Advertisement

ಕೋರೆಗಾಂವ ಯುದ್ಧ ಸ್ವಾಭಿಮಾನದ ಪ್ರತೀಕ

05:18 PM Jan 02, 2020 | Naveen |

ಜೇವರ್ಗಿ: ದೇಶದ ಇತಿಹಾಸದಲ್ಲಿ ಹೆಣ್ಣಿಗಾಗಿ, ಮಣ್ಣಿಗಾಗಿ, ಹೊನ್ನಿಗಾಗಿ ಯುದ್ಧ ನಡೆದಿವೆ ಆದರೆ ಸ್ವಾಭಿಮಾನಕ್ಕಾಗಿ ನಡೆದಿದ್ದು ಭೀಮಾ ಕೋರೆಗಾಂವ ಯುದ್ಧ ಎಂದು ಸೊನ್ನ ಎಸ್‌ಜಿಎಸ್‌ವಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಿಜಲಿಂಗ ದೊಡ್ಮನಿ ಹೇಳಿದರು.

Advertisement

ಪಟ್ಟಣದ ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತದಲ್ಲಿ ಬುಧವಾರ ಏರ್ಪಡಿಸಿದ್ದ 202ನೇ ಭೀಮಾ ಕೋರೆಗಾಂವ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಉಪನ್ಯಾಸ ನೀಡಿದರು. ಭೀಮಾ ಕೋರೆಗಾಂವ ದಲಿತರ ಹಕ್ಕುಗಳಿಗಾಗಿ ನಡೆದ ಹೋರಾಟವಾಗಿದೆ. ಪೇಶ್ವೆಗಳು ಆಚರಣೆ ಮಾಡುತ್ತಿದ್ದ ಅಸ್ಪ್ರಶ್ಯತೆಯ ವಿರುದ್ದದ ಹೋರಾಟವೇ ಮಹಾರ್‌ ದಂಗೆ ಎನ್ನಲಾಗುತ್ತಿದ್ದು, ಇದು ದಲಿತರು ತಮ್ಮ ಹಕ್ಕುಗಳಿಗಾಗಿ ನಡೆಸಿದ ಹೋರಾಟವಾಗಿದೆ. ಇದು ಯಾವುದೇ ಸಾಮ್ರಾಜ್ಯದ ವಿರುದ್ಧ ನಡೆದ ಹೋರಾಟವಲ್ಲ. ಒಂದು ವ್ಯವಸ್ಥೆಯಿಂದ ಬೇಸತ್ತ ಜನರ ಸ್ವಾಭಿಮಾನದ ದಂಗೆಯಾಗಿದೆ ಎಂದರು.

500 ಜನ ಮಹಾರ್‌ ಸೈನಿಕರು, ಪೇಶ್ವೆಗಳು, 20 ಸಾವಿರ ಅಶ್ವದಳ, ಎಂಟು ಸಾವಿರ ಕಾಲ್ದಳಗಳನ್ನು ಹೊಂದಿದ ದೊಡ್ಡ ಸೈನ್ಯದ ವಿರುದ್ಧ ಹೋರಾಡಿ ಜಯಿಸಿದರು. ಅಂದು ನಡೆದ ಘಟನೆ ಸವಿನೆನಪಿಗಾಗಿ ಬ್ರಿಟಿಷರು ಮಹಾರಾಷ್ಟ್ರದ ಕೋರೆಗಾಂವದಲ್ಲಿ ವಿಜಯಸ್ಥಂಭ ನಿರ್ಮಿಸಿದ್ದರು. ಅಂತಹ ಇತಿಹಾಸವನ್ನು ಅರಿತ ಡಾ| ಅಂಬೇಡ್ಕರ್‌ ಅವರು ಕುಟುಂಬ ಸಮೇತರಾಗಿ ಈ ಸ್ಥಳಕ್ಕೆ ಬಂದು ಹೋಗುತ್ತಿದ್ದರು.

