದೇವಪ್ಪ ಚುನಾಯಿತರಾಗಿದ್ದಾರೆ. ಮದರಿ ಗ್ರಾಪಂನಲ್ಲಿ ಒಟ್ಟು 14 ಸ್ಥಾನಗಳ ಪೈಕಿ 6 ಅವಿರೋಧ, 8 ಸ್ಥಾನಗಳಿಗೆ ಚುನಾವಣೆ, ರಂಜಣಗಿ ಗ್ರಾಪಂನಲ್ಲಿ ಒಟ್ಟು 21 ಸ್ಥಾನಗಳ ಪೈಕಿ 4 ಅವಿರೋಧ, 17 ಸ್ಥಾನಗಳಿಗೆ ಚುನಾವಣೆ ಹಾಗೂ ಕರಕಿಹಳ್ಳಿ ಗ್ರಾಪಂನಲ್ಲಿ ಒಟ್ಟು 17 ಸ್ಥಾನಗಳ ಪೈಕಿ 10 ಅವಿರೋಧ, 7 ಸ್ಥಾನಗಳಿಗೆ ಚುನಾವಣೆ ನಡೆದಿತ್ತು.
Advertisement
ವಿಜಯೋತ್ಸವ: ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಜಯಸಾಧಿಸಿದ ನಂತರ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪ್ಪಗೌಡಪಾಟೀಲ ನೇತೃತ್ವದಲ್ಲಿ ವಿಜಯೋತ್ಸವ ಆಚರಿಸಲಾಯಿತು. ಮುಖಂಡರಾದ ರಮೇಶಬಾಬು ವಕೀಲ, ಷಣ್ಮುಖಪ್ಪ
ಸಾಹು ಗೋಗಿ, ಭಗವಚಿತ್ರಾಯ ಬೆಣ್ಣೂರ, ಬಾಪುಗೌಡ ಬಿರಾಳ, ಮಹಾಂತಪ್ಪ ಸಾಹು ಹರವಾಳ, ಸುನೀಲ ಸಜ್ಜನ,
ಅಕ್ಬರ್ ಸಾಬ ಮುಲ್ಲಾ, ಅಂಬರೀಶ ರಾಠೊಡ ಹಾಗೂ ಮತ್ತಿತರರು ಇದ್ದರು. ಕಾಂಗ್ರೆಸ್: ಕಾಂಗ್ರೆಸ್ ಮುಖಂಡ ರಾಜಶೇಖರ ಸೀರಿ ನೇತೃತ್ವದಲ್ಲಿ ಕಾಂಗ್ರೆಸ್ ಕಚೇರಿ ಎದುರು ಪಟಾಕಿ ಸಿಡಿಸಿ ಸಿಹಿ
ವಿತರಿಸಿ ವಿಜಯೋತ್ಸವ ಆಚರಿಸಲಾಯಿತು. ನೀಲಕಂಠ ಅವುಂಟಿ, ರವಿ ಕೋಳಕೂರ, ಶರಣು ಗುತ್ತೇದಾರ, ಪ್ರಕಾಶ
ಫುಲಾರೆ, ಮಹಿಮೂದ್ ನೂರಿ, ರಹೇಮಾನ ಪಟೇಲ ಮತ್ತಿತರರು ಇದ್ದರು.