Advertisement

ಸಿಬ್ಬಂದಿಯಿಂದಲೇ ಜೆಟ್ ಖರೀದಿ?

01:08 AM Jun 29, 2019 | Team Udayavani |

ನವದೆಹಲಿ: ದೇಶದಲ್ಲಿ ಇದೇ ಮೊದಲ ಬಾರಿಗೆ ನಷ್ಟಕ್ಕೆ ಸಿಲುಕಿದ ಕಂಪನಿಯೊಂದನ್ನು, ಅದೇ ಕಂಪನಿಯ ಉದ್ಯೋಗಿಗಳೇ ಒಟ್ಟಾಗಿ ಖರೀದಿ ಮಾಡಲು ನಿರ್ಧರಿಸಿದ್ದಾರೆ. ನಷ್ಟದ ಸುಳಿಗೆ ಸಿಲುಕಿ ದಿವಾಳಿ ಪ್ರಕ್ರಿಯೆಗೆ ಅರ್ಜಿ ಹಾಕಿರುವ ಜೆಟ್ ಏರ್‌ವೇಸ್‌ ಕಂಪನಿಯನ್ನು ಆದಿ ಗ್ರೂಪ್‌ನ ಸಹಭಾಗಿತ್ವದೊಂದಿಗೆ ಶೇ.75ರಷ್ಟು ಪಾಲುದಾರಿಕೆಯಲ್ಲಿ ಖರೀದಿ ಮಾಡಲು ಜೆಟ್ಏರ್‌ವೇಸ್‌ ಉದ್ಯೋಗಿಗಳ ಒಕ್ಕೂಟ ನಿರ್ಧರಿಸಿದೆ. ಈ ಸಂಬಂಧ ಒಕ್ಕೂಟ ಪ್ರಕಟಣೆಯನ್ನೂ ಹೊರಡಿಸಿದೆ.

Advertisement

ವಿಮಾನಯಾನ ಸಂಸ್ಥೆಯು ಬ್ಯಾಂಕ್‌ಗಳಿಗೆ 8 ಸಾವಿರ ಕೋಟಿ ರೂ. ಸಾಲ ಮರುಪಾವತಿ ಮಾಡಬೇಕಿದೆ. ಅಲ್ಲದೆ, 25 ಸಾವಿರ ಕೋಟಿ ರೂ. ಅನ್ನು ಇತರ ವೆಂಡರುಗಳು ಹಾಗೂ ಉದ್ಯೋಗಿಗಳ ಸಂಬಳಕ್ಕೆ ಪಾವತಿಸಬೇಕಿದೆ. ದಿವಾಳಿ ಪ್ರಕ್ರಿಯೆಯ ಅಡಿಯಲ್ಲಿ ಶೇ.75ರಷ್ಟು ಪಾಲನ್ನು ಸಂಸ್ಥೆಯಲ್ಲಿ ಖರೀದಿಸಲು ನಿರ್ಧಾರ ಮಾಡಲಾಗಿದೆ. ಒಂದು ವೇಳೆ ಖರೀದಿಯಲ್ಲಿ ಯಶಸ್ವಿಯಾದರೆ, ಜೆಟ್ ಏರ್‌ವೇಸ್‌ನಲ್ಲಿ ಕೆಲಸ ಮಾಡುವ ಎಲ್ಲರೂ ಕಂಪನಿಯ ಮಾಲೀಕರಾಗುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next