Advertisement

ಮಕ್ಕಳಿಗೆ ಇನ್ನೂ ವಿತರಣೆಯಾಗಿಲ್ಲ ಸೈಕಲ್

10:11 AM Aug 14, 2019 | Naveen |

ಜೇವರ್ಗಿ: ಗ್ರಾಮೀಣ ಪ್ರದೇಶದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಲಿ ಎಂದು ಸರ್ಕಾರ ಪ್ರೌಢಶಾಲೆ ಎಂಟನೇ ತರಗತಿ ಮಕ್ಕಳಿಗೆ ಸೈಕಲ್ ವಿತರಿಸುವ ಯೋಜನೆ ಜಾರಿಗೊಳಿಸಿದೆ. ಆದರೆ ತಾಲೂಕಿನ ಶಾಲೆ ಆರಂಭವಾಗಿ 70 ದಿನಗಳಾದರೂ ಇಲ್ಲಿಯವರೆಗೂ ಮಕ್ಕಳಿಗೆ ಸೈಕಲ್ ವಿತರಣೆಯಾಗಿಲ್ಲ.

Advertisement

ಯಾವ ಉದ್ಧೇಶಕ್ಕೆ ಯೋಜನೆ ಜಾರಿಗೊಳಿಸುತ್ತಾರೋ ಅದು ಕ್ರಮಬದ್ಧವಾಗಿ, ಸಕಾಲಕ್ಕೆ ಫಲಾನುಭವಿಗಳಿಗೆ ಸಿಗದೆ ಸರ್ಕಾರದ ಬೊಕ್ಕಸಕ್ಕೆ ಹಣ ವ್ಯರ್ಥವಾಗುತ್ತಿದೆ. ಯೋಜನೆ ಜಾರಿಯಾದರೂ ಉದ್ಧೇಶ ಸಫಲವಾಗುವುದಿಲ್ಲ ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಜೇವರ್ಗಿ ಪಟ್ಟಣದ ಸುತ್ತಮುತ್ತಲಿನ ಪ್ರೌಢಶಾಲೆಗಳಿಗೆ ಸೈಕಲ್ ವಿತರಿಸಲು ಸರಕಾರಿ ಕನ್ಯಾ ಪ್ರೌಢಶಾಲೆ ಆವರಣದಲ್ಲಿ ಅದರ ಬಿಡಿ ಭಾಗಗಳನ್ನು ಜೋಡಿಸುವ ಕಾರ್ಯ ಕಳೆದ ಒಂದು ವಾರದಿಂದ ನಡೆಯುತ್ತಿದೆ. ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಆಗದೇ ಇರುವುದು ಒಂದೆರೆಡು ಶಾಲೆಗಳ ಕಥೆಯಲ್ಲ. ಎಲ್ಲ ಶಾಲೆಗಳ ವ್ಯಥೆ.

ಜೇವರ್ಗಿ ತಾಲೂಕಿನಲ್ಲಿ 42 ಸರ್ಕಾರಿ ಪ್ರೌಢಶಾಲೆಗಳು, 9 ಅನುದಾನಿತ ಪ್ರೌಢಶಾಲೆಗಳು, ಆರ್‌ಎಂಎಸ್‌ಎ 4 ಸೇರಿದಂತೆ ಒಟ್ಟು 55 ಪ್ರೌಢಶಾಲೆಗಳಿವೆ. ಸೈಕಲ್ಗಳ ಬಿಡಿ ಭಾಗಗಳನ್ನು ಜೋಡಿಸುವ ಕೆಲಸ ಪೂರ್ಣಗೊಂಡು ತಾಲೂಕಿನ ಎಲ್ಲ ಶಾಲೆ ಮಕ್ಕಳಿಗೆ ಆಗಸ್ಟ್‌ ಮಾಸಾಂತ್ಯದೊಳಗೆ ಸೈಕಲ್ ವಿತರಣೆ ಮಾಡಬಹುದು ಎಂದು ಅಂದಾಜಿಸಲಾಗಿದೆ. ಮಕ್ಕಳಿಗೆ ಸೈಕಲ್ ಕೊಡಲು ಏಕೆ ತಡವಾಯಿತು ಎಂದು ಗುತ್ತಿಗೆದಾರನನ್ನು ಕೇಳಿದರೆ, ಸರ್ಕಾರ ಟೆಂಡರ್‌ ಕರೆಯುವುದು ತಡವಾಯಿತು ಎಂದು ಉತ್ತರಿಸುತ್ತಾರೆ.

ಶಾಲೆ ಪ್ರಾರಂಭವಾದ ಕೂಡಲೇ ಪಠ್ಯಪುಸ್ತಕ, ಸಮವಸ್ತ್ರ, ಸೈಕಲ್ ನೀಡುವ ವ್ಯವಸ್ಥೆಯಾಗಬೇಕು ಎಂದು ಪೋಷಕರು ಸರ್ಕಾರ ಮತ್ತು ಶಿಕ್ಷಣ ಇಲಾಖೆಯನ್ನು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next