ದಲಿತರ ಸ್ವಾಭಿಮಾನದ ಸಂಕೇತವಾದ ಈ ಸ್ಥಳಕ್ಕೆ ಇಂದು ಲಕ್ಷಾಂತರ ಜನರು ಸೇರುತ್ತಿರುವುದು ಸಂತಸದ ವಿಷಯವಾಗಿದೆ. ದಲಿತರು ತಮ್ಮ ಇತಿಹಾಸವನ್ನು ತಾವೇ ರಚಿಸಬೇಕಾದ ಅನಿವಾರ್ಯತೆ ಇದೆ. ಇವತ್ತಿಗೂ ಸಹ ಮಹಾರ್‌ ಸೈನ್ಯದ ಶೌರ್ಯ ಯಾವ ಪಠ್ಯಪುಸ್ತಕದಲ್ಲಿಯೂ ದಾಖಲಾಗದಿರುವುದು ದುರಂತ ಎಂದರು.

ನನ್ನ ಜನಕ್ಕೆ ಆಯುಧ ಹಿಡಿಯುವ ಅಧಿಕಾರ ನೀಡಿದ್ದರೆ, ದೇಶ ಯಾವತ್ತೂ ಸ್ವಾತಂತ್ರ್ಯ ಕಳೆದುಕೊಳ್ಳುತ್ತಿರಲಿಲ್ಲ ಎಂದು ಬಾಬಾ ಸಾಹೇಬರು ಹೇಳಿದ್ದರು. ಡಾ| ಅಂಬೇಡ್ಕರ್‌ ಅವರನ್ನು ದಲಿತರಿಗೆ
ಮಾತ್ರ ಸೀಮಿತ ಮಾಡುತ್ತಿರುವುದು ಸರಿಯಲ್ಲ. ಅವರೊಬ್ಬ ರಾಷ್ಟ್ರದ ನಾಯಕ. ಈ ದೇಶದ ದಲಿತರಿಗೆ 18 ಪ್ರತಿಶತ ಮೀಸಲಾತಿ ನೀಡಿದರೆ, ಹಿಂದುಳಿದ ವರ್ಗಗಳಿಗೆ 32 ಪ್ರತಿಶತ ನೀಡಿದ್ದಾರೆ.

Advertisement

ಮುಖ್ಯವಾಗಿ ಈ ದೇಶದ ಮಹಿಳೆಯರಿಗೆ ಬದುಕುವ ಹಕ್ಕು ನೀಡಿದ್ದು ಡಾ| ಅಂಬೇಡ್ಕರ್‌ ಎಂದರು. ಡಾ| ಅಶೋಕ ದೊಡ್ಮನಿ
ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಪಂ ಮಾಜಿ ಸದಸ್ಯ ಮರೆಪ್ಪ ಬಡಿಗೇರ, ದಲಿತ ಮುಖಂಡರಾದ ಭೀಮರಾಯ ನಗನೂರ, ಮಲ್ಲಣ್ಣ ಕೊಡಚಿ, ಪುಂಡಲಿಕ ಗಾಯಕವಾಡ, ಶಾಂತಪ್ಪ ಯಲಗೋಡ, ಕೆರೆಪ್ಪ ಹಿಪ್ಪರಗಿ, ಜಗದೇವಿ ಜಟ್ನಾಕರ, ಶರಣಪ್ಪ ಹೊಸಮನಿ, ಬಸಣ್ಣ ಬಬಲಾದ, ರವಿ ಕುಳಗೇರಿ, ಶ್ರೀಹರಿ ಕರಕಿಹಳ್ಳಿ, ಭೂತಾಳಿ ಹೆಗಡೆ, ಬಸವರಾಜ ಹೆಗಡೆ, ಭೀಮಾಶಂಕರ ಹರನಾಳ, ಬಸಣ್ಣ ಸರಕಾರ, ಭಾಗಣ್ಣ ಕೊಳಕೂರ, ಸಿದ್ದಪ್ಪ ಆಲೂರ, ಶಿವಕುಮಾರ ಗೋಲಾ, ವಿಶ್ವರಾಧ್ಯ ಮಾಯಿ, ಮಿಲಿಂದ ಸಾಗರ, ವಿಶ್ವ ಆಲೂರ, ಮೌನೇಶ ಹಂಗರಗಿ, ಜೈಭೀಂ ಸಿದ್ನಾಳ, ವಿಶಾಲ ಕುಲಾಲಿ ಹಾಗೂ ಇತರರು ಇದ್ದರು. ಬಿವಿಎಸ್‌ ವಿದ್ಯಾರ್ಥಿಗಳು ಸ್ವಾಗತಿಸಿದರು, ಶರಣು ಬಡಿಗೇರ ನಿರೂಪಿಸಿದರು, ಶ್ರೀಹರಿ ಕರಕಿಹಳ್ಳಿ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next